ಸಲ್ಮಾನ್‌ಖಾನ್‌ ಶರ್ಟ್‌ಲೆಸ್ ಫೋಟೋ ಶೇರ್ ಮಾಡಿದ ತಂಗಿ

By Suvarna News  |  First Published Mar 6, 2021, 10:01 AM IST

ಅಣ್ಣನ ಶರ್ಟ್‌ಲೆಸ್ ಫೋಟೋ ಶೇರ್ ಮಾಡಿದ ಅರ್ಪಿತಾ ಖಾನ್ ಶರ್ಮಾ | ಅಲ್ಮಾನ್ ಖಾನ್ ಹಾಟ್ ಲುಕ್


ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಹಳೆಯ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ. 2104ರಲ್ಲಿ ಅರ್ಪಿತಾ ಮದುವೆ ಸಂದರ್ಭ ಕ್ಲಿಕ್ಕಿಸಿದ ಫೋಟೋ ಇದು.

ಅರ್ಪಿತಾ ಮದುವೆ ಲುಕ್ನಲ್ಲಿ ಮಿಂಚುತ್ತಿದ್ದರೆ ಸಲ್ಮಾನ್ ಖಾನ್ ಬಾತ್ ಟವಲ್ ಉಟ್ಟುಕೊಂಡಿರುವ ಫೋಟೋ ಇದು. ಫೋಟೋ ಶೇರ್ ಮಾಡಿದ ಅರ್ಪಿತಾ, ಫಾಂಡ್ ಮೆಮೊರೀಸ್ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.

Tap to resize

Latest Videos

ಡ್ರಗ್ಸ್‌ ಡೀಲ್ಸ್‌ಗೆ ಫಂಡ್ ಮಾಡ್ತಿದ್ದ ಬಾಲಿವುಡ್ ಸುಂದರಿ: ರಿಯಾಗೆ 20 ವರ್ಷ ಜೈಲು..?

ಅರ್ಪಿತಾ ಬಿಳಿಯ ಮೇಲೆ ಅರೆಂಜ್, ಪರ್ಪಲ್ ಪ್ರಿಂಟ್ನ ಲೆಹಂಗಾ ಧರಿಸಿದ್ದಾರೆ. ಮೇಕಪ್ ಮಾಡಿ ಕರ್ಲಿ ಹೇರ್ಸ್ಟೈಲ್ನಲ್ಲಿ ಮಿಂಚಿದ್ದರೆ, ಶರ್ಟ್ಲೆಸ್ ಆಗಿ ಪೋಸ್ ಕೊಟ್ಟಿದ್ದಾರೆ ಸಲ್ಮಾನ್.

ಮದುವೆಯಲ್ಲಿ ಭಾಗವಹಿಸಿದ್ದ ಮಿನಿ ಮಾಥುರ್ ಆ ಬೆಳಗಿನ ಜಾವ ಇನ್ನೂ ನೆನಪಿದೆ ಎಂದು ಕಮೆಂಟ್ ಮಾಡಿದ್ದರೆ, ಇನ್ನೊಬ್ಬರು ಮಿಸ್ ಹಿಮ್ ಎಂದು ಬರೆದಿದ್ದಾರೆ. ಅರ್ಪಿತಾ 2014ರಲ್ಲಿ ನಟ ಆಯುಷ್ ಶರ್ಮಾರನ್ನು ವಿವಾಹವಾಗಿದ್ದಾರೆ. 

click me!