
ದೆಹಲಿ(ಮೇ.14): ನಟ ಅನುಪಮ್ ಖೇರ್ ಅವರು ಹಿಂದಿಯಲ್ಲಿ ಆರು ಸಾಲಿನ ಕವಿತೆಯನ್ನು ಟ್ವೀಟ್ ಮಾಡಿದ್ದಾರೆ. ಮೋದಿ ಕುರಿತು ಅದನ್ನು ಸರಿ ಮಾಡೋ ಸ್ಪಷ್ಟ ಪ್ರಯತ್ನವು ಈ ಹಾಡಿನಲ್ಲಿ ವ್ಯಕ್ತವಾಗಿದೆ.
ಕೊರೋನಾ ರೋಗವನ್ನು ನರೇಂದ್ರ ಮೋದಿ ಸರ್ಕಾರ ನಿರ್ವಹಿಸುತ್ತಿರುವುದನ್ನು ಟೀಕಿಸಿದ್ದ ನಟ ಈಗ ಹಠಾತ್ತನೆ ಹೊಗಳಲಾರಂಭಿಸಿದ್ದಾರೆ. ಕೆಲಸ ಮಾಡುವವರು ಮಾತ್ರ ತಪ್ಪುಗಳನ್ನು ಮಾಡುತ್ತಾರೆ. ಇತರರಲ್ಲಿ ಕೆಟ್ಟದ್ದನ್ನು ಹುಡುಕುತ್ತಾ ಸಮಯವನ್ನು ಕಳೆಯುವವರ ಜೀವನ ಬೇಗ ಕೊನೆಗೊಳ್ಳುತ್ತದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಪ್ರತಿ ಬಾರಿ ಮೋದಿಯನ್ನು ಹೊಗಳೋ ಅನುಪಮ್ ಖೇರ್‌ನಿಂದ ಸರ್ಕಾರಕ್ಕೆ ತೀವ್ರ ತರಾಟೆ
ಎಲ್ಲೋ ಅವರು ಎಡವಿದ್ದಾರೆ. ಇಮೇಜ್ ಕ್ರಿಯೇಟ್ ಮಾಡುವುದಷ್ಟೇ ಅಲ್ಲ ಎಂದು ಅವರು ಅರ್ಥಮಾಡಿಕೊಳ್ಳುವ ಸಮಯ ಇದು ಎಂದು ಹೇಳಿದ್ದರು ಅನುಪಮ್. ನಾವು ಸಾಮಾನ್ಯರಂತೆ ಕೋಪಗೊಳ್ಳಬೇಕು ... ಏನಾಗಿದೆಯೋ ಅದಕ್ಕೆ ಸರ್ಕಾರ ಹೊಣೆ ಎಂದಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.