ಕ್ರಿಕೆಟ್​ ಲೆಜೆಂಡ್​ ಸೌರವ್​ ಗಂಗೂಲಿ ಬಯೋಪಿಕ್​ಗೆ ಕೊನೆಗೂ ನಾಯಕನ ಆಯ್ಕೆ: ಯಾರಿಗೆ ಒಲಿದಿದೆ ಈ ಪಟ್ಟ?

By Suvarna News  |  First Published Jan 13, 2024, 3:55 PM IST

ಕ್ರಿಕೆಟ್​ ಲೆಜೆಂಡ್​ ಸೌರವ್​ ಗಂಗೂಲಿ ಬಯೋಪಿಕ್​ಗೆ ಕೊನೆಗೂ ನಾಯಕನ ಆಯ್ಕೆ ಆಗಿದೆ. ದಾದಾ ರೋಲ್​ ಮಾಡಲಿರುವ ನಟ ಯಾರು?  
 


ಕ್ರಿಕೆಟ್‌ನ ಲೆಜೆಂಡ್‌ಗಳಾದ ಎಂಎಸ್ ಧೋನಿ ಮತ್ತು ಕಪಿಲ್ ದೇವ್ ಅವರ ಬಯೋಪಿಕ್ ಸಿನಿಮಾಗಳಾಗಿದ್ದು, ಈ ಸಾಲಿಗೆ ಇದೀಗ ಮತ್ತೋರ್ವ ಕ್ರಿಕೆಟ್​ ತಾರೆ ಸೇರ್ಪಡೆಯಾಗಲಿದ್ದಾರೆ. ಅವರೇ   ಭಾರತ ತಂಡ ಶ್ರೇಷ್ಠ ಕ್ರಿಕೆಟರ್​, ಅತ್ಯುತ್ತಮ ನಾಯಕ ಸೌರವ್ ಗಂಗೂಲಿ. ಗಂಗೂಲಿ (Sourav Ganguly ) ಅವರ ಬಯೋಪಿಕ್​ಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.  ಭಾರತದ ಮಾಜಿ ಕ್ರಿಕೆಟಿಗ ಮತ್ತು ನಾಯಕ ಸೌರವ್ ಗಂಗೂಲಿ ಅವರ ಜೀವನವನ್ನು ಆಧರಿಸಿ ನಿರ್ಮಾಪಕರಾದ ಲುವ್ ರಂಜನ್ ಮತ್ತು ಅಂಕುರ್ ಗರ್ಗ್ ಸಿನಿಮಾ ಮಾಡುತ್ತಿದ್ದಾರೆ. ಉಡಾನ್, ಲೂಟೆರಾ ಮತ್ತು ಜುಬಿಲಿ ಮುಂತಾದ ಚಲನಚಿತ್ರಗಳನ್ನು ನಿರ್ದೇಶಿಸಿ ಹೆಸರುವಾಸಿಯಾಗಿದ್ದಾರೆ ಅಂಕುರ್​.  ಮಾಧ್ಯಮ ವರದಿಗಳ ಪ್ರಕಾರ, ವಿಕ್ರಮಾದಿತ್ಯ ಮೋಟ್ವಾನೆ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎನ್ನಲಾಗುತ್ತಿದ್ದರೂ, ಬಾಲಿವುಡ್‌ನ ಕಾರಿಡಾರ್‌ಗಳಿಂದ ಬರುತ್ತಿರುವ ಸುದ್ದಿಗಳನ್ನು ನಂಬಬೇಕಾದರೆ ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.  

ಇದೀಗ ಸೌರವ್​ ಅವರ ಪಾತ್ರವನ್ನು ಯಾರು ಮಾಡಲಿದ್ದಾರೆ ಎನ್ನುವ ವಿಷಯವನ್ನು ಚಿತ್ರತಂಡ ರಿವೀಲ್​ ಮಾಡಿದೆ.  ಸುಶಾಂತ್ ಸಿಂಗ್ ರಜಪೂತ್ ಅವರು ಎಂಎಸ್ ಧೋನಿ ಬಯೋಪಿಕ್ ಸಿನಿಮಾದಲ್ಲಿ ಎಂಎಸ್ ಧೋನಿ ಅವರ ಪಾತ್ರದಲ್ಲಿ ನಟಿಸಿದರೆ, ರಣವೀರ್ ಸಿಂಗ್ ಅವರು 1983 ಸಿನಿಮಾದಲ್ಲಿ ಕಪಿಲ್ ದೇವ್ ಅವರ ಪಾತ್ರವನ್ನು ನಿರ್ವಹಿಸಿದ್ದರು. ಇದೀಗ ಬಾಲಿವುಡ್​ ಸ್ಟಾರ್​ ಆಯುಷ್ಮಾನ್​ ಖುರಾನಾ ಗಂಗೂಲಿ ಬಯೋಪಿಕ್​ಗೆ  ಆಯ್ಕೆಯಾಗಿದ್ದಾರೆ. ಅಂಧಾಧುನ್ ಸಿನಿಮಾದ ಜತೆಗೆ ಹಲವಾರು ಜನಪ್ರಿಯ ಸಿನಿಮಾಗಳಲ್ಲಿ ನಟಿಸಿರುವ ಖ್ಯಾತಿ ಪಡೆದಿರುವ  ಖುರಾನಾ ಈಗ ಗಂಗೂಲಿ ಪಾತ್ರಧಾರಿಯಾಗಿ ಮಿಂಚಲಿದ್ದಾರೆ. ಪೀಪಿಂಗ್ ಮೂನ್ ನ ಸಂಸ್ಥೆ ಈ ಕುರಿತು ಮಾಹಿತಿ ನೀಡಿದೆ. ನಿರ್ದೇಶಕ ವಿಕ್ರಮಾದಿತ್ಯ ಮೋಟ್ವಾನೆ ಈ ಚಿತ್ರಕ್ಕಾಗಿ ಆಯುಷ್ಮಾನ್ ಖುರಾನಾ ಜತೆ ಒಪ್ಪಂದಕ್ಕೆ ಸಹಿ ಹಾಕಿಕೊಂಡಿದ್ದಾರೆ ಎಂದು ಹೇಳಿದೆ.

Tap to resize

Latest Videos

ಮಾಜಿ ಭಾವಿ ಪತಿಯೇ ಬೇರೆ, ಮದ್ವೆಯಾಗಿದ್ದೇ ಬೇರೆಯವರನ್ನಾ? ಏನಿದು ಆಮೀರ್​ ಖಾನ್​ ಪುತ್ರಿಯ ಹೊಸ ವಿಷ್ಯ?

ಅಷ್ಟಕ್ಕೂ ಆಯುಷ್ಮಾನ್ ಖುರಾನಾ ಅವರನ್ನೇ ಈ ಪಾತ್ರಕ್ಕೆ ಆಯ್ಕೆ ಮಾಡಲು ಕಾರಣವೂ ಇದೆ. ಅದೇನೆಂದರೆ, ಕ್ರಿಕೆಟ್​ ಪ್ರಿಯರಿಗೆ ತಿಳಿದಿರುವಂತೆ ಸೌರವ್ ಗಂಗೂಲಿಯವರು  ಎಡಗೈ ಬ್ಯಾಟ್ಸ್‌ಮನ್. ಆಯುಷ್ಮಾನ್​ ಖುರಾನಾ ಕೂಡ ಎಡಗೈ ಬ್ಯಾಟ್ಸ್​ಮನ್​. ಆದ್ದರಿಂದ ಗಂಗೂಲಿ  ಜೀವನಚರಿತ್ರೆಗೆ ಪರಿಪೂರ್ಣ ಫಿಟ್ ಆಗಿದ್ದಾರೆ ಎಂದಿದೆ ಚಿತ್ರತಂಡ. ಖುರಾನಾ ಅವರಿಗೂ ಮುನ್ನ ರಣವೀರ್​ ಕಪೂರ್​ ಹೆಸರು ಚಾಲ್ತಿಯಲ್ಲಿತ್ತು.  ಕಾರ್ತಿಕ್ ಆರ್ಯನ್ ಹೆಸರೂ ಕೇಳಿ ಬಂದಿತ್ತು.  ಆದರೆ ಸೌರವ್ ಗಂಗೂಲಿ ಅವರೇ ಆಯುಷ್ಮಾನ್ ಖುರಾನಾಗೆ ಈ ಪಾತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.  

 ಇನ್ನು ಕುತೂಹಲದ ಸಂಗತಿಯೆಂದರೆ ಈ ಬಯೋಪಿಕ್​ನಲ್ಲಿ  ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಕೂಡ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.  ಚಿತ್ರದ ಶೂಟಿಂಗ್ 2024ರ ಕೊನೆಯ ಹಂತಗಳಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ.

ಮಿಸ್ಟರಿ ಮ್ಯಾನ್ ಜೊತೆ ನಟಿ ಕಂಗನಾ ರಣಾವತ್!​ ಕೈಕೈಹಿಡಿದು ನಡೆದ ಈ ವಿದೇಶಿಗ ಯಾರು?
 

click me!