ಅನುಷ್ಕಾ ಶೆಟ್ಟಿ ಅವರ ಇತ್ತೀಚಿನ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತನ್ನ ಟ್ರ್ಯಾಕ್‌ಸೂಟ್‌ನಲ್ಲಿ ಕಂಡುಬಂದ ಅನುಷ್ಕಾ ತೂಕ ಹೆಚ್ಚಿಸಿಕೊಂಡಿದ್ದಾರೆ. ದುಂಡುಮುಖದ ಕೆನ್ನೆಗಳೇ ಅನುಷ್ಕಾ ದಪ್ಪಗಾಗಿದ್ದಾರೆ ಅನ್ನೋದಕ್ಕೆ ಸಾಕ್ಷಿ. ಅನುಷ್ಕಾ ಶೆಟ್ಟಿ ಅವರು ಬಹಳ ಹಿಂದಿನಿಂದಲೂ ತೂಕದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಬಾಹುಬಲಿ ಸಿನಿಮಾ ನಂತರ ಹೆಚ್ಚು ದಪ್ಪಗಾದ ನಟಿ ಇಂಡಸ್ಟ್ರಿಗೆ ಬರೋ ಆರಂಭದ ದಿನಗಳಲ್ಲಿ ತುಂಬಾ ಸಣ್ಣಗಿದ್ದರು. ಅದೃಷ್ಟವಶಾತ್, ಅನುಷ್ಕಾ ಈ ಫೋಟೋಕ್ಕಾಗಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿಲ್ಲ. ನಟಿಯ ಫೋಟೋ ವೈರಲ್ ಆಗುವುದು ಅಪರೂಪವಾದ ಕಾರಣ ಫ್ಯಾನ್ಸ್ ಇದನ್ನು ಸ್ವಾಗತಿಸಿದ್ದಾರೆ.
ಆಲಿಯಾ ಬದಲು ಅನುಷ್ಕಾ ಇರ್ತಿದ್ರೆ..? ಸೀತಾ ಪಾತ್ರ ಕಲ್ಪಿಸಿಕೊಂಡ ಫ್ಯಾನ್ಸ್
ಮಹೇಶ್ ಪಿ ನಿರ್ದೇಶನದಲ್ಲಿ ಯುವಿ ಕ್ರಿಯೇಷನ್ಸ್ ನಿರ್ಮಿಸಲಿರುವ ಮುಂಬರುವ ತೆಲುಗು ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಲು ಅನುಷ್ಕಾ ಶೆಟ್ಟಿ ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ನವೀನ್ ಪಾಲಿಶೆಟ್ಟಿ ಕೂಡ ನಟಿಸಲಿದ್ದಾರೆ.
ಕಳೆದ ವರ್ಷ ಭಾರತದಾದ್ಯಂತ ಲಾಕ್‌ಡೌನ್ ಆದಾಗ ಸೆಲೆಬ್ರಿಟಿಗಳು ತಮ್ಮ ಮನೆಯಲ್ಲಿ ವರ್ಕೌಟ್ ಫೋಟೋಗಳನ್ನು ಪೋಸ್ಟ್ ಮಾಡಿದ್ದರು. ಈಗ, ತೆಲಂಗಾಣ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಮತ್ತು ಆಂಧ್ರಪ್ರದೇಶ (ಭಾಗಶಃ) ಸೇರಿದಂತೆ ಹಲವು ರಾಜ್ಯಗಳು ಸಹ ಲಾಕ್ ಡೌನ್ ವಿಧಿಸಿವೆ.