ಮದುವೆ ಮುಂಚಿನ ಸೆಕ್ಸ್ ಸರಿನಾ? ಕನ್ಯತ್ವ ಕಳೆದುಕೊಳ್ಳಲು ಸರಿಯಾದ ವಯಸ್ಸು ಯಾವುದು ಎಂಬ ಬಗ್ಗೆ ಬೋಲ್ಡ್ ಹೇಳಿಕೆ ನೀಡಿದ್ದಾರೆ ಕಾಲಿವುಡ್ ನಟಿ ಅತುಲ್ಯಾ
ಕಳೆದ ಹಲವು ವರ್ಷಗಳಿಂದ ತಮಿಳು ಸಿನಿಮಾಗಳಲ್ಲಿ ಸಕ್ರಿಯರಾಗಿರುವ ಕಾಲಿವುಡ್ ಬೆಡಗಿ ಅತುಲ್ಯಾ ರವಿ (Atulya Ravi) ಇದೀಗ ಕನ್ಯತ್ವದ ಬಗ್ಗೆ ಬೋಲ್ಡ್ ಸ್ಟೇಟ್‌ಮೆಂಟ್ ನೀಡಿದ್ದಾರೆ. ಮದುವೆಯ ಮುಂದಿನ ಸೆಕ್ಸ್ ಕುರಿತಾಗಿಯೂ ಅವರು ಬಹಿರಂಗವಾಗಿ ಮಾತನಾಡಿದ್ದಾರೆ. ಮೊದಲು ಯೂಟ್ಯೂಬ್ ಕಿರುಚಿತ್ರ ಒಂದರಲ್ಲಿ ನಟಿಸಿದ್ದ ಅತುಲ್ಯಾ, 2017ರಲ್ಲಿ ತಮಿಳಿನ ಕಾದಲ್ ಕಣ್ ಕಟ್ಟುದೆ ಸಿನಿಮಾ ಮೂಲಕ ಕಾಲಿವುಡ್ಗೆ ಪದಾರ್ಪಣೆ ಮಾಡಿದರು. ಅದೇ ಸಾಲಿನಲ್ಲಿ ಅವರಿಗೆ ಕೈಹಿಡಿದ ಚಿತ್ರವೆಂದರೆ ತಮಿಳಿನ ಕಥಾ ನಾಯಗನ್ . ಅದಕ್ಕೂ ಮುಂಚೆ ಕಾದಲ್ ಕಣ್ ಕಟ್ಟುತ್ತೆ ಹೆಸರಿನ ಕಿರುಚಿತ್ರದಲ್ಲಿ ನಟಿಸಿದ್ದ ಅತುಲ್ಯಾ ಅಲ್ಲಿಯೇ ಸಾಕಷ್ಟು ಪ್ರಖ್ಯಾತಿಯನ್ನೂ ಗಳಿಸಿದ್ದರು. ಅದಾದ ಬಳಿಕ ಕಥಾ ನಾಯಗನ್ (Katha Nayagan) ಚಿತ್ರದಿಂದ ಮುನ್ನೆಲೆಗೆ ಬಂದರು. ಶಾಂತನೂ ಜತೆ ಮುರುಂಗಕೈ ಚಿಪ್ಸ್ ಸಿನಿಮಾದಲ್ಲಿಯೂ ಖ್ಯಾತಿ ಗಳಿಸಿದರು. ಮುಗ್ಧ ಅಭಿನಯ ಹಾಗೂ ಅವರ ಮನಸೂರೆಗೊಳ್ಳುವ ಬ್ಯೂಟಿಯಿಂದ ಮನೆಮಾತಾದರು. ಅವರ ಏಮಾಲಿ, ಕೀ, ಸಿಟ್ಟು ಪಿಡಿಕ್ಕ ಉತ್ತರವು, ಕಾಪ್‌ಮಾರಿ, ನಾಡೋಡಿಗಳ್ 2, ಮುರುಂಗಕೈ ಚಿಪ್ಸ್, ವಟ್ಟಾಮ್ ಸಿನಿಮಾಗಳು ಹಿಟ್ ಆಗಿವೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅತುಲ್ಯಾ ಮುಕ್ತವಾಗಿ ಮಾತನಾಡಿದ್ದಾರೆ.
ಕನ್ಯತ್ವ (virginity) ಕಳೆದುಕೊಳ್ಳಲು ಸರಿಯಾದ ವಯಸ್ಸು ಯಾವುದು ಎಂದು ಪ್ರಶ್ನೆ ಮಾಡಲಾಯಿತು. ಇದಕ್ಕೆ ಉತ್ತರಿಸಿದ ಅತುಲ್ಯಾ, ನನ್ನ ಪ್ರಕಾರ 21 ರಿಂದ 25 ವರ್ಷದ ಒಳಗೆ ಸೂಕ್ತ ಎಂದಿದ್ದಾರೆ. ಈ ಪ್ರಶ್ನೆಯ ಬಳಿಕ ಮದುವೆಗೂ ಮುನ್ನ ಲೈಂಗಿಕ ಕ್ರಿಯೆ ನಡೆಸುವುದು ಸರಿಯೇ ಅಥವಾ ಮದುವೆ ಆದಮೇಲೆ ಇವನ್ನೆಲ್ಲಾ ಇಟ್ಟುಕೊಳ್ಳಬೇಕೆ ಎನ್ನುವ ಪ್ರಶ್ನೆ ನಟಿಗೆ ಎದುರಾಗಿದೆ. ಇದಕ್ಕೂ ಬೋಲ್ಡ್ ಆಗಿಯೇ ಉತ್ತರಿಸಿರೋ ನಟಿ, ಏನೇ ಇರಲಿ, ಮದುವೆಗೂ ಮುಂಚಿನ ಸೆಕ್ಸ್ ಸರಿಯಾದುದಲ್ಲ. ಇವೆಲ್ಲವನ್ನೂ ಮದುವೆ ಬಳಿಕವೇ ಇಟ್ಟುಕೊಳ್ಳಬೇಕು. ಸೆಕ್ಸ್ ಎನ್ನುವುದು ಮದುವೆಯಾದ ಬಳಿಕ ನಡೆದರೆ ಆ ಲೈಂಗಿಕ ಸಂಬಂಧವೇ ಉತ್ತಮವಾಗಿರುತ್ತದೆ ಎಂದಿದ್ದಾರೆ.
ನಟ ವಿಜಯ್ ಜೊತೆ ಸೆಕ್ಸ್ ಕುರಿತು ಹೇಳಿದ್ದ ತಮನ್ನಾಗೆ ಮದ್ವೆ ಬಗ್ಗೆ ಕೇಳಿದ್ರೆ ಹೀಗೆ ಹೇಳಿದ್ರು...
ಇನ್ನು ಮದುವೆ ಬಳಿಕದ ಲೈಂಗಿಕತೆಯ (Sex before marriage) ಕುರಿತು ಮಾತನಾಡಿರುವ ಅವರು, ಅದು ನಮ್ಮ ಆಚಾರ ವಿಚಾರ ಮತ್ತು ಸಂಸ್ಕೃತಿಯನ್ನು ಬಿಂಬಿಸುವಂಥದ್ದು. ನನ್ನ ಪ್ರಕಾರ ಮದುವೆ ಬಳಿಕವೇ ದೈಹಿಕ ಸಂಬಂಧ ಬೆಳೆಸುವುದು ಅತ್ಯುತ್ತಮ ಎಂದಿದ್ದಾರೆ. ಇದೇ ವೇಳೆ, ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವು ಲಿವ್ ಇನ್ ರಿಲೇಷನ್‌ಷಿಪ್‌ಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ ನಟಿ, ಈ ಸಂಬಂಧದಿಂದ ಲೈಂಗಿಕ ವಿಷಯದಲ್ಲಿ ಒಂದಷ್ಟು ಬದಲಾವಣೆಗಳಾಗಿವೆ. ಅದು ಸರಿಯಾದುದಲ್ಲ. ಏನಿದ್ದರೂ ಮದುವೆಯ ಬಳಿಕವೇ ಲೈಂಗಿಕತೆ ಒಳ್ಳೆಯದು ಎಂದಿದ್ದಾರೆ.
ಆಧುನಿಕತೆಯ ಜತೆಗೆ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಸಂಬಂಧಗಳು ಬೇರೆ ರೂಪ ಪಡೆದುಕೊಳ್ಳುತ್ತಿವೆ. ಲಿವ್ ಇನ್ ರಿಲೇಷನ್‌ಷಿಪ್ (live in relationship) ಎಂಬುದು ಪ್ರತಿ ವ್ಯಕ್ತಿಯ ನಿರ್ಧಾರ. ಅದರ ಮೇಲೆ ಹಕ್ಕು ಚಲಾಯಿಸುವ ಅಧಿಕಾರ ಯಾರಿಗೂ ಇಲ್ಲ. ಹಾಗಾಗಿ ಮದುವೆ ಬಳಿಕದ ಸಂಬಂಧವೇ ಒಳ್ಳೆಯದು ಎಂದು ನಟಿ ಅತುಲ್ಯಾ ನುಡಿದಿದ್ದಾರೆ.
Sacred Games-2: ಪೀರಿಯಡ್ಸ್ ಡೇಟ್ ಕೇಳಿ ಸೆಕ್ಸ್ ಸೀನ್ ಮಾಡಿಸಿದ ನಿರ್ದೇಶಕ, ನಟಿ ಅಮೃತಾ ಸುಭಾಷ್ ಖುಷ್