ನಾನು ಗೋಮಾಂಸ ತಿಂತೀನಿ; ರಣಬೀರ್ ಬಳಿಕ 'ಕಾಶ್ಮೀರ್ ಫೈಲ್ಸ್' ನಿರ್ದೇಶಕ ಅಗ್ನಿಹೋತ್ರಿ ಹೇಳಿಕೆ ವೈರಲ್

By Shruiti G Krishna  |  First Published Sep 9, 2022, 3:44 PM IST

ಬಾಲಿವುಡ್ ಸ್ಟಾರ್ ನಟ ರಣಬೀರ್ ಕಪೂರ್ ಗೋಮಾಂಸ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇದೀಗ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಗೋಮಾಂಸ ತಿಂತೀನಿ ಅಂತ ಹೇಳಿದ್ದ  ಹಳೆಯ ವಿಡಿಯೋ ವೈರಲ್ ಆಗಿದೆ.  


ಬಾಲಿವುಡ್ ಸ್ಟಾರ್ ನಟ ರಣಬೀರ್ ಕಪೂರ್ ಗೋಮಾಂಸ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು. 12 ವರ್ಷಗಳ ಹಿಂದೆ ರಣಬೀರ್ ಕಪೂರ್ ಗೋಮಾಂಸ ತುಂಬ ಇಷ್ಟವೆಂದಿದ್ದ ರಣಬೀರ್ ಕಪೂರ್ ಹಳೆಯ ವಿಡಿಯೋ ಈಗ ವೈರಲ್ ಆಗಿದ್ದು ಭಾರಿ ವಿರೋಧ ವ್ಯಕ್ತವಾಗಿತ್ತು. ಬ್ರಹ್ಮಾಸ್ತ್ರ ಸಿನಿಮಾ ರಿಲೀಸ್ ಸಮಯದಲ್ಲಿ ಹಳೆಯ ವಿಡಿಯೋ ವೈರಲ್ ಆಗಿದ್ದು ಬ್ರಹ್ಮಾಸ್ತ್ರ ಬಾಯ್ಕಟ್ಗೆ ಕರೆಕೊಡಲಾಗಿತ್ತು. ಅಲ್ಲದೆ ರಕಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರನ್ನು ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನ ಪ್ರವೇಶಿಸದಂತೆ ತಡೆದು ಬಜರಂಗ ದಳ ಪ್ರತಿಭಟನೆ ಸಹ ಮಾಡಿತ್ತು. ರಣಬೀರ್ ಕಪೂರ್ ಹಳೆಯ ವಿಡಿಯೋ ವೈರಲ್ ಆದ ಬೆನ್ನಲ್ಲೇ ಇದೀಗ ಕಾಶ್ಮೀರ್ ಫೈಲ್ಸ್ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಗೋಮಾಂಸ ಬಗ್ಗೆ ನೀಡಿದ್ದ ಹೇಳಿಕೆ ವೈರಲ್ ಆಗಿದೆ. 

ರಣಬೀರ್ ಕಪೂರ್ ನಟನೆಯ ಬ್ರಹ್ಮಾಸ್ತ್ರ ಸಿನಿಮಾವನ್ನು ಟೀಕಿಸಿದ್ದ ವಿವೇಕ ಅಗ್ನಿಹೋತ್ರಿ ಗೋಮಾಂಸ ತಿನ್ನುತ್ತಾರೆ ಎಂದು ನೆಟ್ಟಿಗರು ವಿಡಿಯೋ ವೈರಲ್ ಮಾಡಿದ್ದಾರೆ. ಹಳೆಯ ವಿಡಿಯೋ ಒಂದರಲ್ಲಿ ಅಗ್ನಿಹೋತ್ರಿ, ಉತ್ತಮ ಗೋಮಾಂಸ ಎಲ್ಲಿ ಸಿಗುತ್ತದೆ ಎಂದು ನಾನು ಬರೆದಿದ್ದೀನಿ. ನಾನು ಈ ಬಗ್ಗೆ ಅನೇಕ ವಿಷಯ ಬರೆದಿದ್ದೀನಿ. ನಾನು ತಿನ್ನುತ್ತೇನೆ. ಆದರೆ ನನ್ನ ಜೀವನದಲ್ಲಿ ಏನು ಬದಲಾಗಿಲ್ಲ' ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ. 

Tap to resize

Latest Videos

ಅಗ್ನಿಹೋತ್ರಿ ಅವರ ಈ ವಿಡಿಯೋವನ್ನು ಕಪೂರ್ ಅಭಿಮಾನಿಗಳು ಶೇರ್ ಮಾಡಿ ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಇದು ಅವರ ವಯಕ್ತಿಕ ವಿಚಾರ ಆದರೆ ಅವರು ಹೇಳಿದ್ದು ಸರಿಯಿಲ್ಲ ಎನ್ನುತ್ತಿದ್ದಾರೆ. ಮತ್ತೋರ್ವ ನೆಟ್ಟಿಗ ಪ್ರತಿಕ್ರಿಯೆ ನೀಡಿ, ರಣಬೀರ್ ಮತ್ತು ಆಲಿಯಾ ಉಜ್ಜಯಿನಿಯ ದೇವಸ್ಥಾನದ ಆವರಣ ಪ್ರವೇಶಿಸಲು ಬಿಟ್ಟಿಲ್ಲ.   ಹಾಗಾಗಿ ವಿವೇಕ್ ಅಗ್ನಿಹೋತ್ರಿ ಕಾಶ್ಮೀರ ಫೈಲ್ಸ್ ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಅವರೊಂದಿಗೆ ದೇವಾಲಯದ ಒಳಗೆ ನಿಂತಿರುವ ಫೋಟೋ ಶೇರ್ ಮಾಡಿ, 'ಅವರು ಸಹ ಗೋಮಾಂಸ ತಿನ್ನುತ್ತಾನರೆ, ಅವರಿಗೆ ಏಕೆ ಅನುಮತಿಸಲಾಗಿದೆ?' ಎಂದು ಪ್ರಶ್ನಿಸಲಾಗಿದೆ.

They will never show you this video of @/vivekagnihotri who is a eater too, and that's his personal choice.

But it won't fit their narrative and agenda, But You guys stay away from those guys and keep booking tickets and enjoy in theatres pic.twitter.com/5SCZG9IHYa

— 𝘽𝙍𝘼𝙃𝙈𝘼𝙎𝙏𝙍𝘼 𝘿𝘼𝙔 🔥 | R 0 NIT 彡 (@imvengeance24)

ಗೋಮಾಂಸ ತುಂಬಾ ಇಷ್ಟ; ರಣಬೀರ್ ಕಪೂರ್ ಹೇಳಿಕೆ ವೈರಲ್, 'ಬ್ರಹ್ಮಾಸ್ತ್ರ' ಬಾಯ್ಕಟ್‌ಗೆ ಒತ್ತಾಯ

ರಣಬೀರ್ ಕಪೂರ್ ಹೇಳಿದ್ದೇನು?

ಅನೇಕ ವರ್ಷಗಳ ಹಿಂದೆ ಅಂದರೆ 2012ರ ಸಂದರ್ಶನವೊಂದರಲ್ಲಿ ರಣಬೀರ್ ಕಪೂರ್, 'ನಮ್ಮ ಮನೆಯಲ್ಲಿ ಬೆಳಿಗ್ಗೆಯ ಉಪಹಾರಕ್ಕೆ ಹೆಚ್ಚಾಗಿ ಮಾಂಸಹಾರ ಸೇವಿಸುತ್ತೇವೆ. ಅದು ತುಂಬಾ ಕಷ್ಟ. ನಮ್ಮ ಕುಟುಂಬ ಪೇಶಾವರದಿಂದ ಬಂದಿರುವುದು. ಪೇಶಾವರಿಗಳು ಆಹಾರ ಪ್ರೀಯರು. ನಾನು ಕೂಡ ಮಟನ್, ಗೋಮಾಂಸ, ರೆಡ್ ಮೀಟ್ ಪ್ರೀಯ. ನಾನು ಗೋಮಾಂಸವನ್ನು ಹೆಚ್ಚಾಗಿ ಇಷ್ಟಪಡುತ್ತೇನೆ' ಎಂದು ಹೇಳಿದ್ದರು. 

ರಣಬೀರ್‌ಗೆ ಕಂಟಕವಾದ ಗೋಮಾಂಸ ಹೇಳಿಕೆ; ಉಜ್ಜಯಿನಿ ದೇವಸ್ಥಾನ ಪ್ರವೇಶಿಸದಂತೆ ತಡೆದ ಬಜರಂಗದಳ ಕಾರ್ಯಕರ್ತರು

ಹಿಂದೂಗಳೂ ಗೋವನ್ನು ಪವಿತ್ರವೆಂದು ನಂಬಿದ್ದಾರೆ, ಗೋವನ್ನು ಪೂಜಿಸುತ್ತಾರೆ. ಹಾಗಾಗಿ ರಣಬೀರ್ ಕಪೂರ್ ಹೇಳಿಕೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದರು. ಅದರಲ್ಲೂ ಬ್ರಹ್ಮಾಸ್ತ್ರದಲ್ಲಿ ರಣಬೀರ್ ಕಪೂರ್ ಶಿವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಗೋಮಾಂಸ ತಿನ್ನುವ ವ್ಯಕ್ತಿ ದೇವರಾಗಲೂ ಹೇಗೆ ಸಾಧ್ಯ ಎಂದು ನೆಟ್ಟಿಗರು ಕಾಮೆಂಟ್ ಮಾಡಿ ಆಕ್ರೋಶ ಹೊರಹಾಕಿದ್ದರು. 

click me!