ಹಿರಿಯ ನಿರ್ದೇಶಕ, ನಟ ಎಂ.ಆರ್‌. ವಿಶ್ವನಾಥನ್‌ ನಿಧನ

By Suvarna News  |  First Published Mar 24, 2020, 1:01 PM IST

ತಮಿಳು ಚಿತ್ರರಂಗದ ಹಿರಿಯ ನಟ ಹಾಗೂ ನಿರ್ದೇಶಕ ವಿಶು (74) ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಚೆನ್ನೈನಲ್ಲಿ ಕೊನೆ ಉಸಿರೆಳೆದಿದ್ದಾರೆ.
 


ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ, ಬರಹಗಾರ ನಟ ಹಾಗೂ ನಿರೂಪಕ ಎಂ.ಆರ್‌ ವಿಶ್ವನಾಥನ್‌ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೂತ್ರಪಿಂಡ ವೈಫಲ್ಯದ ಕಾರಣ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.

ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ವೇಳೆ ಹೃದಯಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ವಿಶು ಅವರ ಅಂತ್ಯಕ್ರಿಯೆಯನ್ನು ಬೇಸಂತ್‌ ನಗರ್‌ ಸ್ಮಶಾನದಲ್ಲಿ ನಡೆಸಲಾಯಿತು.

Tap to resize

Latest Videos

ವಿಶ್ವನಾಥನ್‌ ಪತ್ನಿ ಸುಂದರಿ ಹಾಗೂ ಅವರಿಗೆ ಮೂವರು ಹೆಣ್ಣು ಮಕ್ಕಳು- ಲಾವಣ್ಯ, ಸಂಗೀತಾ ಹಾಗೂ ಕಲ್ಪನಾ ಅವರನ್ನು ಅಗಲಿದ್ದಾರೆ. ಸುಮಾರು 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ 25ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.  ಹೆಚ್ಚಾಗಿ ಕೌಟುಂಬಿಕ ಪ್ರಧಾನ ಸಿನಿಮಾಗಳ ಮೂಲಕ ಹೆಸರು ಗಳಿಸಿದ್ದಾರೆ.

click me!