
ಮಲ್ಟಿ ಸ್ಟಾರ್‌ಗಳನ್ನು ಲಾಂಚ್ ಮಾಡಿದ ಸಿನಿಮಾ 'kandukondain kandukondain'ರಿಲೀಸ್ ಆಗಿ ಇದೀಗ 20 ವರ್ಷಗಳನ್ನು ಪೂರೈಸಿದೆ. ರಾಜೀವ್ ಮೆನನ್ ನಿರ್ದೇಶನದ ಈ ಚಿತ್ರದಲ್ಲಿ ಮಮ್ಮೂಟಿ, ತಲಾ ಅಜಿತ್, ಐಶ್ವರ್ಯ ರೈ ಹಾಗೂ ಅಬ್ಬಾಸ್ ಮಿಂಚಿದ್ದಾರೆ. ಈ ಸೂಪರ್ ಹಿಟ್ ಸಿನಿಮಾಗೆ ಎಆರ್ .ರೆಹಮಾನ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ಕಾಲಿವುಡ್ 'ವೀರಂ' ಸಾಲ್ಟ್ ಆ್ಯಂಡ್ ಪೆಪ್ಪರ್ ನಟ ಅಜಿತ್ ಬಗ್ಗೆ ಕುತೂಹಲಕಾರಿ ಸಂಗತಿಗಳು!
ಆಸ್ಪತ್ರೆಯಲ್ಲಿ ಅಜಿತ್:
ಅಜಿತ್ ಸಿನಿಮಾವೊಂದರ ಸಾಹಸ ಸನ್ನಿವೇಶ ಮಾಡಲು ಪ್ರಯತ್ನಿಸಿದಾಗ ಪೆಟ್ಟುಗಳನ್ನು ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗುತ್ತಾರೆ. ಆದರೆ ಈ ಕಥೆ ಸೂಕ್ತವಾದ ವ್ಯಕ್ತಿ ಸಿಗದೆ ಹುಡುಕಾಡುತ್ತಿದ್ದ ನಿರ್ದೇಶಕರಿಗೆ ಅಜಿತ್ ಹೆಸರು ಕೇಳಿ ಬಂದಿತ್ತು.
'ಕೆಲ ನಟರನ್ನು ನಾನು ಆಡಿಷನ್ ಮಾಡಿದೆವು ಆದರೆ ಮನೋಹರ್ ಪಾತ್ರ ಮಾಡಲು ಯಾರೂ ಸೂಕ್ತರಾಗಲಿಲ್ಲ. ಈ ಸಮಯದಲ್ಲಿ ಪ್ರಶಾಂತ್ ಐಶ್ವರ್ಯಗೆ ಜೋಡಿಯಾಗಿ ಮಾಡುವ ತಬು ಬೇಡ ಎಂದು ಡಿಮ್ಯಾಂಡ್ ಮಾಡಿದರು. ಆಗ ನಮಗೆ ಕೇಳಿ ಬಂದ ಹೆಸರು ಅಜಿತ್ . ಅವರು ಆಸ್ಪತ್ರೆಯಲ್ಲಿದ್ದರು ಎಂದು ತಿಳಿದು ಬಂದಿತ್ತು. ನಾನು ಅದೇ ದಿನ ಆಸ್ಪತ್ರೆಗೆ ಹೋಗಿ ಅವರಿಗೆ ಅಲ್ಲೇ ಚಿತ್ರಕಥೆ ಹೇಳಿದೆ. ತಕ್ಷಣವೇ ಸಿನಿಮಾ ಮಾಡಲು ಒಪ್ಪಿಕೊಂಡರು' ಎಂದು ನಿರ್ದೇಶಕರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಕಾಲಿವುಡ್ ಸೂಪರ್ ಸ್ಟಾರ್ ತಲಾ ಅಜಿತ್ ತನ್ನ ಸಾಲ್ಟ್ ಆಂಡ್ ಪೆಪರ್ ಲುಕ್‌ಗೆ ಸಿಕ್ಕಾಪಟ್ಟೆ ಫೇಮಸ್. ಚಿತ್ರರಂಗಕ್ಕೆ ಕಾಲಿಟ್ಟ ಪ್ರಾರಂಭದಲ್ಲಿ ಲವರ್ ಬಾಯ್ ಅಗಿದ್ದ ಅಜಿತ್ ದಿನೇ ದಿನೆ ಮಾಸ್ ಲೀಡರ್ ಆಗಿ ಗುರುತಿಸಿಕೊಂಡಿದ್ದಾರೆ.
ಪತ್ನಿ ಜೊತೆ ಅಜಿತ್:
ಇತ್ತೀಚಿಗೆ ಅಜಿತ್ ಹಾಗೂ ಪತ್ನಿ ಶಾಲಿನಿ ಚೆನ್ನೈನಾ ಖಾಸಗಿ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಾಗ ಅಭಿಮಾನಿಗಳು ಆತಂಕದಲ್ಲಿದ್ದರು. ಇದು ಕೊರೋನಾ ಟೆಸ್ಟ್ ಇರಬಹುದಾ ಎಂದು ಅನುಮಾನಿಸಿದರು. ಆದರೆ ಅಜಿತ್ ಇದು ತನ್ನ ಪತ್ನಿ ಜತೆ ವರ್ಷ ವರ್ಷ ಮಾಡಿಸುವ ಜನರಲ್ ಜೆಕಪ್ ಎಂದು ಸ್ಪಷ್ಟನೇ ನೀಡಿದ್ದರು.
ಆಸ್ಪತ್ರೆಯಲ್ಲಿ ತಲಾ ಅಜಿತ್ ದಂಪತಿ; ವಿಡಿಯೋ ನೋಡಿ ಅಭಿಮಾನಿಗಳಲ್ಲಿ ಆತಂಕ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.