ನನ್ನನ್ನು ನಿರ್ದೇಶಿಸುವಷ್ಟು ಅರ್ಹತೆ ಒಬ್ಬನೇ ಒಬ್ಬ ನಿರ್ದೇಶಕನಿಗಿಲ್ಲ: ಕಂಗನಾ ಗುಡುಗಿದ್ದು ಯಾಕೆ?

By Shriram Bhat  |  First Published Jan 10, 2025, 3:53 PM IST

ಈ ಹಿಂದೆ ನಟಿ ಕಂಗನಾ ರಣಾವತ್ ಅವರು ಬಹಳಷ್ಟು ನಿರ್ದೇಶಕರ ಜೊತೆಗೆ ಕೆಲಸ ಮಾಡಿದ್ದಾರೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಹೆಸರಿಗೆ ಬೇರೆ ಡೈರೆಕ್ಟರ್ ಇದ್ದರೂ ಸಹ ತಮ್ಮ ಸಿನಿಮಾವನ್ನು ಸ್ವತಃ ಕಂಗನಾ ಅವರೇ ನಿರ್ದೇಶನ ಮಾಡುತ್ತಾರೆ. ಅವರಿಗೆ ನಿರ್ದೇಶನದ ಗ್ರಾಮರ್ ಕೂಡ ಸಿದ್ಧಿಸಿದೆ. 'ಮಣಿಕರ್ಣಿಕಾ' ಚಿತ್ರವನ್ನು..


ಬಾಲಿವುಡ್ ನಟಿ, ನ್ಯಾಷನಲ್ ಅವಾರ್ಡ್ ವಿನ್ನರ್ ಹಾಗೂ ಹಿಮಾಚಲ ಪ್ರದೇಶದ ಸಂಸದೆ ಕಂಗನಾ ರಣಾವತ್ (Kangana Ranaut) ಮತ್ತೆ ಗುಡುಗಿದ್ದಾರೆ. 'ನನ್ನನ್ನು ನಿರ್ದೇಶಿಸುವಷ್ಟು ಅರ್ಹತೆ ಒಬ್ಬನೇ ಒಬ್ಬ ನಿರ್ದೇಶಕನಿಗಿಲ್ಲ' ಎಂದಿದ್ದಾರೆ ನಟಿ ಕಂಗನಾ. ಯಾವತ್ತೂ ಸುಖಾಸುಮ್ಮನೇ ಏನೋ ಹೇಳುವವರಲ್ಲ ನಟಿ ಕಂಗನಾ. ಅವರಿಗೆ ಏನಾದ್ರೂ ಸಮಸ್ಯೆ ಆದಾಗ ಬಾಯಿ ಮುಚ್ಚಿಕೊಂಡು ಕೂಡ್ರುವವರೂ ಅಲ್ಲ. ಇದೀಗ ಅವರು ಈ ಮಾತು ಹೇಳಿದ್ದಾರೆ ಎಂದರೆ ಖಂಡಿತವಾಗಿ ಅದೇನೋ ಆಗಿರುತ್ತೆ ಅವರ ಲೈಫಲ್ಲಿ ಎನ್ನಲೇಬೇಕು. ಹಾಗಿದ್ದರೆ ಅದೇನು?

ನಿಖರವಾಗಿ ಆ ಬಗ್ಗೆ ಹೇಳಲು ಸಾಧ್ಯವಿಲ್ಲ. ಆದರೆ, ಸದ್ಯ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಎಂಪಿ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ ನಟಿ ಕಂಗನಾ. ಯಾವುದೇ ಸಂದರ್ಶನದಲ್ಲಿ ನಟಿ, ಎಂಪಿ ಕಂಗನಾ ರಣಾವತ್‌ ಅವರಿಗೆ 'ನೀವು ಸದ್ಯ ಸಿನಿಮಾದಲ್ಲಿ ಯಾಕೆ ನಟಿಸುತ್ತಿಲ್ಲ' ಎಂಬ ಪ್ರಶ್ನೆ ಕೇಳಲಾಗಿದೆ' ಅದಕ್ಕೆ ಉತ್ತರವನ್ನು ಅವರು ನೀಡಿದ್ದಾರೆ. ಜೊತೆಗೆ, 'ನಿಮ್ಮ ಸಿನಿಮಾವನ್ನು ನೀವೇ ಯಾಕೆ ನಿರ್ದೇಶನ ಮಾಡಲು ಬಯಸುತ್ತೀರಿ' ಎಂಬ ಪ್ರಶ್ನೆಗೆ ಅವರು 'ನನ್ನನ್ನು ನಿರ್ದೇಶಿಸುವಷ್ಟು ಅರ್ಹತೆ ಒಬ್ಬನೇ ಒಬ್ಬ ನಿರ್ದೇಶಕನಿಗಿಲ್ಲ' ಎಂದಿದ್ದಾರೆ. 

Tap to resize

Latest Videos

ನಾಗಚೈತನ್ಯ ಹೇಳಿದ್ದು ಕೊನೆಗೂ ಬಾಯ್ಬಿಟ್ಟ ಸಮಂತಾ; ಸತ್ಯ ಒಂದಿನ ಹೊರಗೆ ಬರಲೇಬೇಕು!

ಈ ಹಿಂದೆ ನಟಿ ಕಂಗನಾ ರಣಾವತ್ ಅವರು ಬಹಳಷ್ಟು ನಿರ್ದೇಶಕರ ಜೊತೆಗೆ ಕೆಲಸ ಮಾಡಿದ್ದಾರೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಹೆಸರಿಗೆ ಬೇರೆ ಡೈರೆಕ್ಟರ್ ಇದ್ದರೂ ಸಹ ತಮ್ಮ ಸಿನಿಮಾವನ್ನು ಸ್ವತಃ ಕಂಗನಾ ಅವರೇ ನಿರ್ದೇಶನ ಮಾಡುತ್ತಾರೆ. ಅವರಿಗೆ ನಿರ್ದೇಶನದ ಗ್ರಾಮರ್ ಕೂಡ ಸಿದ್ಧಿಸಿದೆ. 'ಮಣಿಕರ್ಣಿಕಾ' ಚಿತ್ರವನ್ನು ನಿರ್ದೇಶಿಸಿದ್ದೂ ಅಲ್ಲದೇ ಅದನ್ನು ಗೆಲ್ಲಿಸಿಕೊಂಡಿದ್ದಾರೆ ಕೂಡ. ನಟಿ ಕಂಗನಾ 'ಜೀರೋದಿಂದ ಹೀರೋ' ಎಂಬಂತೆ ಬೆಳೆದು ಬಾಲಿವುಡ್‌ನ ಸ್ಟಾರ್ ಹೀರೋಯಿನ್ ಆಗಿ ಬೆಳೆದವರು. 

ಕೇವಲ ಸಿನಿಮಾ ನಟಿ-ನಿರ್ದೇಶಕಿ ಮಾತ್ರವಲ್ಲ, ಈಗ ಹಿಮಾಚಲ ಪ್ರದೇಶದ ಎಂಪಿಯಾಗಿಯೂ ಮಿಂಚುತ್ತಿದ್ದಾರೆ ನಟಿ ಕಂಗನಾ ರಣಾವತ್. ಬಾಲ್ಯದಲ್ಲಿ ಬಡತನದ ಬೇಗೆಯಲ್ಲಿ, ಶೋಷಣೆಯಲ್ಲಿ ನೊಂದು ಬೆಂದಿದ್ದ ಕಂಗನಾ ಅವರು, ಯಾವುದೇ ಗಾಡ್ ಫಾದರ್ ಇಲ್ಲದೇ ಬಾಲಿವುಡ್ ಚಿತ್ರರಂಗದಲ್ಲಿ ಈ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಸ್ಟಾರ್ ನಟರ ಲೆವಲ್ಲಿಗೇ ಬೆಳೆದು ತೋರಿಸಿರುವ ಕಂಗನಾ, ಸದ್ಗುರು ಜಗ್ಗಿ ವಾಸುದೇವ್ ಅವರ ಫಾಲೋವರ್ ಕೂಡ ಹೌದು. ಆಧ್ಯಾತ್ಮ ಸಾಧನೆಯಲ್ಲಿ ಕೂಡ ತಮ್ಮನ್ನು ತೊಡಗಿಸಿಕೊಂಡಿರುವ ಕಂಗನಾ, ರಾಜಕೀಯವಾಗಿ ಎತ್ತರಕ್ಕೆ ಬೆಳೆಯುತ್ತಿದ್ದಾರೆ.

ಅಣ್ಣಾವ್ರ ಬಗ್ಗೆ ಸುದೀಪ್ ಅಂದು ಹೇಳಿದ್ದ ಮಾತು ಇಂದು ವೈರಲ್, ಕಾಮೆಂಟ್ಸ್ ಸುರಿಮಳೆ! 

click me!