
ಟಾಲಿವುಡ್-ಕಾಲಿವುಡ್ ಲೋಕದ ಕೋಲು ಮುಖದ ಸುಂದರಿ ಕಾಜಲ್ ಅಗರ್ವಾಲ್ ಮದುವೆ ಆಗುವುದಾಗಿ ರಿಲೀವ್ ಮಾಡಿದ್ದಾರೆ. ಇತ್ತಿಚಿಗೆ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಾಜಲ್ ತಮ್ಮ ಲೈಫ್ ಪಾರ್ಟನರ್ ಹೇಗಿರ ಬೇಕು ಎಂಬುದನ್ನೂ ಹೇಳಿಕೊಂಡಿದ್ದಾರೆ.
'ಮಗಧೀರ' ಚೆಲುವೆಗೆ ಸಿಂಗಾಪೂರ್‌ನಲ್ಲಿ ಮೇಣದ ಪ್ರತಿಮೆ
'ಮದುವೆ ಯಾವಾಗ ಆಗ್ತೀರಾ?' ಎಂದು ನಿರೂಪಕಿ ಪ್ರಶ್ನಿಗೆ ಕಾಜಲ್ 'ಮದುವೆ ಆಗುವುದಕ್ಕೆ ನಾನು ರೆಡಿಯಾಗಿರುವೆ. ಎಲ್ಲಾ ಪ್ರಾಸಸ್ ಶುರು ಮಾಡಿದ್ದೀನಿ' ಎಂದು ಉತ್ತರಿಸಿದ್ದರು.
'ಹುಡುಗ ಯಾರು? ನೀವು ಇಷ್ಟ ಪಡುವ ಹುಡುಗ ಹೇಗಿರಬೇಕು' ಎಂಬ ಪ್ರಶ್ನೆಗೆ ಕಾಜಲ್ 'ಸದ್ಯಕ್ಕೆ ಯಾರೂ ಇಲ್ಲ ಅದರೆ ನನ್ನ ಸಂಗಾತಿ ಕಾಳಜಿವುಳ್ಳವನಾಗಿರಬೇಕು ಹಾಗೂ ಆಧ್ಯಾತ್ಮಿಕವಾಗಿರಬೇಕು. ಅಷ್ಟೇ ಅಲ್ಲದೆ ಇನ್ನು ಜಾಸ್ತಿ ಇದೆ. ಆದರೆ ಇದು ಮುಖ್ಯವಾದದ್ದು' ಎಂದಿದ್ದಾರೆ.
ಕಾಜಲ್ ಅಗರ್‌ವಾಲ್ ಮೇಕಪ್ಪಿಲ್ಲದ ಫೋಟೋ ರಿವೀಲ್!
'ಬೊಮ್ಮಲಾಟಂ' ಚಿತ್ರದ ಮೂಲಕ ಕಾಲಿವುಡ್‌ಗೆ ಕಾಲಿಟ್ಟ ಕಾಜಲ್ ತಮ್ಮ ಎರಡನೇ ಚಿತ್ರಕ್ಕೆ ಟಾಲಿವುಡ್‌ಗೆ ಪರಿಚಿತ ಆದರು. 2007ರಲ್ಲಿ 'ಲಕ್ಷ್ಮಿ ಕಲ್ಯಾಣ' ಚಿತ್ರದಲ್ಲಿ ನಟಿಯಾಗಿ ಹೆಸರು ಪಡೆದುಕೊಂಡರೂ ಚಿತ್ರ ಬಾಕ್ಸ್ ಆಫೀಸ್ ಮುಟ್ಟುವುದರಲ್ಲಿ ವಿಫಲವಾಗಿತ್ತು. ಸುಮಾರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಕಾಜಲ್ ಕೈ ಹಿಡಿಯಲು ಹುಡುಗರು ಸಾಲಾಗಿ ನಿಂತಿದ್ದಾರೆ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.