
ಸಾಮಾಜಿಕ ಜಾಲತಾಣದಲ್ಲಿ ಮೆಗಾ ಸ್ಟಾರ್ ತಾಯಿ ಜೊತೆಗಿರುವ ಫೋಟೋ ಫುಲ್ ವೈರಲ್. ಚಿರಂಜೀವಿ ಮಾಡಿಕೊಂಡ ಮನವಿಗೆ ಸ್ಪಂದಿಸಿದ ಅಭಿಮಾನಿಗಳು.
ಇಡೀ ಭಾರತೀಯ ಚಿತ್ರರಂಗವೇ ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡ ಕಾರಣ ಸಿನಿ ತಾರೆಯರು ಹಾಗೂ ಕಿರುತೆರೆ ಕಲಾವಿದರು ತಮ್ಮ ಮನೆಯಲ್ಲಿಯೇ ಯುಗಾದಿಯನ್ನು ಸರಳವಾಗಿ ಆಚರಿಸಿದ್ದಾರೆ.
ಅಯ್ಯೋ! ಮೆಗಾಸ್ಟಾರ್ ಕೆನ್ನೆಗೆ 24 ಬಾರಿ ಹೊಡೆದ ನಟಿ!
ವಿಕಾರ ನಾಮ ಸಂವತ್ಸರ ಮುಗಿದು, ಹೊಸ ಶಾರ್ವರಿ ಸಂವತ್ಸರಕ್ಕೆ ಕಾಲಿಟ್ಟ ಈ ಯಗಾದಿಯಂದೇ ಟ್ಟಿಟ್ಟರ್ ಲೋಕಕ್ಕೆ ಕಾಲಿಟ್ಟ ಮೆಗಾ ಸ್ಟಾರ್ ಚಿರಂಜೀವಿ ತಾಯಿಯೊಂದಿಗೆ ಇರುವ ತಮ್ಮ ಮೊದಲ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಕುಟುಂಬಸ್ಥರ ಜೊತೆ ಸರಳವಾಗಿ ಯುಗಾದಿ ಆಚರಿಸಿದ್ದಾರೆ. 'ಮನೆಯಲ್ಲಿ ತಾಯಿಯ ಜೊತೆ. ನಮ್ಮ ಪೋಷಕರಿಗೆ ಹಾಗೂ ಮನೆಯಲ್ಲಿರುವ ಹಿರಿಯರ ಬಗ್ಗೆ ಹೆಚ್ಚಾಗಿ ಕಾಳಜಿ ವಹಿಸಿ ಅವರ ಅರೋಗ್ಯ ನೋಡಿಕೊಳ್ಳೋಣ. ನಿಮ್ಮ ತಂದೆ ಅಥವಾ ತಾಯಿ ಜೊತೆ ಸೆಲ್ಫೀ ತೆಗೆದುಕೊಂಡು ಶೇರ್ ಮಾಡಿ #StayHomeStaySafe #UnitedAgainstCorona' ಎಂದು ಬರೆದುಕೊಂಡಿದ್ದಾರೆ.
ಕೇವಲ 24 ಗಂಟೆಯಲ್ಲಿ 135.2k ಫಾಲೋವರ್ಸ್ ಚಿರು ಮಡಿಲಿಗೆ ಸೇರಿವೆ. ಸಹಜವಾಗಿಯೇ ಟ್ವಿಟರ್ ಈ ತೆಲುಗು ಮಹಾನ್ ನಾಯಕನ ಖಾತೆಯನ್ನು ವೆರಿಫೈಡ್ ಆಗಿದೆ. ಆ ನಂತರ 21 ದಿನಗಳ ಕಾಲ ಯಾರೂ ಕಾನೂನು ಉಲ್ಲಂಘನೆ ಮಾಡದೇ ಮನೆಯಲ್ಲಿ ಇದ್ದು ಆರೋಗ್ಯ ಕಾಪಾಡಿಕೊಳ್ಳಿ ಎಂದೂ ಚಿರಂಜೀವಿ ಮನವಿ ಮಾಡಿದ್ದಾರೆ.
ಕನ್ನಡ, ಬಾಲಿವುಡ್ ನಟರು ಸೇರಿ ಎಲ್ಲರೂ ಇಡೀ ವಿಶ್ವಕ್ಕೇ ಒಕ್ಕರಿಸಿರುವ ಈ ರೋಗದ ವಿರುದ್ಧ ಹೋರಾಡಲು ಪಣ ತೊಟ್ಟಿದ್ದಾರೆ. ಇಂಥ ಸಂದರ್ಭದಲ್ಲಿ ಜನರು ತಮ್ಮ ನೆಚ್ಚಿನ ನಟರ ಮಾತು ಕೇಳಿಯಾದರೂ ಮನೆಯಲ್ಲಿದ್ದರೆ ಸಾಕಿತ್ತು. ರೋಗ ಹರಡುವಿಕೆಯನ್ನು ತಡೆಗಟ್ಟಬಹುದಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.