
ಮಾಲಿವುಡ್ (Mollywood) ಸೂಪರ್ ಸ್ಟಾರ್ ಮೋಹನ್‌ಲಾಲ್ (Mohanlal) ಹೊಸ ವರ್ಷದಂದು ತಮ್ಮ ಮುಂದಿನ ಬಹುನಿರೀಕ್ಷಿತ ಚಿತ್ರದ ಲುಕ್ ಶೇರ್ ಮಾಡಿಕೊಂಡಿದ್ದಾರೆ. ಚಿತ್ರಕ್ಕೆ ಬರೋಜ್: ಗಾರ್ಡಿಯನ್ ಆಫ್ ಡಿ'ಗಾಮಾಸ್ ಟ್ರೆಷರ್ (Barroz: Guardian of D'Gama's Treasure) ಎಂದು ಶೀರ್ಷಿಕೆ ನೀಡಲಾಗಿದೆ. ಇದೇ ಮೊದಲ ಬಾರಿ ಮೋಹನ್‌ಲಾಲ್ 3D ಸಿನಿಮಾದಲ್ಲಿ ನಟಿಸುತ್ತಿರುವುದು ಎಂಬುವುದು ಮತ್ತೊಂದು ವಿಶೇಷ.
'ಮೈ ಡಿಯರ್ ಕುಟ್ಟಿಚಾತನ್' (My Dear Kuttichathan) ಖ್ಯಾತಿಯ ನಿರ್ದೇಶಕ ಜಿಜೋ ಪುನ್ನೂಸ್ (Jijo Punnoose) ಇದೊಂದು 3D ಫ್ಯಾಂಟಸಿ ಪ್ರಾಜೆಕ್ಟ್ ಎಂದಿದ್ದಾರೆ. ಅಲ್ಲದೇ ಇದು ಮಾಲಿವುಡ್‌ನಲ್ಲಿ ಅತಿ ಹೆಚ್ಚು ಬಂಡವಾಳ ಹಾಕಿ ಮಾಡುತ್ತಿರುವ ಸಿನಿಮಾ ಎಂದು ಕೂಡ ತಿಳಿಸಿದ್ದಾರೆ. ಈ ಚಿತ್ರದಲ್ಲಿ ಮೋಹನ್‌ಲಾಲ್ ಬರೋಜ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶತಮಾನಗಳಿಂದ ವಾಸ್ಕೋಡಿಗಾಮನ (Vasco Da Gama) ಅಮೂಲ್ಯವಾದ ನಿಧಿಯನ್ನು (Treasure) ಕಾಪಾಡಿಕೊಂಡು ಬಂದಿರುವ ಮತ್ತು ಅವನ ನಿಜವಾದ ಉತ್ತರಾಧಿಕಾರಿಗಾಗಿ ಕಾಯುತ್ತಿರುವ ದೆವ್ವದ (Ghost) ಪಾತ್ರವೇ ಬರೋಜ್ ಎನ್ನಲಾಗಿದೆ.
61 ವರ್ಷದ ಹ್ಯಾಂಡ್ಸಮ್ ನಟ ಟ್ವಿಟರ್‌ನಲ್ಲಿ ಬರೋಜ್ ಫಸ್ಟ್ ಲುಕ್ ಫೋಟೋ ಹಂಚಿಕೊಂಡಿದ್ದಾರೆ. ಬರೋಜ್ ಸಿಂಹಾಸನದ (Throne) ಮೇಲೆ ಕುಳಿತುಕೊಂಡಿದ್ದಾರೆ. ತಲೆ ಫುಲ್ ಶೇವ್ (Bald Look) ಅಗಿದೆ. ಹೀಗಾಗಿ ನಿಜಕ್ಕೂ ಮೋಹನ್‌ಲಾಲ್ ಬಾಲ್ಡ್ ಲುಕ್ ಆಯ್ಕೆ ಮಾಡಿಕೊಂಡಿದ್ದಾರಾ? ಎಂದು ಅಭಿಮಾನಿಗಳಿಗೆ ಶಾಕ್ ಆಗಿದೆ. ಈ ಲುಕ್ ಬಗ್ಗೆ ಮಾಲಿವುಡ್‌ನಲ್ಲಿ ಮಿಶ್ರ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಕೆಲವು ಮೂಲಗಳಿಂದ ತಿಳಿದು ಬಂದ ಮಾಹಿತಿ ಪ್ರಕಾರ, ಚಿತ್ರದಲ್ಲಿ ಮಲಯಾಳಂ ಹಿರಿಯ ನಟ ಪ್ರತಾಪ್ ಫೋಥೆನ್ (Prathap Pothen) ಜೊತೆಗೆ ಸ್ಪ್ಯಾನಿಷ್ ತಾರೆ ಪಾಜ್ ವೇಗಾ (Paz Vega) ಮತ್ತು ರಾಫೆಲ್ ಅಮರ್ಗೋ (Rafael Amargo) ಕೂಡ ನಟಿಸಲಿದ್ದಾರೆ. ಈ ವರ್ಷ ಮಾರ್ಚ್ ತಿಂಗಳಿನಲ್ಲಿ ಸಿನಿಮಾ ಬಿಡುಗಡೆ ಸಾಧ್ಯತೆಗಳಿವೆ ಎಂದು ತಂಡ ತಿಳಿಸಿದೆ. ಬರೋಜ್ ಲುಕ್ ಮಾತ್ರವಲ್ಲದೆ, ಈ ವರ್ಷ ಕೈಯಲ್ಲಿರುವ ಎರಡು ಸಿನಿಮಾಗಳು ಲುಕ್ ಮತ್ತು ಹೆಸರು ಹಂಚಿಕೊಂಡಿದ್ದಾರೆ.
ಮಾನ್ಟರ್ (Monster) ಮತ್ತು ಅಲೋನ್ (Alone) ಸಿನಿಮಾದಲ್ಲಿ ಮೋಹನ್ ನಟಿಸುತ್ತಿದ್ದಾರೆ. ಮಾನ್ಟರ್ ಸಿನಿಮಾವನ್ನು ವೈಶಾಖ್ (Vysakh) ನಿರ್ದೇಶನ ಮಾಡುತ್ತಿದ್ದಾರೆ. 2016ರ ನಂತರ ಈ ಜೋಡಿ ಮತ್ತೆ ಒಂದಾಗಿದೆ. ಅಲೋನ್ ಸಿನಿಮಾವನ್ನು ಶಾಜಿ ಕೈಲಾಸ್ (Shaji Kailas) ನಿರ್ದೇಶನ ಮಾಡುತ್ತಿದ್ದಾರೆ. ಇವರಿಬ್ಬರು 12 ವರ್ಷಗಳ ನಂತರ ಒಂದಾಗುತ್ತಿದ್ದಾರೆ.
ಮೋಹನ್ ಲಾಲ್ ಪಾತ್ರ ಆಯ್ಕೆಗಳ ಬಗ್ಗೆ ಅಭಿಮಾನಿಗಳಿಗೆ ಹೆಮ್ಮೆ ಇದೆ. ವಯಸ್ಸಿಗೆ ಮೀರಿದ ಪ್ರಯತ್ನ ಹಾಗೂ ವಿಭಿನ್ನ ಪಾತ್ರಗಳಾಗಿರುತ್ತವೆ. ಆದರೆ ತಲೆಯಲ್ಲಿ ಕೂದಲಿಲ್ಲದ ಲುಕ್ ನೋಡುವುದಕ್ಕೆ ಕೊಂಚ ಡಿಫರೆಂಟ್ ಆಗಿದೆ. ನೀವು ನಿಜಕ್ಕೂ ಶೇವ್ ಮಾಡಿದ್ದೀರಾ ಅಥವಾ ಮೇಕಪಾ (MakeUp) ಗೊತ್ತಿಲ್ಲ. ಆದರೆ ನಮಗೆ ನೀವು ಮಾಸ್ ನಟನಾಗಬೇಕು. ಇಲ್ಲವೇ ಲವರ್ ಬಾಯ್ ಆಗಬೇಕು. ಈ ರೀತಿ ಕಾರ್ಟೂನ್ ವ್ಯಕ್ತಿಯಾದರೆ ಹೇಗೆ ನೋಡುವುದು ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ನಮ್ಮ ಬಾಲ್ಯವನ್ನು ನೀವು ಅದ್ಭುತವಾಗಿಸಿದ್ದೀರಿ. ಹೀಗೆ ನಮ್ಮ ಮಕ್ಕಳು ಕೂಡ ನಿಮ್ಮ ಸಿನಿಮಾ ನೋಡುತ್ತಲೇ ಬೆಳಯಬೇಕು ಎಂದಿದ್ದಾರೆ. ಮೋಹನ್‌ಲಾಲ್ ಸಿನಿಮಾ ಮಾಡುತ್ತಾರೆ ಅಂದ್ರೆ ನಿರ್ದೇಶಕರು ಮತ್ತು ನಿರ್ಮಾಪಕರು ಲೈನ್‌ನಲ್ಲಿ ನಿಲ್ಲುತ್ತಾರೆ. ಆದರೆ ಯಾವ ಕಾರಣಕ್ಕೆ ಈ 3D ಸಿನಿಮಾ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ರಿವೀಲ್ ಮಾಡಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.