ಸಮಂತಾ ಹಾಗೂ ನಾಗ ಚೈತನ್ಯರ ಡಿವೋರ್ಸ್ ವಿಚಾರ ಸುದ್ದಿಯಾಗುತ್ತಿದ್ದಂತೆ ಅದಕ್ಕೆ ಸಂರ್ಂಧಿಸಿದ ಬಹಳಷ್ಟು ಘಟನೆಗಳೂ ನಡೆಯುತ್ತಿವೆ. ಇತ್ತೀಚೆಗೆ ನಡೆದ ಕೆಲವು ಘಟನೆಗಳಂತೂ ಈಗಿರುವ ವಿಚ್ಚೇದನೆ ಸುದ್ದಿಗೆ ಪೂರಕವಾಗಿದೆ. ಸ್ವಲ್ಪ ಸಮಯದ ಹಿಂದೆಯಷ್ಟೇ ನಾಗ ಚೈತನ್ಯ ಸಮಂತಾ ಜೊತೆಗಿದ್ದ ಮನೆಬಿಟ್ಟು ತಂದೆಯ ಮನೆಗೆ ಶಿಫ್ಟ್ ಆಗಿದ್ದರು. ಇತ್ತ ಸಮಂತಾ ಕೂಡಾ ಮುಂಬೈಗೆಶಿ ಫ್ಟ್ ಆಗುತ್ತಾರೆ ಎನ್ನಲಾಗಿತ್ತು. ಈ ಬಗ್ಗೆ ಜೋಡಿಯೂ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿರುವುದು ವಿಚ್ಚೇದನೆ ಸುದ್ದಿಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟಿದೆ.
ಸಮಂತಾ ನಾಗರ್ಜುನ ಅವರ ಬರ್ತ್‌ಡೇ ಪಾರ್ಟಿ ಮಿಸ್ ಮಾಡಿಕೊಂಡಿದ್ದು, ಟ್ವಿಟ್‌ನಲ್ಲಿ ನಾಗರ್ಜುನ(Nagarjuna) ಎಂದು ಪೋಸ್ಟ್ ಮಾಡಿ ನಂತರ ಡಿಲೀಟ್ ಮಾಡಿ ಮಾವ ನಾಗರ್ಜುನ ಅಂತ ಮಾಡಿದ್ದು ಇವೆಲ್ಲವೂ ಚಿಕ್ಕಪುಟ್ಟ ಎಡವಟ್ಟುಗಳು. ಜೋಡಿಯೂ ಪರೋಕ್ಷವಾಗಿ ತಾವು ದೂರವಾಗುತ್ತಿರೋ ಸೂಚನೆ ಕಂಡುಬರುತ್ತಿದೆ.
ನಾಗಚೈತನ್ಯ ಅವರ ಲವ್‌ಸ್ಟೋರಿ(Love Story) ಸಿನಿಮಾ ರಿಲೀಸ್ ಖುಷಿಯಲ್ಲಿದ್ದಾರೆ. ಈ ನಡುವೆ ಸಿನಿಮಾ ಪ್ರಮೋಷನನ್‌ನಲ್ಲಿ ಮಾತನಾಡಿದ ನಾಗಚೈತನ್ಯ ತಮ್ಮ ದಾಂಪತ್ಯ ಕುರಿತು ಕೇಳಿ ಬರುತ್ತಿರುವ ಸುದ್ದಿಗಳು ನೋವು ಕೊಡುತ್ತಿದೆ ಎಂದಿದ್ದಾರೆ. ಇದು ಕಪಲ್ ಕಡೆಯಿಂದ ಬಂದ ಮೊದಲ ಪ್ರತಿಕ್ರಿಯೆ.
ವಿಚ್ಚೇದನೆ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯಿಸಿದ ನಾಗಚೈತನ್ಯ..!
ಸಮಂತಾ ಮತ್ತು ನಾಗಚೈತನ್ಯ ಇದರ ಬಗ್ಗೆ ಏನನ್ನೂ ಹೇಳದಿದ್ದರೂ, ಅವರು ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗೆ, ಅಮೀರ್ ಖಾನ್(Amir Khan) ತನ್ನ ‘ಲಾಲ್ ಸಿಂಗ್ ಚಡ್ಡಾ’ ಸಹನಟ ನಾಗನ ಚಿತ್ರ ‘ಲವ್ ಸ್ಟೋರಿ’ಯನ್ನು ಬೆಂಬಲಿಸಲು ಹೈದರಾಬಾದ್‌ಗೆ(Hyderabad) ಭೇಟಿ ನೀಡಿದ್ದರು.
ಕಾರ್ಯಕ್ರಮದ ನಂತರ ನಾಗಚೈತನ್ಯ ಮತ್ತು ಅವರ ತಂದೆ ನಾಗಾರ್ಜುನ ತಮ್ಮ ನಿವಾಸದಲ್ಲಿ ಅಮೀರ್‌ಗಾಗಿ ಔತಣಕೂಟವನ್ನು ಆಯೋಜಿಸಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಫೋಟೋ ಮತ್ತೆ ಚರ್ಚೆಯಾಗುತ್ತಿದೆ. ಈ ಗ್ರ್ಯಾಂಡ್ ಡಿನ್ನರ್‌ನಲ್ಲಿ ಸಮಂತಾ ಅನುಪಸ್ಥಿತಿಯೇ ಈ ಚರ್ಚೆಗೆ ಕಾರಣ. ಇದು ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ. ಅವಳು ಡಿನ್ನರ್‌ನಲ್ಲಿ ಕಾಣಲಿಲ್ಲ. ಇದು ವಿಚ್ಚೇದನೆ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.
ಲಾಲ್ ಸಿಂಗ್ ಚಡ್ಡಾದಲ್ಲಿ ತನ್ನ ಮಗನ ಪಾತ್ರವನ್ನು 'ಬಾಲ ರಾಜು' ಎಂದು ಕರೆಯಲಾಗಿದೆ ಎಂದು ಅರಿತುಕೊಂಡ ನಂತರ ಡಿನ್ನರ್‌ನಲ್ಲಿ ನಾಗಾರ್ಜುನ ಭಾವುಕರಾದರು. ಅವರು ಸಂತೋಷದಿಂದ ಆಶ್ಚರ್ಯಗೊಂಡಿರುವುದರ ಜೊತೆಗೆ ಭಾವುಕರಾಗಿದ್ದರು. ಏಕೆಂದರೆ ಅದೇ ಹೆಸರಿನ ಚಿತ್ರದಲ್ಲಿ ಅವರದೇ ತಂದೆ ನಿರ್ವಹಿಸಿದ ಒಂದು ಅಪ್ರತಿಮ ಪಾತ್ರದ ಹೆಸರು - 'ಬಾಲರಾಜು'.
ಮಾವನ ವಿಡಿಯೋ ಬಗ್ಗೆ ಟ್ಟೀಟ್ ಮಾಡಿದ ಸಮಂತಾ!
ಇವೆಲ್ಲದರ ಮಧ್ಯೆ ನಾಗಚೈತನ್ಯ ಇತ್ತೀಚೆಗೆ ತನ್ನ ಚಿತ್ರದ ಪ್ರಚಾರದ ಸಮಯದಲ್ಲಿ ನಡೆಯುತ್ತಿರುವ ವದಂತಿಗಳ ಬಗ್ಗೆ ಮಾತನಾಡಿದ್ದಾರೆ. ತನ್ನ ಜೀವನದ ಬಗ್ಗೆ ಪ್ರತಿ ನಿಮಿಷದ ನಿಮಿಷದ ಕವರೇಜ್ ಮಾಡಿದಾಗ ಯಾವುದೇ ನಟನಿಗೆ ತುಂಬಾ ನೋವಾಗುತ್ತದೆ ಎಂದು ಅವರು ಹೇಳಿದ್ದಾರೆ. ನಾಗ ಲಾಲ್ ಸಿಂಗ್ ಚಡ್ಡಾದಲ್ಲಿ ಸೇನಾ ಅಧಿಕಾರಿಯಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಕರೀನಾ ಕಪೂರ್ ಖಾನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದನ್ನು ಕ್ರಿಸ್‌ಮಸ್‌ಗೆ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.