
ಲೈಮ್ ಲೈಟ್‌ನಲ್ಲಿರುವ ನಟಿಯರಿಗೆ ಟ್ರೋಲ್, ಬಾಡಿ ಶೇಮಿಂಗ್(Body Shaming) ವೃತ್ತಿ ಜೀವನದ ಒಂದು ಭಾಗವಾಗಿದೆ. ವಿಚಾರವನ್ನು ಎಷ್ಟೇ ಪಾಸಿಟಿವ್ ಆಗಿ ಸ್ವೀಕಾರ ಮಾಡಿದ್ದರೂ ಕಾಮೆಂಟ್‌ಗಳು ಅತೀರೇಕಕ್ಕೆ ಹೋಗುತ್ತಿದೆ. ಒಂದೆರಡು ಸಲ ವಾರ್ನಿಂಗ್ ಕೊಡುತ್ತಾರೆ ಇಲ್ಲವಾದರೆ ಸೈಬರ್ ಕ್ರೈಮ್ ಮೊರೆ ಹೋಗುತ್ತಾರೆ. ಎಲ್ಲರ ಜೀವನದಲ್ಲಿ ಇದು ಒಮ್ಮೆಯಾದರೂ ನಡೆದಿರುತ್ತದೆ. ವೃತ್ತಿ ಜೀವನದಲ್ಲಿ ಹಾಗೂ ವೈಯಕ್ತಿಕ ಜೀವನದ ವಿಚಾರವಾಗಿ ಅತಿ ಹೆಚ್ಚು ಟ್ರೋಲ್ ಆಗುತ್ತಿದ್ದ ಅಮಲಾ ಪೌಲ್(Amala Paul) ಈಗ ಕೆಟ್ಟ ಕಾಮೆಂಟ್ ಮಾಡುತ್ತಿರುವವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಮಲಾ ಸಹೋದರ ಅಭಿಜಿತ್ ಕೆಲವು ದಿನಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸ್ನೇಹಿತರೆಲ್ಲಾ ಸೇರಿ ಬ್ಯಾಚುಲರ್ ಪಾರ್ಟಿ(Bachelor party) ಆಯೋಜಿಸಿದ್ದಾರೆ. ಈ ಸಮಯದಲ್ಲಿ ಅಮಲಾ ಪೌಲ್ ಸರ್ಪ್ರೈಸ್ ಎಂಟ್ರಿ ಕೊಟ್ಟಿದ್ದಾರೆ. ಕೈಯಲ್ಲಿ ಮದ್ಯದ ಬಾಟಲ್ ಹಿಡಿದು ಇಂಗ್ಲಿಷ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ(Social Media) ಆಕ್ಟೀವ್ ಆಗಿರುವ ಅಮಲಾ ಎಲ್ಲಾ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋಗಳು ನೋಡಲು ಸಖತ್ ಹಾಟ್ ಆಗಿದ್ದು ನೆಟ್ಟಿಗರು ಹಿಗ್ಗಾಮುಗ್ಗಾ ಕಾಮೆಂಟ್ ಮಾಡಿದ್ದಾರೆ.
'ಅಮಲಾ ಕುಂಡಿ ಅಲುಗಾಡಿಸುತ್ತಿರುವುದನ್ನು ನೋಡಿದರೆ ಆಕೆ ಇವತ್ತು ರಾತ್ರಿ ಬೇಕು ಎಂದು ಹೇಳುತ್ತಿರುವ ಹಾಗಿದೆ' ಎಂದು ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದಾರೆ. ಹೌದು! ನೀನು ಸೂಪರ್ ಆಗಿ ಅರ್ಥ ಮಾಡಿಕೊಂಡಿದ್ಯಾ ಬೇಬಿ ಎಂದು ಅಮಲಾ ಉತ್ತರ ಕೊಟ್ಟಿದ್ದಾರೆ. ಅದು ಲೆಜೆಂಡ್‌ಗೆ ಮಾತ್ರ ಕಾಣುತ್ತದೆ ಎಂದು ಖಾಸಗಿ ಅಂಗದ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಇದಕ್ಕೂ ಅಮಲಾ ' ಹೇಗ ದಡ್ಡಾ ನೀನು 2020ರಲ್ಲಿ ಇರುವುದು ಎಚ್ಚೆತ್ತುಕೋ ಎಂದು ವಾರ್ನ್ ಮಾಡಿದ್ದಾರೆ. ಅಮಲಾ ಕೊಟ್ಟ ಉತ್ತರ, ಈ ಕಾಮೆಂಟ್‌ಗಳು ವೈರಲ್(Viral) ಆಗುತ್ತಿದೆ.
ಇನ್ನು ಕೊರೋನಾ ವೈರಸ್ ಮೊದಲನೇ ಲಾಕ್‌ಡೌನ್ ವೇಳೆ ನಟಿ ಅಮಲಾ ಸ್ನೇಹಿತನ ಬರ್ತ್‌ಡೇ ಸೆಲೆಬ್ರೇಷನ್(Birthday celebration) ಹಾಗೂ ಪಾರ್ಟಿ ಮಿಸ್ ಮಾಡಿಕೊಳ್ಳುತ್ತಿರುವೆ. ಹೀಗಾಗಿ ವಿಡಿಯೋ ಕಾಲ್(Video call) ಮೂಲಕ ಮನೆಯಲ್ಲಿಯೇ ಪಾರ್ಟಿ ಮಾಡುತ್ತಿರುವೆ ಎಂದು ಕುಣಿದು ಕುಪ್ಪಳಿಸುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಜನರು ನರಳಾಡಿ ಸಾಯುತ್ತಿದ್ದರೂ ಡೋಂಟ್ ಕೇರ್ ಎಂದು ವರ್ತಿಸುತ್ತಿರುವ ರೀತಿ ಸರಿ ಅಲ್ಲ ಎಂದು ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದರು.
2011ರಲ್ಲಿ ದೈವ ತಿರುಮಗಳ್(Deiva Thirumagal) ಸಿನಿಮಾ ಚಿತ್ರೀಕರಣದ ವೇಳೆ ವಿಜಯ್(Vijay) ಹಾಗೂ ಅಮಲಾ ನಡುವೆ ಪ್ರೇಮ್ ಅರಳಿತ್ತು. ಮೂರು ವರ್ಷಗಳ ಕಾಲ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಆದರೆ ವೈಮನಸ್ಸಿನಿಂದ ಇಬ್ಬರ ಮದುವೆಯಾಗಿ ಎರಡೇ ವರ್ಷಗಳಲ್ಲಿ ವಿಚ್ಛೇದನ(Divorce) ಪಡೆದುಕೊಂಡರು. 2019 ಜುಲೈ 11ರಂದು ವಿಜಯ್, ಐಶ್ವರ್ಯ ಎಂಬುವರ ಜೊತೆ ಅರೇಂಜ್ ಮ್ಯಾರೇಜ್ (Arranged marriage) ಆದರು. ಮೇ 31 2020ರಲ್ಲಿ ಗಂಡು ಮಗುವಿಗೆ ತಂದೆ ಆಗಿದ್ದಾರೆ. ವಿಜಯ್ ವೈಯಕ್ತಿಕ ಜೀವನ ಅರಳುತ್ತಿದೆ ನಿಮ್ಮದು ಬಾಡುತ್ತಿದೆ ಎಂದು ನೆಟ್ಟಿಗರು ಅಮಲಾ ಜೀವನದ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.