ವಿಜಯ್ ಅಭಿನಯದ ಮಾಸ್ಟರ್: ಭಾರತದಲ್ಲಿ ಮೋಸ್ಟ್ ಲೈಕ್ಡ್ ಯೂಟ್ಯೂಬ್ ಟೀಸರ್..!

Suvarna News   | Asianet News
Published : Nov 16, 2020, 09:21 PM IST
ವಿಜಯ್ ಅಭಿನಯದ ಮಾಸ್ಟರ್: ಭಾರತದಲ್ಲಿ ಮೋಸ್ಟ್ ಲೈಕ್ಡ್ ಯೂಟ್ಯೂಬ್ ಟೀಸರ್..!

ಸಾರಾಂಶ

ದಳಪತಿ ವಿಜಯ್ ಅಭಿನಯದ ಮಾಸ್ಟರ್ ಸಿನಿಮಾ ಟೀಸರ್ ಹೊಸ ದಾಖಲೆ ಸೃಷ್ಟಿಸಿದೆ. ಸಿನಿಮಾ ಸಾಂಗ್ ಮೂಲಕವೇ ಸಖತ್ ವೈರಲ್ ಆಗಿದ್ದ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ದಳಪತಿ ಅಭಿನಯದ ಸಿನಿಮಾ ಮೆಚ್ಚಿ ಮೆರೆಸಿದ್ದಾರೆ ಜನ

ಮಾಸ್ಟರ್ ಸಿನಿಮಾ ಟೀಸರ್ ಭಾರತದ ಯೂಟ್ಯೂಬ್‌ನಲ್ಲಿ ಮೋಸ್ಟ್ ಲೈಕ್ಡ್ ಟೀಸರ್ ಆಗಿ ಮೂಡಿ ಬಂದಿದೆ. ನವೆಂಬರ್ 14ರಂದು ದಳಪತಿ ವಿಜಯ್ ಅಭಿನಯದ ಮಾಸ್ಟರ್ ಸಿನಿಮಾ ಟೀಸರ್ ರಿಲೀಸ್ ಆಗಿತ್ತು.

ಆಗಿನಿಂದಲೂ ಸಿನಿಮಾ ಟೀಸರ್ ವೈರಲ್ ಆಗಿದ್ದು, ಟ್ರೆಂಡಿಂಗ್‌ನಲ್ಲಿದೆ. ಟೀಸರ್‌ಗೆ ಮೆಚ್ಚುಗೆ ಮತ್ತು ಟೀಕೆಯೂ ವ್ಯಕ್ತವಾಗುತ್ತಿದೆ. ಇದೀಗ ಮಾಸ್ಟರ್ ಸಿನಿಮಾ ನಿರ್ಮಾಪಕರು ಎಕ್ಸ್‌ಬಿ ಕ್ರಿಯೇಷನ್ಸ್ ಮಾಸ್ಟರ್ ಹೊಸ ಮೈಲುಗಲ್ಲು ತಲುಪಿರುವುದನ್ನು ತಿಳಿಸಿದ್ದಾರೆ.

ಬಾಲಿವುಡ್‌ ಬಾದ್‌ಶಾ ಪತ್ನಿಯೂ ಡ್ರಗ್ಸ್ ಅಡಿಕ್ಟ್..! ಮಾದಕ ವ್ಯಸನಿಗಳಾಗಿದ್ದ ಟಾಪ್ ಸೆಲೆಬ್ರೆಟಿಗಳು!

ಸದ್ಯ ಮಾಸ್ಟರ್ 16 ಗಂಟೆಯಲ್ಲಿ 1.6 ಮಿಲಿಯನ್ ಲೈಕ್ಸ್ ಪಡೆಯುವ ಮೂಲಕ ಮೋಸ್ಟ್ ಲೈಕ್ಡ್ ಟೀಸರ್ ಆಗಿ ಮೂಡಿ ಬಂದಿದೆ. ಗುಡ್ ಮಾರ್ನಿಂಗ್ ನನ್ಬ, 16 ಗಂಟೆ 16 ಮಿಲಿಯನ್ ವ್ಯೂಸ್ 1.6 ಲೈಕ್ಸ್ ಭಾರತದಲ್ಲಿ ಯೂಟ್ಯೂಬ್‌ನಲ್ಲಿ ಅತ್ಯಧಿಕ ಲೈಕ್ ಪಡೆದ ಟೀಸರ್ ಎಂದು ಚಿತ್ರತಂಡ ಟ್ವೀಟ್ ಮಾಡಿದ್ದಾರೆ.

ಇದೀಗ ಚಿತ್ರಮಂದಿರಗಳು ತೆರೆಯಲಾರಂಭಿಸಿದ್ದು, ಶನಿವಾರ ಟೀಸರ್ ರಿಲೀಸ್ ಆಗಿದೆ. ನಟ ವಿಜಯ್ ಟ್ವಿಟರ್ ಮೂಲಕ ಟೀಸರ್ ಲಿಂಕ್ ಶೇರ್ ಮಾಡಿದ್ದರು. ಮಾಸ್ಟರ್ ಟೀಸರ್ ಎಂದು ಬರೆದಿದ್ದರು.

ಧರಂಶಾಲಾದಲ್ಲಿ ಸೈಫೀನಾ..! ನೋ ಫೋಟೋ ಎಂದ ಪುಟ್ಟ ತೈಮೂರ್..!

ಶನಿವಾರದಿಂದಲೂ ಮಾಸ್ಟರ್ ಟೀಸರ್ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಿದೆ. ಸಿನಿಮಾದಲ್ಲಿ ವಿಜಯ್ ಕಾಲೇಜು ಪ್ರೊಫೆಸರ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟ ವಿಜಯ್ ಸೇತುತಿ ವಿಲನ್ ಆಗಿ ಕಾಣಿಸಿಕೊಂಡಿರೋದು ಇನ್ನಷ್ಟು ವಿಶೇಷ. ಸಿನಿಮಾ ಎಪ್ರಿಲ್‌ನಲ್ಲಿಯೇ ಬಿಡುಗಡೆಯಾಗಬೇಕಿತ್ತು. ಆದರೆ ಕೊರೋನಾದಿಂದಾಗಿ ಸಿನಿಮಾ ಬಿಡುಗಡೆ ವಿಳಂಬವಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?