ಮಾಜಿ ನಕ್ಸಲರ ಬಲೆಯಲ್ಲಿ ಸಾಯಿ ಪಲ್ಲವಿ?

Published : Nov 01, 2019, 10:52 AM IST
ಮಾಜಿ ನಕ್ಸಲರ ಬಲೆಯಲ್ಲಿ ಸಾಯಿ ಪಲ್ಲವಿ?

ಸಾರಾಂಶ

  'ಫಿದಾ' ಹಾಗೂ 'ಎಂಸಿಎ' ಚಿತ್ರಗಳ ಮೂಲಕ ಟಾಲಿವುಡ್ ಸೆನ್ಸೇಷನಲ್ ಕ್ವೀನ್ ಸಾಯಿ ಪಲ್ಲವಿ ಈಗ ಮಾಜಿ ನಕ್ಸಲ್‌ ಲೀಡರ್‌ ಕೈಯಲ್ಲಿ ಸಿಲುಕಿಕೊಂಡಿದ್ದಾರೆ. ಸೈಲೆಂಟ್‌ ಹುಡುಗಿ ಬಾಳಲ್ಲಿ ಏನಿದು ರಾಮಾಯಣ ಇಲ್ಲಿದೆ ನೋಡಿ.....?  

 

ದಕ್ಷಿಣ ಭಾರತದ ಒನ್‌ ಆ್ಯಂಡ್ ಒನ್ಲಿ 'ಮಲರ್' ಉರ್ಫ್‌ ಸಾಯಿ ಪಲ್ಲವಿ ಆಯ್ಕೆ ಮಾಡಿಕೊಳ್ಳುವ ಪಾತ್ರಗಳೇ ವಿಭಿನ್ನ. ಚಿತ್ರಕ್ಕೆ ಅವಶ್ಯಕತೆ ಇದ್ದರೆ ಯಾವ ಮಟ್ಟಕ್ಕೆ ಬೇಕಾದರೂ ಸಿದ್ಧತೆ ಮಾಡಿಕೊಳ್ಳುತ್ತಾರೆಂಬುದನ್ನು ಈಗಾಗಲೇ ಹಲವು ಚಿತ್ರಗಳ ಮೂಲಕ ಅವರು ಸಾಬೀತು ಪಡಿಸಿದ್ದಾರೆ. ಅಲ್ಲದೇ ಪಾತ್ರಗಳನ್ನು ಚೂಸ್ ಮಾಡಿಕೊಳ್ಳುವಾಗಲೂ ತುಂಬಾ ಹುಷಾರಾಗಿರುತ್ತಾರೆ. ಸಮಾಜವನ್ನು ಮಿಸ್‌ಲೀಡ್ ಮಾಡುವ ಎಂಥದ್ದೇ ಯೋಜನೆಯಾದರೂ, ಎಷ್ಟು ದುಡ್ಡು ಸಿಗುತ್ತೆ ಎಂದರೂ ಒಪ್ಪೋಲ್ಲ ಸಾಯಿ ಪಲ್ಲವಿ. ಆ ಮೂಲಕ ನಟಿಯಾಗಿ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಜಗಜ್ಜಾಹೀರುಗೊಳಿಸಿದ ಪ್ರಬುದ್ಧ ನಟಿ ಇವರು. ಅದಕ್ಕೆ ಅವರನ್ನು ತೆರೆ ಮೇಲೆ ಕಾಣುವುದೂ ಅಷ್ಟು ಸುಲಭವಲ್ಲ.

ಪ್ರೇಮಂ ನಟಿ 2 ಕೋಟಿ ರೂ. ಆ್ಯಡ್ ರಿಜೆಕ್ಟ್ ಮಾಡಿದ್ದು ಇದಕ್ಕಂತೆ!

 

ಏನಪ್ಪಾ! ಇಷ್ಟೊಂದು ದಿನ ಆಯ್ತು ಸಾಯಿ ಪಲ್ಲವಿಯನ್ನು ತೆರೆ ಮೇಲೆ ಕಂಡೇ ಇಲ್ಲ, ಏನ್ ಮಾಡ್ತಿದ್ದಾರೆ ಈ ನಟಿ ಎಂದು ಉತ್ತರವಿಲ್ಲದೆ ಕುಳಿತಿದ್ದ ಅಭಿಮಾನಿಗಳನ್ನು ಬೆಚ್ಚು ಬೀಳಿಸುವ ಸುದ್ದಿಯನ್ನು ಹೊರ ಬಂದಿದೆ.

 

ಹೌದು! 'ವಿರಾಟ ಪರ್ವಂ 1992 ' ಚಿತ್ರದಲ್ಲಿ ಉತ್ತಮ ಗಾಯಕಿಯಾಗಿ ಕಾಣಿಸಿಕೊಂಡು ಕಾರಣಾಂತರಗಳಿಂದ ನಕ್ಸಲೈಟ್‌ ಆಗುತ್ತಾರೆ. ಚಿತ್ರಕ್ಕಾಗಿಯೇ ಶೂಟಿಂಗ್‌ ಹಾಗೂ ಬಾಂಬ್ ಬಳಸುವುದನ್ನು ಕಲಿಯಲು ಎಕ್ಸ್ ನಕ್ಸಲ್ ಮುಖಂಡನೊಂದಿಗೆ ತರಬೇತು ಪಡೆಯುತ್ತಿದ್ದಾರೆ, ಎಂಬ ಮಾತುಗಳು ಕೇಳಿ ಬರುತ್ತಿವೆ..

Rowdy Baby ಸಾಯಿ ಪಲ್ಲವಿಗಿದೆ ಈ ರೇರ್ ಟ್ಯಾಲೆಂಟ್!

 

'ವಿರಾಟ ಪರ್ವಂ 1992' ಚಿತ್ರಕ್ಕೆ ವೇಣು ಆ್ಯಕ್ಷನ್ ಕಟ್‌ ಹೇಳಲಿದ್ದು, 'ಬಾಹುಬಲಿ'ಯ ಬಲ್ಲಾಳ ದೇವನ ಖ್ಯಾತಿಯ ರಾಣಾ ದಗ್ಗುಬಾಟಿ ಪೊಲೀಸ್‌ ಪಾತ್ರದಲ್ಲಿ ಮಿಂಚಲಿದ್ದಾರೆ.

 

ಸಾಯಿ ಪಲ್ಲವಿ ಪಾತ್ರದ ಲುಕ್‌ ಎಲ್ಲಿಯೂ ರಿವೀಲ್ ಮಾಡದ ಚಿತ್ರ ತಂಡ ಸಸ್ಪೆನ್ಸ್‌‌ನಲ್ಲಿಟ್ಟಿತ್ತು. ಆದರೆ ಚಿತ್ರೀಕರಣದ ವೇಳೆ ಕೆಲವು ಪುಂಡು ಪೋಕರಿಗಳು ಸೆರೆ ಹಿಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

105 ಮಿಲಿಯನ್ ಮುಟ್ಟಿದ ಸಾಯಿ ಪಲ್ಲವಿಯ 'ರೌಡಿ ಬೇಬಿ'!

ಮಲಯಾಳಂ ಚಿತ್ರ 'ಪ್ರೇಮಂ' ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸಾಯಿ ಪಲ್ಲವಿ ನಟಿಸಿದ ಎಲ್ಲ ಚಿತ್ರಗಳೂ ಸೂಪರ್ ಹಿಟ್ ಆಗಿವೆ. ಪ್ರೇಮಂನಂತೂ ಯುವಕರು ಅದೆಷ್ಟು ಸಾರಿ ನೋಡಿದ್ದಾರೋ ಲೆಕ್ಕವಿಲ್ಲ. ಪಕ್ಕದ್ಮನೆ ಹುಡುಗಿಯಂತೆ ಕಾಣುವ ಈ ನಟಿಯ ಮುಗ್ಧ ಸೌಂದರ್ಯಕ್ಕೆ ಮರುಳಾಗದವರು ಯಾರು ಹೇಳಿ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?