
ರಾಬರ್ಟ್ ಸಿನಿಮಾದ ಪ್ರಿ ರಿಲೀಸ್ ಇವೆಂಟ್‌ನಲ್ಲಿ ಬಹುಭಾಷಾ ನಟ ಜಗಪತಿ ಬಾಬು ಅವರು ಮಾತನಾಡಿದ್ದಾರೆ. ಈ ಸಂದರ್ಭ ನಟ ದರ್ಶನ್ ಅವರನ್ನು ಮನದುಂಬಿ ಹೊಗಳಿದ್ದಾರೆ.
ಹಲವು ಸಿನಿಮಾಗಳಲ್ಲಿ ವಿಲನ್ ಪಾತ್ರ ಮಾಡಿ ಹಿಟ್ ಆಗಿರುವ ಜಗಪತಿ ಬಾಬಯ ರಾಬರ್ಟ್ ಸಿನಿಮಾದಲ್ಲಿ ವಿಲನ್ ಆಗಿ ನಟಿಸಿದ್ದಾರೆ. ಸಿನಿಮಾ ಶೂಟ್‌ಗಾಗಿ ಕರ್ನಾಟಕಕ್ಕೆ ಬಂದಿದ್ದ ನಟ ತಮ್ಮ ಅನುಭವವನ್ನು ರಾಬರ್ಟ್ ಪ್ರಿರಿಲೀಸ್ ಕಾರ್ಯಕ್ರಮದಲ್ಲಿ ಶೇರ್ ಮಾಡಿದ್ದಾರೆ.
ರಾಬರ್ಟ್ ತೆಲುಗು ಸಾಂಗ್ ವೈರಲ್: ಹಾಡಿದ ಮಂಗ್ಲಿಇವರೇ
ಹೆಲ್ಪ್ ಬೇಕು ಅಂದ್ರೆ ಹೆಲ್ಪ್ ಮಾಡೋರು ದರ್ಶನ್. ಅವರು ನಿಜವಾದ ಹೀರೋ ಎಂದಿದ್ದಾರೆ ನಟ ಜಗಪತಿ ಬಾಬು. ನೀವು ನಮ್ಮನೆಗೆ ಬಂದಿದ್ದೀರಿ, ನೀವು ನಮ್ಮ ಗೆಸ್ಟ್ ಎಂದು ಚೆನ್ನಾಗಿ ನೋಡಿಕೊಂಡಿದ್ದಾರೆ ದರ್ಶನ್. ಟಾಲಿವುಡ್‌ನಲ್ಲಿಯೇ ನನಗೆ ಸಿಗದಷ್ಟು ಗೌರವವನ್ನು ತೋರಿಸಿದ್ದಾರೆ ದರ್ಶನ್ ಎಂದಿದ್ದಾರೆ.
ಇನ್ನು ರಾಬರ್ಟ್ ಸಿನಿಮಾ ನಮ್ಮ ಮನೆಗೆ ಬರಲಿದೆ. ಟಾಲಿವುಡ್ಗೆ ಬರುತ್ತೆ. ಆಗ ನಾವು ಅದನ್ನು ಮನಸಿನಲ್ಲಿಟ್ಟು ಕೊಂಡಾಡಬೇಕು ಎಂದು ಅವರು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.