Tha Kashmir Files ಒಂದೇ ದಿನ 24 ಕೋಟಿ ಸಂಗ್ರಹಿಸಿ ‘ಕಾಶ್ಮೀರ್‌ ಫೈಲ್ಸ್‌’ ದಾಖಲೆ!

Published : Mar 21, 2022, 04:19 AM IST
Tha Kashmir Files ಒಂದೇ ದಿನ 24 ಕೋಟಿ ಸಂಗ್ರಹಿಸಿ ‘ಕಾಶ್ಮೀರ್‌ ಫೈಲ್ಸ್‌’ ದಾಖಲೆ!

ಸಾರಾಂಶ

ಚಿತ್ರವು 2ನೇ ವಾರದ ವೇಳೆಗೆ 165 ಕೋಟಿ ರು.ಗೂ ಅಧಿಕ ಗಳಿಕೆ  ಸಾಧ್ಯತೆ ಕನ್ನಡ ಸೇರಿ ಹಲವು ಭಾಷೆಗಳಿಗೆ ಚಿತ್ರ ಡಬ್, ಖಚಿತ ಪಡಿಸಿದ ತಂಡ 150 ಕೋಟಿ ರೂಪಾಯಿ ಗಳಿಕೆ ಮಾಡಿದ ಕಾಶ್ಮೀರ್ ಫೈಲ್ಸ್ ಚಿತ್ರ

ಮುಂಬೈ(ಮಾ.21) : ವಿವೇಕ್‌ ಅಗ್ನಿಹೋತ್ರಿ ಅವರ ‘ದಿ ಕಾಶ್ಮೀರ್‌ ಫೈಲ್ಸ್‌ ’ಸಿನಿಮಾ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದ್ದು ಚಿತ್ರ ಪ್ರದರ್ಶನವಾದ 9ನೇ ದಿನ ಮತ್ತೊಂದು ದಾಖಲೆ ನಿರ್ಮಿಸಿದೆ. ಶನಿವಾರ ಒಂದೇ ದಿನ ಚಿತ್ರ 24.80 ಕೋಟಿ ಗಳಿಸುವ ಮೂಲಕ ಮತ್ತೊಂದು ದಾಖಲೆ ನಿರ್ಮಾಣ ಮಾಡಿದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.

ಶುಕ್ರವಾರ 20 ಕೋಟಿ ರು. ಗಳಿಸಿದ್ದ ಚಿತ್ರ ತನ್ನದೇ ಸಾಧನೆ ಉತ್ತಮಪಡಿಸಿಕೊಂಡಿದೆ. ಇಲ್ಲಿಯವರೆಗೆ ಚಿತ್ರದ ಒಟ್ಟು ಗಳಿಕೆ 141.25 ಕೋಟಿಗೆ ತಲುಪಿದೆ. ಚಿತ್ರವು 2ನೇ ವಾರದ ವೇಳೆಗೆ 165 ಕೋಟಿ ರು.ಗೂ ಅಧಿಕ ಗಳಿಕೆ ಮಾಡಬಹುದೆಂದು ವಿಶ್ಲೇಷಕರು ತಿಳಿಸಿದ್ದಾರೆ.

ಈ ಚಿತ್ರವು ಮೊದಲ ವಾರವೇ 97 ಕೋಟಿ ರು. ಗಳಿಸಿತ್ತು. ಇದೀಗ ಚಿತ್ರ 4000ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ತೆರೆ ಕಾಣುತ್ತಿದ್ದು ಶೀಘ್ರದಲ್ಲಿ ಕನ್ನಡ, ಮಲೆಯಾಳಿ, ತಮಿಳು ಮತ್ತು ತೆಲುಗು ಭಾಷೆಗಳಿಗೂ ಡಬ್‌ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ.

The Kashmir Files ಚಿತ್ರ ನೋಡಿ ವಾಪಸಾಗುವ ವೇಳೆ ಬಿಜೆಪಿ ಸಂಸದನ ಮೇಲೆ ಬಾಂಬ್ ದಾಳಿ!

ಕಾಶ್ಮೀರ ಫೈಲ್ಸ್ ಚಿತ್ರಕ್ಕೆ ನ್ಯೂಜಿಲೆಂಡ್‌ನಲ್ಲಿ ತಡೆ
ಕಾಶ್ಮೀರಿ ಪಂಡಿತರ ಮೇಲಿನ ದೌರ್ಜನ್ಯದ ಕಥಾ ಹಂದರವುಗಳ್ಳ ‘ಕಾಶ್ಮೀರ್‌ ಫೈಲ್ಸ್‌’ ಚಿತ್ರದ ಬಿಡುಗಡೆಯನ್ನು ನ್ಯೂಜಿಲೆಂಡ್‌ನಲ್ಲಿ ತಡೆ ಹಿಡಿಯಲಾಗಿದೆ. ಈ ಹಿಂದೆ ಚಿತ್ರಕ್ಕೆ ಅನುಮತಿ ನೀಡಿದ ನ್ಯೂಜಿಲೆಂಡಿನ ಚಲನಚಿತ್ರ ಸೆನ್ಸಾರ್‌ ಮಂಡಳಿಯು ಕೆಲವು ಸಮುದಾಯಗಳು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತನ್ನ ನಿರ್ಧಾರವನ್ನು ಮರುಪರಿಶೀಲಿಸಲು ಮುಂದಾಗಿದೆ.

ಇದಕ್ಕೆ ನ್ಯೂಜಿಲೆಂಡಿನ ಮಾಜಿ ಉಪಪ್ರಧಾನಿ ವಿನ್‌ಸ್ಟನ್‌ ಪೀಟರ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು,‘ಉಗ್ರವಾದವು ಯಾವುದೇ ರೂಪದಲ್ಲಿದ್ದರೂ ಅದನ್ನು ಬಯಲಿಗಳೆಯಬೇಕು. ಚಿತ್ರವನ್ನು ಸೆನ್ಸಾರ್‌ ಮಾಡುವುದು ನ್ಯೂಜಿಲೆಂಡಿನ ಜನತೆಯ ಸ್ವಾತಂತ್ರ್ಯದ ಮೇಲೆ ದಾಳಿ ಮಾಡಿದಂತೆ’ ಎಂದಿದ್ದಾರೆ.

ರಾಜಕೀಯ ಹೇಗೆ ಗುಲಾಮಗಿರಿಗೆ ಒಳಗಾಗಿತ್ತು ಅನ್ನೋದನ್ನ 'ದಿ ಕಾಶ್ಮೀರ್ ಫೈಲ್ಸ್' ತೋರಿಸಿದೆ: ನಳಿನ್ ಕಟೀಲ್

ವಿವೇಕ ಅಗ್ನಿಹೋತ್ರಿ ನಿರ್ಮಾಣದ ಈ ಚಿತ್ರವು ಮಾಚ್‌ರ್‍ 11 ರಂದು ಬಿಡುಗಡೆಯಾಗಿತ್ತು. ನ್ಯೂಜಿಲೆಂಡ್‌ ಸೆನ್ಸಾರ್‌ ಮಂಡಳಿಯು 16 ವರ್ಷ ಹಾಗೂ ಅದಕ್ಕೂ ಮೇಲ್ಪಟ್ಟನಾಗರಿಕರಿಗೆ ಚಿತ್ರವನ್ನು ವೀಕ್ಷಿಸಲು ಅನುಮತಿ ನೀಡುವ ಪ್ರಮಾಣಪತ್ರವನ್ನು ನೀಡಿತ್ತು. ಆದರೆ ಮುಸ್ಲಿಂ ಸಮುದಾಯವು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದಕ್ಕಾಗಿ ಚಿತ್ರದ ಬಿಡುಗಡೆಯ ಮೇಲೆ ತಡೆಯೊಡ್ಡಲಾಗಿದೆ.

ಭಾರತದಲ್ಲಿ ದಿ ಕಾಶ್ಮೀರ ಫೈಲ್ಸ್ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕಾಂಗ್ರೆಸ್ ಸೇರಿದಂತೆ ಹಲವರು ಕಾಶ್ಮೀರ ಫೈಲ್ಸ್ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದೆ. ಇದು ಬಿಜೆಪಿ ಹಾಗೂ ಆರ್‌ಎಸ್ಎಸ್ ಕುತಂತ್ರ ಎಂದಿದೆ. ಆದರೆ ಈ ಚಿತ್ರ ನೋಡಿದ ಭಾರತೀಯರು ಪಂಡಿತರ ಮೇಲೆ ನಡೆದ ನರಮೇಧಕ್ಕೆ ಮರುಗುತ್ತಿದ್ದಾರೆ.

ಪೇಜಾವರ ಶ್ರೀಗಳಿಂದ ಕಾಶ್ಮೀರ ಫೈಲ್ಸ್‌ ವೀಕ್ಷಣೆ
ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮತ್ತು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಶನಿವಾರ ಸಂಜೆ ಮಣಿಪಾಲದ ಭಾರತ್‌ ಮಾಲ್‌ ಸಿನೆಮಾ ಮಂದಿರದಲ್ಲಿ ದಿ.ಕಾಶ್ಮೀರ್‌ ಫೈಲ್ಸ್‌ ಸಿನಿಮಾ ವೀಕ್ಷಿಸಿದರು. ಈ ಸಂದರ್ಭ ಶ್ರೀಗಳ ಸುಮಾರು 35 ಶಿಷ್ಯಂದಿರು ಸಹ ಇದ್ದರು.

ಥಿಯೇಟರ್‌ಗೆ ಹೋಗಿ ಕಾಶ್ಮೀರ ಫೈಲ್ಸ್‌ ಸಿನಿಮಾ ನೋಡಿದ ಮಂತ್ರಾಲಯ ಶ್ರೀ
ಗಂಗಾವತಿಯ ಪೂರ್ಣಿಮಾ ಚಿತ್ರಮಂದಿರದಲ್ಲಿ ‘ಕಾಶ್ಮೀರ ಫೈಲ್ಸ್‌’ ಚಿತ್ರವನ್ನು ಮಂತ್ರಾಲಯದ ಸುಬುಧೇಂದ್ರ ತೀರ್ಥ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ವೀಕ್ಷಿಸಿದರು. ಸುಳೇಕಲ್‌ ಭುವನೇಶ್ವರಯ್ಯ ಸ್ವಾಮಿ, ಅರಳಿಹಳ್ಳಿ ಗವಿಸಿದ್ದಯ್ಯ ಸ್ವಾಮೀಜಿ, ತಲೆಖಾನ್‌ ಮಠದ ವೀರಭದ್ರಯ್ಯಸ್ವಾಮೀಜಿ, ಶಾಸಕ ಪರಣ್ಣ ಮುನವಳ್ಳಿ, ಸಿನಿಮಾ ವೀಕ್ಷಿಸಿದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?