
ಪ್ರಧಾನಿ ನರೇಂದ್ರ ಮೋದಿ 2014ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ವಡೋದರ ಕ್ಷೇತ್ರದ ಗೋಡೆಗಳ ತುಂಬಾ ಈಗ ಕಂಗನಾ ಕಂಗೊಳಿಸ್ತಿದ್ದಾರೆ. ವಡೋದರಾ ಕ್ಷೇತ್ರದ ಭಿತ್ತಿಯ ತುಂಬ ಬಾಲಿವುಡ್ ನಟಿ ಕಂಗನಾ ರಣಾವತ್ ಪೋಸ್ಟರ್‌ಗಳು ರಾರಾಜಿಸುತ್ತಿವೆ.
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಕರ್ತರು ಪಕ್ಷದ ಅಧ್ಯಕ್ಷ ರಾಮ್‌ದಾಸ್ ಅತ್ವಾಲೆ ಜೊತೆ ಬಾಲಿವುಡ್ ನಟಿ ಕಂಗನಾ ಇರುವ ಪೋಸ್ಟರ್‌ನ್ನು ವಡೋದರಾದ ಕಾಲಾ ಘೋಡಾ ಪ್ರದೇಶದಲ್ಲಿ ಅಂಟಿಸಿದ್ದಾರೆ.
'ಭಾರತವನ್ನು ಸಿರಿಯಾ ಎಂದವರ ಮನೆ ಒಡೆದು ಹಾಕಲಿಲ್ಲ'
ನಮ್ಮ ಪಕ್ಷದ ಮುಖ್ಯಸ್ಥ ಕಂಗನಾ ಮುಂಬೈಗೆ ಬಂದಾಗ ಬೆಂಬಲಿಸಿದ್ದರು. ನಾವು ಕಂಗನಾ ಅವರನ್ನು ಬೆಂಬಲಿಸುತ್ತೇವೆ ಎಂದು ತೋರಿಸಲು ಇಂತಹ ಪೋಸ್ಟರ್‌ಗಳನ್ನು ರಾಜ್ಯಾದ್ಯಂತ ಹಚ್ಚುತ್ತೇವೆ. ನಾವು ಮುಂದಿನ ವಡೋದರಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗೆ ಸಿದ್ಧರಾಗಿದ್ದೇವೆ ಎಂದು ಪಕ್ಷದ ಜಿಲ್ಲಾ ಅಧ್ಯಕ್ಷ ರಾಜೇಶ್ ಗೋಯಲ್ ತಿಳಿಸಿದ್ದಾರೆ.
'ಲಾಕ್ ಮಾಡಿ ಗುಪ್ತಾಂಗ ತೋರಿಸಿದ್ದಾರೆ' ಕಂಗನಾ ಬೋಲ್ಡ್ ಆರೋಪ ಯಾರ ಮೇಲೆ!
ಶಶಿವ ಸೇನಾ ಸಂಸದ ಸಂಜಯ್ ರಾವತ್ ಜೊತೆಗೆ ಕಂಗನಾ ವಾಗ್ದಾಳಿ ನಡೆದಾಗ ರಾಮ್‌ದಾಸ್ ಅತ್ವಾಲೆ ನಟಿಯ ಬೆಂಬಲಕ್ಕೆ ನಿಂತಿದ್ದರು. ಸೆ.10ರಂದು ಪಾಲಿ ಹಿಲ್‌ನ ಕಂಗನಾ ಬಂಗಲೆಯನ್ನು ಬಿಎಂಸಿ ತೆರವುಗೊಳಿಸಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.