ಖ್ಯಾತ ಬಾಲಿವುಡ್ ನಟಿಯೊಬ್ಬರು ನಟನೆಯನ್ನು ತೆಗೆದುಕೊಳ್ಳಲು ಮತ್ತು ಮನರಂಜನಾ ಜಗತ್ತಿಗೆ ಪ್ರವೇಶಿಸಲು ನಿರ್ಧರಿಸಿದಾಗ ಅವರ ತಂದೆ ಆಕೆಯನ್ನು ಶೂಟ್ ಮಾಡಿಬಿಡಬೇಕು ಎಂದುಕೊಂಡಿದ್ದರಂತೆ!
ಫಿಲ್ಮ್ ಫೀಲ್ಡ್‌ಗೆ ಪ್ರವೇಶಿಸುವುದು, ಅಲ್ಲಿ ಸರ್ವೈವ್ ಆಗುವುದು ಮತ್ತು ಅದರಲ್ಲೇ ಬೆಳೆಯುವುದು ಮೂರೂ ವಿಭಿನ್ನ ವಿಷಯಗಳು. ಇದು ಎಲ್ಲರಿಂದ ಸಾಧ್ಯವಿಲ್ಲ. ಇದಕ್ಕೆ ಅದೃಷ್ಟ, ಪ್ರಯತ್ನ ಜೊತೆಗೆ ಗಟ್ಟಿತನವೂ ಬೇಕು. ಅದರಲ್ಲೂ ನಟಿಯರ ಬದುಕು ಇನ್ನಷ್ಟು ಕಷ್ಟವಾಗಿರುತ್ತದೆ. ಇನ್ನು, ಯಾವುದೇ ಹಿನ್ನೆಲೆ ಇಲ್ಲದೆ ಬಾಲಿವುಡ್‌ನಲ್ಲಿ ಪ್ರವೇಶ ಪಡೆದು ಹೆಸರು ಮಾಡುವುದಂತೂ ಕಬ್ಬಿಣದ ಕಡಲೆಯೇ ಸರಿ.
ಅದಕ್ಕಾಗಿಯೇ ಮನರಂಜನಾ ಕ್ಷೇತ್ರಕ್ಕೆ ಹೋಗುತ್ತೇವೆಂದಾಗ ಹೆಣ್ಣುಮಕ್ಕಳಿಗೆ ಕುಟುಂಬದಿಂದ ಬೆಂಬಲ ಸಿಗುವುದು ಅಪರೂಪ. ಇಂಥದೇ ಸಂದರ್ಭ ಈ ಟಾಪ್ ನಟಿಯ ಬಾಳಿನಲ್ಲೂ ಬಂದಿತ್ತು.
ಆಕೆ ಬಾಲಿವುಡ್‌ಗೆ ಹೋಗುತ್ತೇನೆಂದಾಗ ಆಕೆಯ ತಂದೆ ರೈಫಲ್ ತಗೊಂಡು ಶೂಟ್ ಮಾಡಲು ಬಯಸಿದ್ದರಂತೆ! ಈಗ ಕ್ಷೇತ್ರದಲ್ಲಿ ಆಕೆಯ ಸಾಧನೆ ನೋಡಿ ಅದೇ ತಂದೆ ಹೆಮ್ಮೆ ಪಡುತ್ತಿದ್ದಾರೆ. ಯಾರೀಕೆ?
ನಾವು ಮಾತನಾಡುತ್ತಿರುವುದು ಬಾಲಿವುಡ್ 'ಕ್ವೀನ್' ಕಂಗನಾ ರಣಾವತ್ ಬಗ್ಗೆ. ಆಕೆ ಮೂಲತಃ ಕ್ಷತ್ರಿಯ ಕುಟುಂಬಕ್ಕೆ ಸೇರಿದವಳು. ಆಕೆಯ ಇಡೀ ಕುಟುಂಬವು ಸುಶಿಕ್ಷಿತರಾದರೂ ಸಾಂಪ್ರದಾಯಿಕ ಗುಣ ಹೊಂದಿರುವಂಥದ್ದು. ಮಹಿಳೆ ಲಕ್ಷ್ಮಣ ರೇಖೆಯನ್ನು ದಾಟಿದರೆ ರೈಫಲ್‌ನಿಂದ ಗುಂಡು ಹಾರಿಸುವುದಕ್ಕೂ ಹಿಂದೆ ಮುಂದೆ ನೋಡದಂಥ ಕುಟುಂಬ. ಯಾವಾಗ ಕಂಗನಾ ತಾನು ಮನರಂಜನಾ ಕ್ಷೇತ್ರಕ್ಕೆ ಹೋಗುತ್ತೇನೆಂದಳೋ ಆಗ ಆಕೆಯ ತಂದೆ ರಜಪೂತರ ಶೈಲಿಯಲ್ಲಿ 'ನನ್ನ ರೈಫಲ್ ತೆಗೆದುಕೊಳ್ಳಿ, ನಾನು ಅವಳನ್ನು ಶೂಟ್ ಮಾಡುತ್ತೇನೆ' ಎಂದು ಕೋಪದಲ್ಲಿ ಕೂಗಿದ್ದರಂತೆ. ಅಷ್ಟೇ ಅಲ್ಲ, ನಟನೆಯನ್ನು ಮುಂದುವರಿಸಲು ಬಯಸಿದರೆ, ತಂದೆತಾಯಿಯನ್ನು ಮರೆತು ಬಿಡಬೇಕು ಎಂದು ಎಚ್ಚರಿಸಿದ್ದರಂತೆ.
ಎಂಗೇಜ್‌ಮೆಂಟ್ ರೂಮರ್ಸ್ ನಡುವೆ ಪ್ಲಾಸ್ಟಿಕ್ ಕವರ್ ಮೈಗೆ ಸುತ್ತಿಕೊಂಡ ರಶ್ಮಿಕಾ: ಟೋಪಿ ಹಾಕಿದ್ಯಾರು ಎಂದ ಫ್ಯಾನ್ಸ್!
ಹೌದು, ವರ್ಷಗಳ ಹಿಂದೆ, ಕಂಗನಾ ರಣಾವತ್ ತನ್ನ ತಂದೆ ಬಾಲಿವುಡ್ ಪ್ರವೇಶಿಸುವ ನಿರ್ಧಾರವನ್ನು ಹೇಗೆ ವಿರೋಧಿಸಿದರು ಎಂಬುದನ್ನು ಸುದ್ದಿ ಚಾನೆಲ್ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ. ದೊಡ್ಡ ಕನಸು ಕಾಣಲು ತನ್ನ ತಂದೆ ಯಾವಾಗಲೂ ತನ್ನನ್ನು ಮತ್ತು ತನ್ನ ಒಡಹುಟ್ಟಿದವರನ್ನು ಪ್ರೋತ್ಸಾಹಿಸುತ್ತಿದ್ದರು ಎಂದು ನಟಿ ಬಹಿರಂಗಪಡಿಸಿದ್ದಾರೆ. ಆದರೆ ತನ್ನ ಕನಸುಗಳು ತುಂಬಾ ದೊಡ್ಡದಾದಾಗ, ಅವರು ಅದರ ವಿರುದ್ಧ ತಿರುಗಿದರು ಎಂದಾಕೆ ಹೇಳಿದ್ದಾರೆ.
ಪ್ರೀತಿಯಲ್ಲಿ ಮೋಸ ಹೋದ ನಟಿ ವಿಚ್ಚೇದನ ಪಡೆದ್ರು, ಭಾರತಕ್ಕೆ ಮರಳಿ ದಕ್ಷಿಣದ ಖ್ಯಾತ ವಿಲನ್ ಜತೆ ಮದುವೆಯಾದ್ರು!
ತಾನು ನಟಿಯಾಗಬೇಕು ಎಂದಾಗ ತಂದೆ ಹಾಗಿದ್ದರೆ 'ಹಮೇಂ ತ್ಯಾಗ್ ಕರ್ನಾ ಪಡೆಗಾ' ಎಂದು ನಿಖರವಾಗಿ ಹೇಳಿದ್ದರಂತೆ. ಹಾಗಿದ್ದರೂ, ತನ್ನ ಕನಸನ್ನೇ ಬೆಂಬತ್ತಿದ ಕಂಗನಾ ಮುಂಬೈ ಮತ್ತು ದೆಹಲಿಯಲ್ಲಿ ಏಕಾಂಗಿಯಾಗಿ ನಡೆಯುತ್ತಾ, ರಂಗಭೂಮಿ ಮತ್ತು ನಟನಾ ಕ್ಷೇತ್ರಕ್ಕೆ ಕಾಲಿಡಲು ನಿರ್ಧರಿಸಿದರಂತೆ.
ಕಡೆಗೂ ತಮ್ಮ ಕನಸನ್ನು ಬೆಂಬತ್ತಿದ ಕಂಗನಾ ಬಾಲಿವುಡ್‌ನಲ್ಲಿ ತಮ್ಮದೇ ಛಾಪನ್ನು ಬೀರುತ್ತಾ ದೊಡ್ಡ ಮಟ್ಟದ ಯಶಸ್ಸನ್ನು ಪಡೆದಿದ್ದಾರೆ. ಆಕೆಯ ಕುಟುಂಬವು ಅವಳ ಈ ಯಶಸ್ಸನ್ನು ನಿರೀಕ್ಷಿಸಿರಲಿಲ್ಲ. ಹಾಗಾಗಿ, ಅವಳು ಯಶಸ್ಸನ್ನು ಸಾಧಿಸಿದಾಗ ಮತ್ತು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಾಗ, ತಂದೆಗದು ಆಘಾತವಾಗಿತ್ತು. ಆದರೆ, ಆಗ ಮಗಳ ಸಾಧನೆಗಳ ಬಗ್ಗೆ ತಂದೆ ತುಂಬಾ ಹೆಮ್ಮೆ ಪಡುತ್ತಾರೆ ಎಂದು ಕಂಗನಾ ಹೇಳಿದ್ದಾರೆ.