
ಸ್ಟಾರ್ ನಟ ಕಮಲ್ ಹಾಸನ್ ಪುತ್ರಿ ಶೃತಿ ಹಾಸನ್ ಕೆಲ ಸಮಯಗಳಿಂದ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಸಿನಿಮಾಗಳಿಂದ ದೂರ ಉಳಿದಿದ್ದರು. ಈ ಬ್ರೇಕ್ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ನಾನು ವಿಸ್ಕಿ ಲವರ್. ತುಂಬಾ ವಿಸ್ಕಿ ಕುಡಿಯುತ್ತಿದ್ದೆ. ಇದರಿಂದ ಅನಾರೋಗ್ಯ ಕಾಡುತ್ತಿತ್ತು. ಆಗಾಗ ಹುಷಾರು ತಪ್ಪುತ್ತಿದ್ದೆ. ಹಾಗಾಗಿ ಬ್ರೇಕ್ ಬೇಕು ಎನಿಸಿತು. ಎಲ್ಲದರಿಂದ ದೂರ ಉಳಿದೆ. ಇದನ್ನು ನನ್ನ ಸ್ನೇಹಿತರ ಬಳಿಯೂ ಹೇಳಿಕೊಳ್ಳಲಿಲ್ಲ. ವೈದ್ಯರ ಬಳಿ ಚಿಕಿತ್ಸೆ ಪಡೆದೆ. ನಿಧಾನಕ್ಕೆ ಚೇತರಿಸಿಕೊಳ್ಳುತ್ತಾ ಬಂದೆ. ಇದು ನನ್ನ ಜೀವನದ ಬಹು ಮುಖ್ಯ ತಿರುವು’ ಎಂದು ಹೇಳಿದ್ದಾರೆ.
ಸತ್ಯ ಬಹಿರಂಗ: ಬಿಗ್ ಬಾಸ್ ಮನೆಯಲ್ಲಿ ಸಿಗರೇಟಿಗೂ ಇದೆ ಒಂದು ರೂಮ್!
ಶೃತಿ ಹಾಸನ್ ಮೈಕಲ್ ಕಾರ್ಸಲೆ ಜೊತೆ ಡೇಟಿಂಗ್ ನಡೆಸುತ್ತಿದ್ದರು. ಇದ್ದಕ್ಕಿದ್ದಂತೆ ಇಬ್ಬರ ನಡುವೆ ಅದೇನಾಯ್ತೋ ಗೊತ್ತಿಲ್ಲ. ಬ್ರೇಕಪ್ ಮಾಡಿಕೊಂಡಿದ್ದಾರೆ. ಈ ಹುಡುಗಿ ಯಾವಾಗಲೂ ನನ್ನ ಬೆಸ್ಟ್ ಮೇಟ್. ಅವಳ ಸ್ನೇಹಿತನಾಗಿರೋಕೆ ಇಷ್ಟಪಡುತ್ತೇನೆ. ಲವ್ ಯೂ ಗರ್ಲ್’ ಎಂದು ವಿಶ್ ಮಾಡಿದ್ದಾರೆ.
ಅಶ್ಲೀಲತೆ, ಧಾರ್ಮಿಕ ಭಾವನೆಗೆ ಧಕ್ಕೆ: ಬಿಗ್ ಬಾಸ್ ಗೆ ನಿಷೇಧ ಭೀತಿ!
ಸದ್ಯ ಟ್ರೆಡ್ ಸ್ಟೋನ್ ಎನ್ನುವ ವೆಬ್ ಸೀರೀಸ್ ಒಂದರಲ್ಲಿ ಬ್ಯುಸಿಯಾಗಿದ್ದಾರೆ. ಇದೊಂದು ಆ್ಯಕ್ಷನ್ ಸೀರೀಸ್ ಆಗಿದ್ದು ಶೃತಿ ಹಾಸನ್ ಹಂತಕಿಯ ಪಾತ್ರವನ್ನು ಮಾಡುತ್ತಿದ್ದಾರೆ. ನೀರಾ ಪಟೇಲ್ ಹೆಸರಿನ ಯುವತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.