ಪುನೀತ್ ರಾಜಕುಮಾರ್‌ರವರು ಶಸ್ತ್ರ ಚಿಕಿತ್ಸೆಗೆ ನೆರವಾಗಿದ್ದ ಯುವತಿ ಸಾವು!

By Ravi Janekal  |  First Published Apr 21, 2023, 10:10 AM IST

ದಿ.ಪುನೀತ್ ರಾಜಕುಮಾರರು ಶಸ್ತ್ರಚಿಕಿತ್ಸೆ ಸಹಾಯ ಮಾಡಿದ್ದ ಚನ್ನಗಿರಿ ಪಟ್ಟಣದ ಕಣಸಾಲು ಬಡಾವಣೆಯ ನಿವಾಸಿ ಕುಮಾರ್‌ ಎಂಬುವರ ಪುತ್ರಿ ಪ್ರೀತಿ (18) ಎ೦ಬ ಯುವತಿ ಬುಧುವಾರ ಸ೦ಜೆ ನಿಧನರಾದರು.


ಚನ್ನಗಿರಿ (ಏ.21): ಚನ್ನಗಿರಿ ಪಟ್ಟಣದ ಕಣಸಾಲು ಬಡಾವಣೆಯ ನಿವಾಸಿ ಕುಮಾರ್‌ ಎಂಬುವರ ಪುತ್ರಿ ಪ್ರೀತಿ (18) ಎ೦ಬ ಯುವತಿ ಬುಧುವಾರ ಸ೦ಜೆ ನಿಧನರಾದರು.

ಮೃತ ಯುವತಿಗೆ 2017ರಲ್ಲಿ ಕಿಡ್ನಿಯ ಸಮಸ್ಯೆ ಯಿಂದ ಬಳಲುತ್ತಿದ್ದರು ಈ ಯುವ ತಿಯ ಚಿಕಿತ್ಸೆಗಾಗಿ ಬದಲಿ ಕಿಡ್ನಿ ಯನ್ನು ಹಾಕಲು ಮೃತಳ ತಂದೆಯ ಕಿಡ್ನಿ ದಾನ ಮಾಡಿದ್ದರು. ಈ ಯುವತಿಯ ಆಸ್ಪತ್ರೆಯ ಚಿಕಿತ್ಸಾ ವೆಚ್ಚಕ್ಕಾಗಿ ಮಾಧ್ಯಮಗಳ ಮೂಲಕ ಮನವಿ ಮಾಡಿಕೊ೦ಡ ಹಿನ್ನಲೆಯಲ್ಲಿ ಚಿತ್ರ ನಟ ಪುನೀತ್ ರಾಜ್‌ಕುಮಾರ್(Puneeth rajkumar) ಆಸ್ಪತ್ರೆಯ ಚಿಕಿತ್ಸಾ ವೆಚ್ಚವಾದ 12.50ಲಕ್ಷ ರುಪಾಯಿ ಹಣವನ್ನು ಚಿಕಿತ್ಸೆ ನೀಡುತ್ತಿದ್ದ ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆ(Manipal hospital)ಗೆ ನೀಡಿದ್ದರು.

Tap to resize

Latest Videos

 

ಅಪ್ಪು ನಿಧನರಾದಾಗ ರಮ್ಯಾ ಎಲ್ಲಿದ್ರು? ಪುನೀತ್ ಜೊತೆಗಿನ ನೆನೆಪು ಬಿಚ್ಚಿಟ್ಟು ಭಾವುಕರಾದ ಮೋಹಕತಾರೆ

ಮ೦ಜುಳಾ ಕುಮಾರ್ ಎಂಬ ದಂಪ ತಿಯ ಪುತ್ರಿಯಾದ ಮೃತ ಪ್ರೀತಿ ತನಗೆ ಗುಣ ಪಡಿಸಲು ಸಹಾಯ ಮಾಡಿದ ಚಿತ್ರ ನಟ ಪುನೀತ್ ರಾಜ್‌ಕುಮಾರ್ ಇವರ ಭಾವಚಿತ್ರವನ್ನು ಪೂಜಿಸುತ್ತಿದ್ದಳು.

ಪುನೀತ್ ಜೊತೆ ಮೃತ ಪ್ರೀತಿ,

ಚಿಕಿತ್ಸೆಯಿಂದ ಗುಣಮುಖಳಾದಾಗ ಯುವತಿಯ ತಂದೆ-ತಾಯಿ ಪ್ರೀತಿಯನ್ನು ಪುನೀತ್ ಮನೆಗೆ ಕರೆದುಕೊಂಡು ಹೋಗಿ ಕೃತಜ್ಞತೆ ತಿಳಿಸಿ ಬಂದಿದ್ದರು. ಕಳೆದ ವಾರ ದಿ೦ದ ಆನಾರೋಗ್ಯ ಪೀಡಿತಳಾದ ಯುವ ತಿಯನ್ನು ದಾವಣಗೆರೆಯ ಆಸ್ಪತ್ರೆ(Davanagere hospital)ಯಲ್ಲಿ ಪರೀಕ್ಷಿಸಿ ಡಯಾಲಿಸಿಸ್ ನಡೆಸುತ್ತಿದ್ದರು. ಚಿಕಿತ್ಸೆಯು ಫಲಕಾರಿಯಾಗದೆ ಬುಧುವಾರ ಸ೦ಜೆ ಮೃತ ಪಟ್ಟಿದ್ದಾಳೆ. ಮೃತ ಯುವತಿ ಅಂತ್ಯಕ್ರಿಯೆಯು ಗುರುವಾರ ಇಲ್ಲಿನ ರುದ್ರಭೂಮಿಯಲ್ಲಿ ನೆರವೇರಿತು.

ಅಪ್ಪು ಸಾವು ಕುಟುಂಬವನ್ನೇ ಕಾಡಿತ್ತು:

ಎರಡೂ ಕಿಡ್ನಿ ವೈಫಲ್ಯದಿಂದ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದ ಬಾಲಕಿಗೆ ತಕ್ಷಣಕ್ಕೆ ಹಣಕಾಸಿನ ನೆರವು ನೀಡಿದ್ದವು ಅಪ್ಪು ಶಸ್ತ್ರಚಿಕಿತ್ಸೆಗೆ 2017ರಲ್ಲೇ ಸುಮಾರು 12.50 ಲಕ್ಷ ಖರ್ಚು ಮಾಡಿ, ಚಿಕಿತ್ಸೆ ಕೊಡಿಸುವ ಮೂಲಕ ನಟ ಪುನೀತ್‌ ರಾಜಕುಮಾರ್‌ ಪುನರ್ಜನ್ಮ ನೀಡಿದ್ದರು. ಆದರೆ ಅಪ್ಪುವಿನ ಸಾವಿನ ಸುದ್ದಿ ಬಾಲಕಿ ಸೇರಿ ಇಡೀ ಕುಟುಂಬಕ್ಕೆ ನುಂಗಲಾಗದ ಕಹಿ ಸತ್ಯವಾಗಿ ಕಾಡುತ್ತಿತ್ತು.

ನಾನು ಯಾವಾಗಲೂ ಒಳ್ಳೆಯದನ್ನೇ ಬಯಸುತ್ತೇನೆ; ಜೀವನದ ಬಗ್ಗೆ ಅಪ್ಪು ಹೇಳಿದ್ದ ಮಾತು ಸಖತ್ ವೈರಲ್

ಅಪ್ಪು ಅಪ್ಪಟ ಅಭಿಮಾನಿಯಾಗಿದ್ದ ಪ್ರೀತಿ:

ಬಾಲಕಿ ಪ್ರೀತಿ ಚಿಕ್ಕಂದಿನಿಂದಲೂ ಪುನೀತ್‌ ಅಪ್ಪಟ ಅಭಿಮಾನಿಯಾಗಿದ್ದಳು. 2017ರಲ್ಲಿ ಎರಡೂ ಕಿಡ್ನಿ ಕಳೆದುಕೊಂಡಿದ್ದ ಪ್ರೀತಿ ಸಾಯುವ ಮುನ್ನ ಒಮ್ಮೆ ಪುನೀತ್‌ ಅವರನ್ನು ನೋಡಬೇಕೆಂದು ಹಂಬಲಿಸಿದ್ದಳು. ಬಾಲಕಿಯ ಕನಸ್ಸನ್ನು ನನಸಾಗಿದ ಪುನೀತ್‌ ಶಸ್ತ್ರಚಿಕಿತ್ಸೆ ಮಾಡಿಸಿದ್ದರು. ಅಪ್ಪು ಮೃತಪಟ್ಟಾಗ ಇಡೀ ಕುಟುಂಬ ಶೋಕದಲ್ಲಿ ಮುಳುಗಿತ್ತು. ಅಂದು ಅಪ್ಪು ಉಡುಗೊರೆಯಾಗಿ ನೀಡಿದ್ದ ಬ್ಯಾಗ್‌ ಅನ್ನು ಹಿಡಿದು ಮುತ್ತಿಡುವ ಮೂಲಕ ಪುನೀತ್‌ ಅಗಲಿಕೆಯ ನೋವನ್ನು ಪ್ರೀತಿ  ಹೊರ ಹಾಕಿದ್ದಳು ಆ ಚಿತ್ರ ನೋಡಿದವರಿಗೆ ಕರುಳು ಹಿಂಡುತ್ತಿತ್ತು.

click me!