50 ವರ್ಷಗಳಲ್ಲಿಯೇ ಇದುವರೆಗೂ ಯಾರು ಮಾಡದ ಹಾರರ್ ಸಿನಿಮಾ; ಹಲವು ದೇಶಗಳಲ್ಲಿ ಬ್ಯಾನ್ ಆದ ಚಿತ್ರ!

Published : Mar 10, 2025, 01:45 PM ISTUpdated : Mar 10, 2025, 02:37 PM IST
50 ವರ್ಷಗಳಲ್ಲಿಯೇ ಇದುವರೆಗೂ ಯಾರು ಮಾಡದ ಹಾರರ್ ಸಿನಿಮಾ; ಹಲವು ದೇಶಗಳಲ್ಲಿ ಬ್ಯಾನ್ ಆದ ಚಿತ್ರ!

ಸಾರಾಂಶ

50 ವರ್ಷಗಳಲ್ಲಿಯೇ ಯಾರು ಮಾಡದ ಹಾರರ್ ಸಿನಿಮಾ ಹಲವು ದೇಶಗಳಲ್ಲಿ ನಿಷೇಧವಾಗಿತ್ತು. ಈ ಚಿತ್ರದ ಭಯಾನಕತೆ ಹೇಗಿತ್ತು ಅಂದ್ರೆ ಜನರು ಥಿಯೇಟರ್‌ನಲ್ಲಿ ಭಯದಿಂದ ವಾಂತಿ ಮಾಡಿಕೊಂಡಿದ್ದರು. ಜನರು ಭಯದಿಂದ ಕಿರುಚಿದ್ರೆ ಥಿಯೇಟರ್ ಹೊರಗೆ ಕೇಳಿಸುತ್ತಿತ್ತು.

Award Winning Horror Movie: ಸಿನಿಮಾಗಳ ವಿಷಯಕ್ಕೆ ಬಂದ್ರೆ ಬಹುತೇಕರು ಭಯದಿಂದಲೇ ಹಾರರರ್ ಮೂವಿಗಳನ್ನು ನೋಡಲು ಇಷ್ಟೊಡುತ್ತಾರೆ. ಕಾಮಿಡಿ, ಆಕ್ಷನ್, ರೊಮ್ಯಾಂಟಿಕ್ ಮತ್ತು ಫ್ಯಾಮಿಲಿ ಡ್ರಾಮಾಗಳ ವೀಕ್ಷಕರು ಒಂದ್ಕಡೆಯಾದ್ರೆ, ಹಾರರ್‌ ಸಿನಿಮಾಗಳ ಫ್ಯಾನ್ಸ್ ಬೇಸ್ ತುಂಬಾನೇ ದೊಡ್ಡದಾಗಿರುತ್ತದೆ. ಹಾರರ್‌ ಸಿನಿಮಾಗಳಲ್ಲಿ ಥ್ರಿಲ್ಲಿಂಗ್ ಸಸ್ಪೆನ್ಸ್  ಒಳಗೊಂಡಿರುವ ಕಾರಣ ಪ್ರೇಕ್ಷಕರಿಗೆ ಇಷ್ಟವಾಗುತ್ತವೆ. ಇತ್ತೀಚೆಗೆ ಬಾಲಿವುಡ್‌ನಲ್ಲಿ ಬಿಡುಗಡೆಯಾದ ಮುಂಜ್ಯಾ ಮತ್ತು ಸ್ತ್ರೀ-2 ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿದ್ದವು. ಇದೇ ರೀತಿ ಮಲಯಾಳಂ (Malayalam Cinema) ಭಾಷೆಯಲ್ಲಿಯೂ ಹಾರರ್ ಕಥೆಯುಳ್ಳ ಚಿತ್ರಗಳು ಆಗಾಗ್ಗೆ ಬರುತ್ತಿರುತ್ತವೆ. ಇಂದು ನಾವು ಹೇಳುತ್ತಿರೋದು ಅತ್ಯಂತ ಭಯಾನಕ ಸಿನಿಮಾ ಎಂದೇ ಖ್ಯಾತಿಯನ್ನು ಪಡೆದುಕೊಂಡಿದೆ. 

ಹಾಲಿವುಡ್‌ನಲ್ಲಿ ಹಾರರ್‌ ಸಿನಿಮಾಗಳನ್ನು ಮಾಡಲು ಜನಪ್ರಿಯ. ಹಾಲಿವುಡ್ ಇಂಡಸ್ಟ್ರಿಯ ಸಿನಿಮಾಗಳು (Hollywood Movies) ವಿಶ್ವದ ಎಲ್ಲಾ ಭಾಗದಲ್ಲಿಯೂ ಫೇಮಸ್. ತನ್ನದೇ ಆದ ಅಭಿಮಾನಿ ಬಳಗವನ್ನು ಹಾಲಿವುಡ್ ಹೊಂದಿದೆ. ಇಂದು ನಾವು ಹೇಳುತ್ತಿರುವ ಸಿನಿಮಾವನ್ನು 50 ವರ್ಷಗಳಲ್ಲಿಯೇ ಯಾರು ಮಾಡಿಲ್ಲ. ಚಿತ್ರದ ಭಯಾನಕತೆಯನ್ನು ಕಂಡು ಹಲವು ದೇಶಗಳು ಸಿನಿಮಾವನ್ನು ನಿಷೇಧಿಸಿದ್ದವು. ಆದ್ರೆ ಇಂದು ಆನ್‌ಲೈನ್‌ನಲ್ಲಿ ಈ ಸಿನಿಮಾವನ್ನು ಜನರು ನೋಡುತ್ತಿದ್ದಾರೆ. ಈ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿಯೂ ಬಂದಿದೆ ಅಂದ್ರೆ ನೀವು ನಂಬಲೇಬೇಕು. 

ಆಸ್ಕರ್ ಪ್ರಶಸ್ತಿ ಪಡೆದ ಸಿನಿಮಾ
ಆಸ್ಕರ್ ಪ್ರಶಸ್ತಿಯನ್ನು ಪಡೆದ ಏಕೈಕ ಭಯಾನಕ ಚಿತ್ರವೇ ದಿ ಎಕ್ಸೊರಸಿಸ್ಟ್ (The Exorcist). ಭಯಾನಕತೆಯ ತೀವ್ರತೆಯಿಂದ ಈ ಚಿತ್ರವನ್ನು ಅನೇಕ ದೇಶಗಳಲ್ಲಿ ನಿಷೇಧಿಸಲಾಗಿದೆ. IMDb ಈ ಸಿನಿಮಾಗೆ 8.2 ರೇಟಿಂಗ್ ನೀಡಿದೆ. The Exorcist ಸಿನಿಮಾವನ್ನು ಭಾರತ ಮಾತ್ರವಲ್ಲೇ ಹಲವು ದೇಶಗಳ ನೋಡುಗರಿಗೆ ಇಷ್ಟವಾಗಿದೆ. ಆದ್ರೆ ಈ ಸಿನಿಮಾವನ್ನು 18 ವರ್ಷದೊಳಗಿನ ಮಕ್ಕಳ ವೀಕ್ಷಣೆಗೆ ನಿಷೇಧ ಹೇರಲಾಗಿದೆ. ಜಗತ್ತಿನ ಅತಿ ಹಾರರ್ ಸಿನಿಮಾ ಎಂದು The Exorcist ಕರೆಸಿಕೊಳ್ಳುತ್ತದೆ. 1973ರಲ್ಲಿ The Exorcist ಸಿನಿಮಾ ಬಿಡುಗಡೆಯಾಗಿತ್ತು. ವಿಲಿಯಂ ಪೀಟರ್ ಬ್ಲೆಟಿ ಅವರ ಕಾದಂಬರಿಯನ್ನು ಆಧಾರಿಸಿ The Exorcist ಸಿನಿಮಾವನ್ನು ತೆರೆ ಮೇಲೆ ತರಲಾಗಿತ್ತು.

ಇದನ್ನೂ ಓದಿ:  ನೋಡುಗರ ಮನಸ್ಸನ್ನು ಬೆಚ್ಚಿಬೀಳಿಸುವ 7.2 ರೇಟಿಂಗ್ ಮಲಯಾಳಂ ಸಿನಿಮಾ 8 ತಿಂಗಳ ನಂತರ ಹಿಂದಿಯಲ್ಲಿ ರಿಲೀಸ್

ಸಿನಿಮಾ ನೋಡಿ ಥಿಯೇಟರ್‌ನಲ್ಲಿ ವಾಂತಿ ಮಾಡಿದ್ರು!
The Exorcist ಸಿನಿಮಾ ಸತ್ಯಘಟನೆ ಆಧಾರಿತ ಎಂದು ಹೇಳಲಾಗುತ್ತದೆ. ಕಾದಂಬರಿಗಾರ ವಿಲಿಯಂ ಪೀಟರ್ ಬ್ಲೆಟಿ ಅವರೇ The Exorcist ಸಿನಿಮಾಗೆ ಕಥೆ ಬರೆದಿದ್ದರು. ಅಂದು ಅಮೆರಿಕದ ಕೇವಲ 25 ಥಿಯೇಟರ್‌ನಲ್ಲಿ ಬಿಡುಗಡೆಯಾದ್ರೂ ದೊಡ್ಡಮಟ್ಟದ ಯಶಸ್ಸನ್ನು ಕಂಡಿತ್ತು. ಸಕ್ಸಸ್ ನಂತರ ಹಲವು ಚಿತ್ರಮಂದಿರಗಳು The Exorcist ಸಿನಿಮಾ ಪ್ರದರ್ಶನಕ್ಕೆ ಮುಂದಾದವು. ಸಿನಿಮಾ ಎಷ್ಟು ಭಯಾನಕವಾಗಿತ್ತು ಅಂದ್ರೆ ಜನರು ಭಯದಿಂದ ಥಿಯೇಟರ್‌ನಲ್ಲಿಯೇ ವಾಂತಿ ಮಾಡಿಕೊಂಡಿದ್ದರು. ಕೆಲವು ದೃಶ್ಯಗಳು ಎಷ್ಟು ಭಯಾನಕವಾಗಿದ್ದವು ಎಂದರೆ ಥಿಯೇಟರ್‌ಗಳಲ್ಲಿ ಪ್ರೇಕ್ಷಕರ ಕಿರುಚಾಟ ಹೊರಗೆ ಕೇಳಿಸುತ್ತಿತ್ತು. 

The Exorcist ಅನೇಕ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿತು. ವಿಶ್ವದ ಅತಿದೊಡ್ಡ ಚಲನಚಿತ್ರ ಪ್ರಶಸ್ತಿಯಾದ ಆಸ್ಕರ್ ಪಡೆದುಕೊಂಡ ಮೊದಲ ಏಕೈಕ ಹಾರರ್ ಸಿನಿಮಾ ಆಗಿದೆ. ಸದ್ಯ ಈ ಸಿನಿಮಾವನ್ನು ಅಮೆಜಾನ್ ಪ್ರೈಮ್‌ನಲ್ಲಿ ವೀಕ್ಷಿಸಬಹುದು. ಸಬ್‌ಸ್ಕ್ರಿಪ್ಷನ್ ಹೊಂದಿದ್ದರೂ, ಈ ಸಿನಿಮಾ ವೀಕ್ಷಣೆಗೆ ಹೆಚ್ಚುವರಿ ಹಣವನ್ನು ಪಾವತಿಸಬೇಕಾಗುತ್ತದೆ. 

ಇದನ್ನೂ ಓದಿ: Mystery Thriller OTT: ಕೊನೆ 10 ನಿಮಿಷದ ಕ್ಲೈಮ್ಯಾಕ್ಸ್‌ಗಾಗಿಯೇ ಮಲಯಾಳಂನ ಈ ಸಿನಿಮಾ ನೋಡಬೇಕು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?
ಹೀರೋ ಆಗುವ ಮುನ್ನ ಶಾಕ್ ಕೊಟ್ಟ ಅಕೀರಾ ನಂದನ್: ರೇಣು ದೇಸಾಯಿ ಫೋನ್ ಮಾಡಿದಾಗ ಪವನ್ ನಕ್ಕಿದ್ದೇಕೆ?