ವೈರಲ್ ಆಯ್ತು ನಟ Allu Sirish ಮತ್ತು ನಟ Anu Emmanuel ರೊಮ್ಯಾಂಟಿಕ್ ಫೋಟೋ!

Suvarna News   | Asianet News
Published : Jan 02, 2022, 03:23 PM IST
ವೈರಲ್ ಆಯ್ತು ನಟ Allu Sirish ಮತ್ತು ನಟ Anu Emmanuel ರೊಮ್ಯಾಂಟಿಕ್ ಫೋಟೋ!

ಸಾರಾಂಶ

ಅಲ್ಲು ಅರ್ಜುನ್ ಸಹೋದರನ ರೊಮ್ಯಾನ್ಸ್‌ ಫೋಟೋ ವೈರಲ್. ನಿಜಕ್ಕೂ ರಿಲೇಶನ್‌ಶಿಪ್‌ನಲ್ಲಿದ್ದಾರಾ?

ಟಾಲಿವುಡ್ (Tollywood) ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಸಹೋದರ ಅಲ್ಲು ಸಿರಿಶ್ (Allu Sirish) ಮತ್ತು ನಟಿ ಅನು ಇಮ್ಯಾನುಯೆಲ್ ( Anu Emmanuel) ಜೋಡಿಯಾಗಿ ಪ್ರೇಮ ಕಾಡಂತ (Prema Kadanta) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮೊದಲ ಬಾರಿ ಇವರಿಬ್ಬರೂ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಫ್ರೆಶ್‌  ಫೇಸ್‌ ಅನ್ನು ಜನರು ಮೆಚ್ಚಿಕೊಂಡಿದ್ದಾರೆ. ಚಿತ್ರದ ಫಸ್ಟ್‌ ಪೋಸ್ಟರ್‌ ರಿಲೀಸ್ ಆಗಿದ್ದು, ಸಖತ್ ವೈರಲ್ ಆಗಿತ್ತು. 

ಟೈಟಲ್ ಮತ್ತು ಪೋಸ್ಟರ್ ಲುಕ್ ನೋಡಿದರೆ, ಇದೊಂದು ಕಂಪ್ಲೀಟ್‌ ರೊಮ್ಯಾಂಟಿಕ್ (Romantic film) ಎಂಟರ್ನೈನರ್‌ ಸಿನಿಮಾ ಎಂದು ಗೊತ್ತಾಗುತ್ತದೆ. ಆದರೆ ಪೋಸ್ಟರ್ ಹೊರತು ಪಡಿಸಿ ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ (Social Media) ಹಂಚಿಕೊಂಡಿರುವ ಫೋಟೋ ಗಾಸಿಪ್ ಸೃಷ್ಟಿಸಿದೆ. ಕನ್ನಡಿ ಮುಂದೆ ನಿಂತು ಅನು ಫೋಟೋ ಕ್ಲಿಕ್ ಮಾಡುತ್ತಿದ್ದರೆ, ಹಿಂದಿನಿಂದ ಸಿರಿಶ್ ತಬ್ಬಿಕೊಂಡು ಮುತ್ತಿಡುತ್ತಿದ್ದಾರೆ. ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ಗಾಸಿಪ್ ಪ್ರಕಾರ ಇವರಿಬ್ಬರೂ ಸಿನಿಮಾದಲ್ಲಿ ಮಾತ್ರವಲ್ಲದೇ ರಿಯಲ್ ಲೈಫ್‌ನಲ್ಲೂ ಡೇಟಿಂಗ್ ಮಾಡ್ತಿದ್ದಾರೆ ಎನ್ನಲಾಗಿದೆ. 

ಕ್ರಿಸ್ಮಸ್ (Christmas) ಹಬ್ಬದ ದಿನವೂ ಸಿರಿಶ್‌ ಸ್ಪೆಷಲ್ ಕೇಕ್‌ ಅನ್ನು ಅನು ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಕೇಕ್‌ ಫೋಟೋ ಹಂಚಿಕೊಂಡ ಅನು ಧನ್ಯವಾದಗಳನ್ನು ಹೇಳಿದ್ದರು. 'ನನ್ನ ಪ್ರೀತಿಯ ಕೋ-ಸ್ಟಾರ್‌ಗೆ ಕ್ರಿಸ್ಮಸ್‌ ಶುಭಾಶಯಗಳು,' ಎಂದು  ಕೇಕ್ ಮೇಲೆ ಬರೆಯಲಾಗಿತ್ತು. 

ಪ್ರೇಮ ಕಾಡಂತ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು ಪೋಸ್ಟ್‌ ಪ್ರೊಡಕ್ಷನ್ ಕೆಲಸಗಳನ್ನು ಶುರು ಮಾಡಿದ್ದಾರೆ. ಅನೂಪ್ ರೂಬೆನ್ಸ್ ಸಂಗೀತ ನಿರ್ದೇಶನ ಮಾಡುತ್ತಿದ್ದು, ತನ್ವೀರ್ ಮಿರ್ ಸಿ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಶ್ರೀ ತಿರುಮಲ ಪ್ರೊಡಕ್ಷನ್‌ ನಿರ್ಮಾಣ ಮಾಡುತ್ತಿದೆ. 

ಡಿಲೀಟ್ ಆದ ದೃಶ್ಯ ಬಿಡುಗಡೆ ಮಾಡಿದ Pushpa ತಂಡ, ವಿಡಿಯೋ ನೋಡಲು ಮುಗಿಬಿದ್ದ ಜನ!

ಅನು ಇಮ್ಯಾನುಯೆಲ್ ಮೂಲತಃ ಅಮೆರಿಕಾದವರಾಗಿದ್ದು, ತೆಲುಗು, ತಮಿಳು ಮತ್ತು ಮಲಯಾಳಂ ಸಿನಿರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಡಾಲಿ ಧನಂಜಯ್ (Dolly Dhananjay) ಜೊತೆ ರತ್ನನ್ ಪ್ರಪಂಚ ಸಿನಿಮಾದಲ್ಲಿಯೂ ನಟಿಸಿರುವ ರೆಬಾ ಮೋನಿಕಾ ಜಾನ್‌ (Reba Monica John) ಮತ್ತು ಅನು ಸಹೋದರಿಯರು. 2016ರಲ್ಲಿ ಆ್ಯಕ್ಷನ್ ಹೀರೋ ಬಿಜು ಸಿನಿಮಾದಿಂದ ಬಣ್ಣದ ಲೋಕದ ಜರ್ನಿ ಶುರು ಮಾಡಿದ ಅನು ಈವರೆಗೂ 12 ಸಿನಿಮಾಗಳಲ್ಲಿ ನಟಿಸಿದ್ದಾರೆ. 

Allu Arjun Thanks Samantha: ಸಮಂತಾ ನಂಬಿಕೆಗೆ ಸ್ಪೆಷಲ್ ಥ್ಯಾಂಕ್ಸ್ ಹೇಳಿದ ಅಲ್ಲು

ಇನ್ನು ಅಲ್ಲು ಅರ್ಜುನ್‌ಗೆ ಹೋಲಿಸಿದ್ದರೆ ಸಿರಿಶ್ ಹಿಟ್‌ ಸಿನಿಮಾಗಳನ್ನು ನೀಡಿಲ್ಲ. ಫ್ಯಾಮಿಲಿ ಬ್ಯುಸಿನೆಸ್ ಮತ್ತು ಸೆಲೆಬ್ರಿಟಿಗಳ ಜೊತೆ ಮೋಜು ಮಸ್ತಿ ಮಾಡುವುದನ್ನು ಮಾತ್ರ ನೋಡಬಹುದು. 1990 ಮತ್ತು 1995ರಲ್ಲಿ ಹಿಂದಿ ಮತ್ತು ತೆಲುಗು ಸಿನಿಮಾದಲ್ಲಿ ಬಾಲನಟನಾಗಿ ಕಾಣಿಸಿಕೊಂಡ ನಂತರ, ನಟನಾಗಿ ಲಾಂಚ್ ಆಗಿದ್ದು 2013ರಲ್ಲಿ ಬಿಡುಗಡೆಯಾದ ಗೌರಮ್ಮ ಸಿನಿಮಾದಿಂದ. ಈವರೆಗೂ 6 ಸಿನಿಮಾಗಳಲ್ಲಿ ನಟಿಸಿರುವ ಸಿರಿಶ್ ಚಿತ್ರವೂ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಮುಟ್ಟಿಲ್ಲ ಎನ್ನಬಹುದು. ಇದರ ಜೊತೆ ಹಿಂದಿ ಮ್ಯೂಸಿಕ್‌ ಅಲ್ಬಂನಲ್ಲಿ ಕಾನಿಸಿಕೊಂಡಿದ್ದಾರೆ. ಸಿನಿಮಾ ಕ್ಷೇತ್ರ ಹಿಟ್ ಕೊಡದ ಸಮಯದಲ್ಲಿ ಕಿರುತೆರೆ ಅವಾರ್ಡ್‌ ಶೋಗಳನ್ನೂ ನಿರೂಪಣೆ ಮಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?
'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!