ಪ್ರಧಾನಿ ಮೋದಿಗೆ ಕಂಗನಾ ಸ್ಪೆಷಲ್ ವಿಶ್: ಏನ್ ಹೇಳಿದ್ದಾರೆ ನೋಡಿ

By Suvarna News  |  First Published Sep 17, 2020, 12:32 PM IST

ಪ್ರಧಾನಿ ಮೋದಿಗೆ ಇಂದು ಹುಟ್ಟಿದ ಹಬ್ಬದ ಸಂಭ್ರ. ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಪ್ರಧಾನಿಗೆ ವಿಡಿಯೋ ಮೂಲಕ ವಿಶ್ ಮಾಡಿದ್ದಾರೆ. ಏನ್ ಹೇಳಿದ್ದಾರೆ..? ಇಲ್ಲಿ ಓದಿ


ಪ್ರಧಾನಿ ಮೋದಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆಯೇ ಬಂದಿದೆ. ನಟಿ ಕಂಗನಾ ರಣಾವತ್ ಕೂಡಾ ಪ್ರಧಾನಿಗೆ ವಿಡಿಯೋ ಮೂಲಕ ವಿಶ್ ಮಾಡಿದ್ದಾರೆ.

ಪ್ರಧಾನಿ ಮೋದಿ ನಿಮಗೆ ಹುಟ್ಟುಹಬ್ಬದ ಶುಭಾಶಯಗಳು. ಬನಿಮ್ಮ ಜೊತೆ ಮಾತನಾಡುವ ಅವಕಾಶ ಯಾವತ್ತೂ ಸಿಗಲಿಲ್ಲ. ಹಲವಾರು ಬಾರಿ ಭೇಟಿಯಾದರೂ ಫೋಟೊ ತೆಗೆಸಿಕೊಳ್ಳುವುದಕ್ಕೇ ಸೀಮಿತವಾಗಿತ್ತು ಎಂದಿದ್ದಾರೆ.

Tap to resize

Latest Videos

undefined

ನಮೋ 70: ನವಭಾರತಕ್ಕೆ ನರೇಂದ್ರ ಮೋದಿ ಎಂಬ ಹೆದ್ದಾರಿ!

ಇಲ್ಲಿ ಜನ ಜಡ್ಜ್ ಮಾಡುತ್ತಾರೆ. ಒಂದಷ್ಟು ಜನರು ಹೇಟ್ ಮಾಡುವುದೇ ಕೆಲಸ ಮಾಡಿಕೊಂಡಿದ್ದಾರೆ. ಆದರೆ ಸಾಮಾನ್ಯ ಭಾರತೀಯ ನಿಮ್ಮನ್ನು ಹೆಚ್ಚು ಗೌರವಿಸುತ್ತಾನೆ. ಬಹಳಷ್ಟು ಜನ ಸೋಷಿಯಲ್ ಮೀಡಿಯಾದಲ್ಲಿಲ್ಲ ಎಂದಿದ್ದಾರೆ.

ಅವರೆಲ್ಲ ನಿಮ್ಮನ್ನು ಸಂಪರ್ಕಿಸಲು ಸಾಧ್ಯವಿಲ್ಲ. ಅಂತಹ ಕೋಟಿ ಕೋಟಿ ಭಾರತೀಯರು ನಿಮ್ಮ ಹುಟ್ಟಿದ ಹಬ್ಬದ ದಿನ ನಿಮಗಾಗಿ ಪ್ರಾರ್ಥಿಸುತ್ತಾರೆ. ನಿಮ್ಮನ್ನು ಪ್ರಧಾನಿಯಾಗಿ ಪಡೆದ ನಾವು ಅದೃಷ್ಟ ಮಾಡಿದ್ದೇವೆ ಎಂದಿದ್ದಾರೆ.

click me!