ನಟ ಚಿರಂಜೀವಿ ಸಹೋದರ ನಾಗ ಬಾಬುಗೆ ಕೊರೋನಾ ಪಾಸಿಟಿವ್

Published : Sep 17, 2020, 01:35 PM ISTUpdated : Sep 17, 2020, 01:50 PM IST
ನಟ ಚಿರಂಜೀವಿ ಸಹೋದರ ನಾಗ ಬಾಬುಗೆ ಕೊರೋನಾ ಪಾಸಿಟಿವ್

ಸಾರಾಂಶ

ತೆಲುಗು ನಟ ಹಾಗೂ ನಿರ್ಮಾಪಕನಾಗಿರುವ ನಾಗ ಬಾಬುಗೆ ಕೊರೋನಾ ಸೋಂಕು ಇರುವುದು ಧೃಡವಾಗಿದೆ. ಸೋಂಕಿನಿಂದ ಗುಣಮುಖರಾದ ಬಳಿಕೆ ಪ್ಲಾಸ್ಮಾ ದಾನ ಮಾಡುವುದಾಗಿಯೂ ಹೇಳಿದ್ದಾರೆ.  

ಮೆಗಾ ಸ್ಟಾರ್ ಚಿರಂಜೀವಿ ಸಹೋದರ ನಾಗ ಬಾಬು ಅವರಿಗೆ ಕೋರೋನಾ ಪಾಸಿಟಿವ್ ಇರುವುದಾಗಿ ತಿಳಿದು ಬಂದಿದೆ. ಈ ವಿಚಾರದ ಬಗ್ಗೆ ಸ್ವತಃ ಬಾಬು ಟ್ಟೀಟ್ ಮಾಡಿದ್ದಾರೆ.

ಮೆಗಾ ಸ್ಟಾರ್‌ ಚಿರಂಜೀವಿ ಫ್ಯಾಮಿಲಿಯ ಒಂದು ಝಲಕ್‌

'ಸೋಂಕು ಇದೆ ಅಂದರೆ ಸದಾ ಅದರಿಂದ ಬಳಲುತ್ತಿರುವುದಲ್ಲ. ಬದಲಿಗೆ ನಮ್ಮ ದೇಹದಲ್ಲಿರುವ ಇಮ್ಯೂನಿಟಿ  ಪವರ್ ಹೆಚ್ಚಾಗಿ,  ಶಕ್ತಿ ಹೆಚ್ಚಿಸಿಕೊಳ್ಳುವುದು.  ಕೋವಿಡ್‌19 ಪಾಸಿಟಿವ್ ಬಂದಿದೆ. ಗುಣಮುಖರಾದ ನಂತರ ಪ್ಲಾಸ್ಮಾ ದಾನ ಮಾಡುತ್ತೇನೆ,' ಎಂದು ಬರೆದುಕೊಂಡಿದ್ದಾರೆ.

 

ನಾಗ ಬಾಬು ಅವರದ್ದು ತುಂಬು ಕುಟುಂಬವಾಗಿರುವ ಕಾರಣ ಎಲ್ಲರೂ ಕೋವಿಡ್19 ಪರೀಕ್ಷೆ ಮಾಡಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. 

"

ಕೆಲವು ದಿನಗಳ ಹಿಂದೆ ಹೈದರಾಬಾದ್‌ನ ತಾಜ್‌ ಹೊಟೇಲ್‌ನಲ್ಲಿ ಪುತ್ರಿ ನಿಹಾರಿಕಳ ನಿಶ್ಚಿತಾರ್ಥ ಅದ್ಧೂರಿಯಾಗಿ ನಡೆದಿದ್ದು ಭಾಗಿಯಾಗಿದ್ದ ಸ್ಟಾರ್ಸ್‌ಗಳು ಆತಂಕ ಪಡುವ ಅಗತ್ಯವಿಲ್ಲ. ಕಾರಣ ಸಮಾರಂಭಕ್ಕೂ ಇಂದಿಗೂ ಸುಮಾರು 1 ತಿಂಗಳ ಅಂತರವಿದೆ ಎಂದು ಬಾಬು ಆಪ್ತರಿಗೆ ತಿಳಿಸಿದ್ದಾರೆ.

ಚಿರಂಜೀವಿ ಸಹೋದರನ ಪುತ್ರಿ ನಿಹಾರಿಕಾ ನಿಶ್ಚಿತಾರ್ಥ; ಸಂಭ್ರಮ ಹೇಗಿತ್ತು ನೋಡಿ! 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಪಾತ್ರಕ್ಕಾಗಿ ದೇಹವನ್ನೇ ಬದಲಿಸಿಕೊಂಡ ನಟಿ… 58 ಕೆಜಿಯಿಂದ 72 ಕೆಜಿ, ಮತ್ತೆ Weight Loss!
9ನೇ ವಯಸ್ಸಿನಲ್ಲೇ ಭರತನಾಟ್ಯದಲ್ಲಿ ಮಿಂಚಿದ್ದ ಈ ಪುಟ್ಟ ಬಾಲಕಿ ಇಂದು ಸ್ಟಾರ್ ಹೀರೋಯಿನ್!