ಮುರಿದುಬಿದ್ದ ನಟನ ಮದುವೆ; ವದಂತಿಗೆ ಬ್ರೇಕ್ ಹಾಕಿದ ತಂದೆ!

Published : Oct 13, 2019, 12:04 PM IST
ಮುರಿದುಬಿದ್ದ ನಟನ ಮದುವೆ; ವದಂತಿಗೆ ಬ್ರೇಕ್ ಹಾಕಿದ ತಂದೆ!

ಸಾರಾಂಶ

  ಮದುವೆ ಫಿಕ್ಸ್‌ ಆದ ದಿನದಿಂದಲೂ ಒಂದಾದ ಮೇಲೊಂದು ಕಹಿ ಘಟನೆಯನ್ನು ಎದುರಿಸುತ್ತಿರುವ ಟಾಲಿವುಡ್‌ ಖ್ಯಾತ ನಟ, ಗಾಳಿ ಮಾತು ಕೇಳಲಾಗದೆ ತಂದೆಯೇ ಕೊಟ್ರು ಗುಡ್‌ ನ್ಯೂಸ್.

 

ಟಾಲಿವುಡ್‌ ಮ್ಯಾನ್‌ ಆಫ್‌ ಬ್ರಿಲಿಯನ್ಸ್‌ ಎಂದೇ ಖ್ಯಾತರಾದ ನಟ ವಿಶಾಲ್ ಜೀವನ ದಾರ ಹರಿದ ಗಾಳಿಪಟದಂತಾಗಿದೆ. ವರ್ಷದ ಹಿಂದೆಯೇ ಕುಟುಂಬಸ್ಥರ ಸಮ್ಮುಖದಲ್ಲಿ ಪ್ರೀತಿಸಿದ ಹುಡುಗಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಅಕ್ಟೋಬರ್‌ನಲ್ಲಿ ದಾಂಪತ್ಯ ಜೇವನಕ್ಕೆ ಕಾಲಿಡುವುದಾಗಿ ತಿಳಿಸಿದ್ದರು. ಆದರೆ ಅದು ಮನಸ್ತಾಪಗಳಿಂದ ಮುರಿದು ಬಿದ್ದಿತ್ತು.

 

ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್ ಇರುವ ಅನಿಶಾ ತಮ್ಮ ಪ್ರೀತಿಯ ವಿಚಾರವನ್ನು ಎಂದಿಗೂ ಬಹಿರಂಗವಾಗಿಯೇ ಇಡುತ್ತಿದ್ದರು. ಮನಸ್ತಾಪಗಳಿಂದ ನಿಶ್ಚಿತಾರ್ಥ ಮುರಿದ ನಂತರ ಆ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಿಂದ ಡಿಲೀಟ್ ಮಾಡಿದ್ದಾರೆ.

ಮದುವೆಗೆ ಒಂದು ತಿಂಗಳಿರುವಾಗಲೇ ಖ್ಯಾತ ನಟನ ಬಾಳಲ್ಲಿ ಬಿರುಕು!

ಅಷ್ಟೇ ಅಲ್ಲದೇ ನಿಶ್ಚಿತಾರ್ಥ ಆದ ಕೆಲ ದಿನಗಳಲ್ಲೇ ಶೂಟಿಂಗ್ ಶುರು ಮಾಡಿ ಸಾಹಸ ದೃಶ್ಯಕ್ಕೆ ಕೈ ಹಾಕಿದ ವಿಶಾಲ್ ಗಂಭೀರವಾಗಿ ಕೈ-ಕಾಲುಗಳನ್ನು ಪೆಟ್ಟು ಮಾಡಿಕೊಂಡಿದ್ದರು. ಫಿಕ್ಸ್ ಆದ ಮದುವೆಯಿಂದಲೇ ವಿಶಾಲ್ ಲೈಫ್‌ನಲ್ಲಿ ಇಂತಹದ್ದೆಲ್ಲಾ ಆಗುತ್ತಿರುವುದು ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು. ಇದನ್ನೆಲ್ಲ ಕೇಳಲಾಗದೆ ವಿಶಾಲ್ ತಂದೆ ಜೆಕೆ ರೆಡ್ಡಿ ಸದ್ಯದಲ್ಲೇ ವಿಶಾಲ್ ಮದುವೆ ದಿನಾಂಕ ನಿಗದಿಪಡಿಸುತ್ತೇನೆ ಎಂದು ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಮಕ್ಕಳ ಬಗ್ಗೆ ರಶ್ಮಿಕಾ ಮಂದಣ್ಣ ಮಾತು, ಆಗಲೇ ತಾಯಿಯಾದ ಫೀಲಿಂಗ್! ಶೀಘ್ರದಲ್ಲೇ ನಟನೆಗೆ ಗುಡ್‌ಬೈ?
ರಶ್ಮಿಕಾ ಸೊಸೆಯಾಗಿ ಬಂದಿದ್ದೇ ತಡ 'ತೆಲುಗು ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸ್ಕಾಲರ್‌ಶಿಪ್' ಘೋಷಿಸಿದ ವಿಜಯ್ ದೇವರಕೊಂಡ