ಮೂವರು ಖಾನ್‌ಗಳ ಜೊತೆ ನಟಿಸಿದ ನಟಿ 27ನೇ ವಯಸ್ಸಿಗೆ ಸಿನಿಮಾ ರಂಗಕ್ಕೆ ವಿದಾಯ ಹೇಳಿದರು. ಇತ್ತೀಚೆಗೆ ಸ್ನಾತಕೋತ್ತರ ಪದವಿ ಪಡೆದ ಈ ನಟಿ ಈಗ ಎರಡು ಮಕ್ಕಳ ತಾಯಿ.
ಮುಂಬೈ: ಸಿನಿಮಾ ಉದ್ಯಮದಲ್ಲಿ ನಟಿಯರ ಕೆರಿಯರ್ ತುಂಬಾ ಕಡಿಮೆ ಅವಧಿಯಲ್ಲಿ ಮುಗಿಯುತ್ತದೆ ಎಂಬವುದು ಹಲವರ ಅಭಿಪ್ರಾಯವಾಗಿದೆ. ಸಿನಿಮಾ ಜಗತ್ತಿನಲ್ಲಿ ತಮ್ಮಅಸ್ತಿತ್ವವನ್ನು ಸ್ಥಾಪಿಸಿಕೊಂಡು ದೀರ್ಘಕಾಲದವರೆಗೆ ಮುಂದುವರಿಸಿಕೊಂಡು ಹೋಗಲು ನಟರಗಿಂತ ನಟಿಯರು ಹೆಚ್ಚು ಕಷ್ಟಪಡ್ತಾರೆ ಅನ್ನೋದು ಸಿನಿ ಜಗತ್ತನ್ನು ಹತ್ತಿರದಿಂದ ಕಂಡವರು ಹೇಳುತ್ತಾರೆ. ಇನ್ನು ಕೆಲ ನಟಿಯರು ಸಾಲು ಸಾಲು ಅವಕಾಶಗಳು ಬರುತ್ತಿರುವ ಸಂದರ್ಭದಲ್ಲಿಯೇ ಸಿನಿಮಾದಿಂದ ದೂರವಾಗುವ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇಂದು ನಾವು ಹೇಳುತ್ತಿರುವ ನಟಿ ತಮ್ಮ 21ನೇ ವಯಸ್ಸಿನಲ್ಲಿ ಬಾಲಿವುಡ್‌ಗೆ ಬಂದು 27ನೇ ವಯಸ್ಸಿಗೆ ಸಿನಿಮಾಗಳಿಂದ ದೂರವಾದರು.
ಕೇವಲ ಆರು ವರ್ಷದಲ್ಲಿಯೇ ಈ ನಟಿ ಶಾರೂಖ್ ಖಾನ್, ಆಮೀರ್ ಖಾನ್ ಮತ್ತು ಸಲ್ಮಾನ್ ಖಾನ್ ಜೊತೆಯಲ್ಲಿ ಸ್ಕ್ರೀನ್ ಶೇರ್ ಮಾಡಿದ್ದರು. ಸದ್ಯ ಎರಡು ಮಕ್ಕಳ ತಾಯಿಯಾಗಿರುವ ಈ ನಟಿ, ಇತ್ತೀಚೆಗಷ್ಟೇ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಓದಲು ವಯಸ್ಸಿನ ಮಿತಿ ಇಲ್ಲ ಎಂದು ತೋರಿಸಿದವರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ನಟಿ ಟ್ವಿಂಕಲ್ ಖನ್ನಾ ಇಷ್ಟೊತ್ತು ನಾವು ಹೇಳುತ್ತಿರೋದು. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟಿ ಟ್ವಂಕಲ್ ಖನ್ನಾ ಇಂದು 51ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. 1995ರಲ್ಲಿ ಬಿಡುಗಡೆಯಾದ 'ಬರ್ಸಾತ್' ಸಿನಿಮಾದಲ್ಲಿ ಬಾಬಿ ಡಿಯೋಲ್‌ಗೆ ನಾಯಕಿಯಾಗಿ ಚಿತ್ರರಂಗಕ್ಕೆ ಟ್ವಿಂಕಲ್ ಖನ್ನಾ ಎಂಟ್ರಿ ಕೊಟ್ಟರು. ಮೊದಲ ಚಿತ್ರ ಹಿಟ್ ಆಗಿದ್ದರಿಂದ ಹಲವು ಅವಕಾಶಗಳು ಟ್ವಿಂಕಲ್ ಖನ್ನಾ ಅವರಿಗೆ ಸಿಕ್ಕವು. ಆದ್ರೆ ಮತ್ತೊಂದು ಹಿಟ್‌ಗಾಗಿ ಶ್ರಮಪಡಬೇಕಾಯ್ತು.
ಇದನ್ನೂ ಓದಿ: ಮಾಧುರಿ ದೀಕ್ಷಿತ್ ಮದುವೆ ಸುದ್ದಿ ಕೇಳಿ ಬಾತ್‌ರೂಮ್‌ನಲ್ಲಿ ಗಳಗಳನೇ ಅತ್ತಿದ್ರು ಕನ್ನಡ ನಟಿಯ ತಂದೆ
ಬರ್ಸಾತ್ ಬಳಿಕ ಬಿಡುಗಡೆಯಾದ ಟ್ವಿಂಕಲ್ ಖನ್ನಾ ಸಿನಿಮಾಗಳು ಫ್ಲಾಪ್‌ಗಳ ಪಟ್ಟಿ ಸೇರಿ ದವವು. ಇದೇ ವೇಳೆ ನಟ ಅಕ್ಷಯ್ ಕುಮಾರ್ ಪ್ರೇಮಪಾಶದಲ್ಲಿ ಸಿಲುಕಿದ ಟ್ವಿಂಕಲ್ ಖನ್ನಾ ಅವರನ್ನೇ ಮದುವೆಯಾದರು. ಅಕ್ಷಯ್ ಕುಮಾರ್ ಜೊತೆಯಲ್ಲಿ ಇಂಟರ್‌ನ್ಯಾಷನಲ್ ಕಿಲಾಡಿ ಮತ್ತು ಜುಲ್ಮಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಶಾರೂಖ್ ಖಾನ್ ಜೊತೆ ಬಾದ್‌ಶಾ, ಆಮೀರ್ ಖಾನ್ ಜೊತೆ ಮೇಲಾ ಮತ್ತು ಸಲ್ಮಾನ್ ಖಾನ್ ಜೊತೆ ಜಬ್ ಪ್ಯಾರ್ ಕಿಸಿ ಸೇ ಹೋತಾ ಹೈ ಸಿನಿಮಾಗಳಲ್ಲಿಟ ಟ್ವಿಂಕಲ್ ಖನ್ನಾ ನಟಿಸಿದ್ದಾರೆ. ಆದ್ರೆ ಯಾವ ಸಿನಿಮಾಗಳು ಸಹ ಬಾಕ್ಸ್ ಆಫಿಸ್‌ನಲ್ಲಿ ಸದ್ದು ಮಾಡದ ಕಾರಣ ನಿಧಾನವಾಗಿ ಚಿತ್ರರಂಗದಿಂದ ಟ್ವಿಂಕಲ್ ಖನ್ನಾ ದೂರವುಳಿದರು .
17ನೇ ಜನವರಿ 2001ರಂದು ಅಕ್ಷಯ್ ಕುಮಾರ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಟ್ವಿಂಕಲ್, ಬಾಲಿವುಡ್‌ಗೆ ವಿದಾಯ ಹೇಳಿದರು. ಕೊನೆಯ ಬಾರಿ 2001ರಲ್ಲಿ ಬಿಡುಗಡೆಯಾದ 'ಲವ್ ಕೇ ಲಿಯೇ ಕುಛ್ ಬ ಕರೇಗಾ' ಸಿನಿಮಾದಲ್ಲಿ ನಟಿಸಿದ್ದರು. ಇತ್ತೀಚೆಗಷ್ಟೇ ಲಂಡನ್‌ನಲ್ಲಿ ಎಂಎ ಪದವಿಯನ್ನು ಪಡೆದುಕೊಂಡಿರುವ ಟ್ವಿಂಕಲ್ ಖನ್ನಾ, ದಿ ವೈಟ್ ವಿಂಡೋ ಹೆಸರಿನ ಇಂಟಿರಿಯರ್ ಡಿಸೈನ್ಡ್ ಕಂಪನಿ ಆರಂಭಿಸಿ ಕೆಲಸ ಮಾಡುತ್ತಾರೆ. ಇದೆಲ್ಲದರ ನಡುವೆ ಟ್ವಿಂಕಲ್ ಪುಸ್ತಕಗಳನ್ನು ಬರೆಯುತ್ತಾರೆ. ಅಕ್ಷಯ್ ಕುಮಾರ್-ಟ್ವಿಂಕಲ್ ಖನ್ನಾ ದಂಪತಿಗೆ ಓರ್ವ ಮಗಳು. ಒಬ್ಬ ಮಗನಿದ್ದಾನೆ.
ಇದನ್ನೂ ಓದಿ: ತನಗಿಂತ 2 ವರ್ಷ ಕಿರಿಯ ನಟನ ಬಗ್ಗೆ ಇಂಟರೆಸ್ಟಿಂಗ್ ಹೇಳಿಕೆ ಕೊಟ್ಟ ಅನುಷ್ಕಾ? ಸ್ವೀಟಿ ಆಸೆ ಈಡೇರುತ್ತಾ