ಬರೀ ನಂಬರ್‌ ಪ್ಲೇಟ್‌ಗೆ 17 ಲಕ್ಷ ಕೊಟ್ಟ ಜೂ.NTR, ಕಾರ್ ಬೆಲೆ ಎಷ್ಟು ?

By Suvarna News  |  First Published Sep 24, 2021, 9:38 AM IST
  • ಕಾರಿನ ವಿಚಾರ ಬಿಡಿ, ಫ್ಯಾನ್ಸಿ ನಂಬರ್ ಪ್ಲೇಟ್‌ಗೆ ವ್ಯಯಿಸಿದ್ದು ಬರೋಬ್ಬರಿ 17 ಲಕ್ಷ
  • ಟಾಲಿವುಡ್ ನಟ ಜೂನಿಯರ್ ಎನ್‌ಟಿ ರಾಮ ರಾವ್ ಹೊಸ ಲಕ್ಷುರಿ ಕಾರು

ಚೆನ್ನೈ(ಸೆ.24): ಕಾರು ಪ್ರಿಯರಿಗೆ ಕಾರಿನ ಮೇಲೆ ಪ್ರೀತಿ ಎಷ್ಟಿರುತ್ತದೋ ಅದೇ ರೀತಿ ಫ್ಯಾನ್ಸಿ ನಂಬರ್ ಪ್ಲೇಟ್ ಕ್ರೇಜ್ ಇರುತ್ತದೆ. ಮೊಬೈಲ್ ನಂಬರ್‌ನಿಂದ ಹಿಡಿದು ಕಾರುಗಳ ನಂಬರ್ ಪ್ಲೇಟ್ ತನಕ ಫ್ಯಾನ್ಸಿ ನಂಬರ್ ಪಡೆಯಲು ಜನ ಮುಗಿಬೀಳುತ್ತಾರೆ. ಇದಕ್ಕೆ ಸಿನಿಮಾ ಸ್ಟಾರ್‌ಗಳೂ ಹೊರತಾಗಿಲ್ಲ.

ಟಾಲಿವುಡ್ ನಟ ಜೂನಿಯರ್ ಎನ್‌ಟಿ ರಾಮ ರಾವ್ (Junior NTR) ತಮ್ಮ ನೆಚ್ಚಿನ ನಂಬರ್ ಪ್ಲೇಟ್ ಪಡೆಯೋದಕ್ಕೋಸ್ಕರ ಭಾರೀ ಮೊತ್ತವನ್ನು ವ್ಯಯಿಸಿದ್ದಾರೆ. ಜೂನಿಯರ್ ಎನ್‌ಟಿಆರ್ ತಮ್ಮ ನೆಚ್ಚಿನ  Lamborghini Urus Graphite Capsuleಗೆ ಫ್ಯಾನ್ಸಿ ನಂಬರ್ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಲು ಭಾರೀ ಮೊತ್ತವನ್ನು ಖರ್ಚು ಮಾಡಿದ್ದಾರೆ.

Tap to resize

Latest Videos

undefined

ವರಮಹಾಲಕ್ಷ್ಮಿ ಹಬ್ಬಕ್ಕೆ ಐಷಾರಾಮಿ ಕಾರು ಖರೀದಿಸಿದ ಜ್ಯೂ.NTR!

ಮೂಲಗಳ ಪ್ರಕಾರ ಜೂ. ಎನ್‌ಟಿಆರ್ ಭಾರತದಲ್ಲಿ  Lamborghini Urus Graphite Capsule ಹೊಂದಿರುವ ಮೊದಲ ವ್ಯಕ್ತಿ. ತಮ್ಮ ದುಬಾರಿ ಪೊಸೆಷನ್‌ಗಳ ಸಾಲಿಗೆ ಇದನ್ನೂ ಸೇರಿಸಿಕೊಂಡಿದ್ದು ಇದಕ್ಕಾಗಿ ನಟ ಭಾರೀ ದೊಡ್ಡ ಮೊತ್ತವನ್ನು ಖರ್ಚು ಮಾಡಿದ್ದಾರೆ. ನಟನ ದುಬಾರಿ ಕಾರಿನ ಬಂಬರ್ ಪ್ಲೇಟ್ ರಿಜಿಸ್ಟ್ರೇಷನ್ ಇತ್ತೀಚೆಗಷ್ಟೇ ಖೈರತಾಬಾದ್‌ RTO ಆಫೀಸ್‌ನಲ್ಲಿ ನಡೆದಿದ್ದು ನಟ ತಮ್ಮ ದುಬಾರಿ ಕಾರಿನಲ್ಲೇ ಹೈದರಾಬಾದ್ ರಸ್ತೆಯಲ್ಲಿ ಪ್ರಯಾಣಿಸಿ ಕಚೇರಿಗೆ ಬಂದಿದ್ದಾರೆ.

ಬ್ಲಾಕ್ ಮ್ಯಾಟ್ ಫಿನಿಶಿಂಗ್ ಇರೋ ಲಂಬೋರ್ಗಿನಿ 2021 ಆಗಸ್ಟ್‌ನಲ್ಲಿ ಹೈದರಾಬಾದ್‌ಗೆ ಬಂದಿತ್ತು. ಕಾರಿನ ಬೆಲೆ 3.16 ಕೋಟಿ ರೂಪಾಯಿ. ತನ್ನ ದುಬಾರಿ ಕಾರಿಗೆ ಫ್ಯಾನ್ಸಿ ನಂಬರ್ ಪ್ಲೇಟ್ TS09 FS 9999 ಪಡೆಯಲು ನಟ ಬರೋಬ್ಬರಿ 17 ಲಕ್ಷ ಖರ್ಚು ಮಾಡಿದ್ದಾರೆ. ಜೂನಿಯರ್ ಎನ್‌ಟಿಆರ್ ನಿರ್ದೇಶಕ ಎಸ್ ಎಸ್ ರಾಜಮೌಳಿ ನಿರ್ದೇಶನದ RRR ರಿಲೀಸ್‌ಗಾಗಿ ಕಾಯುತ್ತಿದ್ದಾರೆ. ಈ ಹಿಂದೆ ಅಕ್ಟೋಬರ್ 13 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕಿದ್ದ ಸಿನಿಮಾವನ್ನು ಈಗ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

Lamborghini ನಂತರ ದುಬಾರಿ Mercedes Maybach GLS 600 ಖರೀದಿಸಿದ ರಣವೀರ್

ಚಿತ್ರದ ಬಿಡುಗಡೆ ದಿನಾಂಕ ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಚಿತ್ರದಲ್ಲಿ ರಾಮ್ ಚರಣ್, ಆಲಿಯಾ ಭಟ್, ಅಜಯ್ ದೇವಗನ್ ಮತ್ತು ಸಮುದ್ರಕಣಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೂನಿಯರ್ ಎನ್ಟಿಆರ್ ಸಹ ಕೊರಟಾಲ ಶಿವ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದಾರೆ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಮಾತುಕತೆ ನಡೆಸುತ್ತಿದ್ದಾರೆ.

ಕೊರೋನಾ ಅಟ್ಟಹಾಸದಿಂದ ಈ ವರ್ಷ ಬಿಗ್ ಬಜೆಟ್ ಸಿನಿಮಾ ಚಿತ್ರೀಕರಣ ಹಾಗೂ ಬಿಡುಗಡೆ ತಡವಾಗುತ್ತಿದೆ. ಸೋಷಿಯಲ್ ಮೀಡಿಯಾ ಮೂಲಕ ಚಿತ್ರತಂಡ ಅಭಿಮಾನಿಗಳಿಗೆ ಸಿನಿಮಾ ಕುರಿತ ಅಪ್ಡೇಟ್ ನೀಡುತ್ತಲೇ ಇದ್ದಾರೆ. ಅದರಲ್ಲೂ ರಾಜಮೌಳಿ ಆ್ಯಕ್ಷನ್ ಕಟ್ ಹೇಳುತ್ತಿರುವ ಆರ್‌ಆರ್‌ಆರ್‌ ಸಿನಿಮಾ ದಿನೇ ದಿನೇ ಕುತೂಹಲ ಹೆಚ್ಚಿಸುತ್ತಿದೆ.

ದುಬಾರಿ ಬ್ಲಾಕ್ Lamborghini ಖರೀದಿಸಿದ ನಟ ಕಾರ್ತಿಕ್ ಆರ್ಯನ್

ತೆಲುಗು, ತಮಿಳು, ಮಲಯಾಳಂ, ಹಿಂದೆ ಹಾಗೂ ಕನ್ನಡ ಚಿತ್ರರಂಗದಲ್ಲಿ ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್‌ಗೆ ಬಹಳಷ್ಟು ಸ್ನೇಹಿತರಿದ್ದಾರೆ. ಇತ್ತೀಚಿಗೆ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ ಸುದೀಪ್ ಜೂನಿಯರ್ ಎನ್‌ಟಿಆರ್ ಅಂದ್ರೆ ತುಂಬಾ ಇಷ್ಟ ಎಂದು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ. ಜನತಾ ಗ್ಯಾರೆಜ್ ಮೂಲಕ ಸದ್ದು ಮಾಡಿದ್ದ ಜೂ. ಎನ್‌ಟಿಆರ್ ಈಗ ತ್ರಿಬಲ್ ಆರ್ ಮೂಲಕ ಅಬ್ಬರಿಸೋಕೆ ರೆಡಿಯಾಗಿದ್ದಾರೆ. ಈ ಸಿನಿಮಾದಲ್ಲಿ ಟಾಲಿವುಡ್ ಸ್ಟಾರ್ ತಾರಾ ಬಳಗವಿದ್ದು ಹಾಗಾಗಿಯೇ ಸಿನಿಮಾ ಬಗ್ಗೆ ಅತೀವ ಕುತೂಹಲ ಮನೆ ಮಾಡಿದೆ.

. - The proud owner of India's 1st Urus Graphite Capsule. pic.twitter.com/2tu9S65oXy

— Manobala Vijayabalan (@ManobalaV)
click me!