
ಕಳೆದ ವಾರ ಇಡೀ ತೆಲುಗು ಚಿತ್ರರಂಗ (Tollywood) ಒಂದು ದೊಡ್ಡ ಚುನಾವಣೆ ಕ್ಷಣ ಎದುರಿಸಿದೆ. ಸ್ಪರ್ಧಿ- ಪ್ರತಿ ಸ್ಪರ್ಧಿಗಳ ನಡುವಿದ್ದ ಕೋಲ್ಡ್ ವಾರ್, ಓಪನ್ ಚಾಲೆಂಜ್‌ಗಳ ನಡುವೆ ಜಯ ಗಳಿಸಿ ನಟ ಮಂಚು ವಿಷ್ಣು (Manchu Vishnu) ಮೂವಿ ಆರ್ಟಿಸ್ಟ್ ಆಸೋಸಿಯೇಷನ್ (MAA) ಅಧ್ಯಕ್ಷರಾಗಿ ನೇಮಕ ಆಗಿದ್ದಾರೆ. ನಿನ್ನೆ ಬೆಳಗ್ಗೆ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಎರಡು ವರ್ಷಕ್ಕೆ ಒಂದು ಬಾರಿ ನಡೆಯುವ ಚುನಾವಣೆಯಲ್ಲಿ (Election) ಒಟ್ಟು 26 ಮಂದಿಯನ್ನು ಒಂದೊಂದು ವಿಭಾಗಕ್ಕೆ ಆಯ್ಕೆ ಮಾಡಲಾಗುತ್ತದೆ. ಹಿರಿಯ ನಟ ಪ್ರಕಾಶ್ ರಾಜ್ (Prakash Raj) ಅವರನ್ನು ಸೋಲಿಸಿದ ಮಂಚು ಅವರಿಗೆ ರಾಜ್ಯ ಚುನಾವಣೆ ನಡೆಯುವ ಮಟ್ಟಕ್ಕೆ ಪ್ರಚಾರ ಸಿಕ್ಕಿದೆ. ಹೈದರಾಬಾದ್‌ನ (Hyderabd) ಫಿಲ್ಮಂ ನಗರ್ ಕಲ್ಚರ್ ಸೆಂಟರ್‌ನಲ್ಲಿ ಮಂಚು ಪ್ರಮಾಣವಚನ ಸ್ವೀಕರಿಸಿ ಮಾತನಾಡಿದ್ದಾರೆ.
ತೆಲಂಗಾಣ ಸಿನಿಮಾಟೋಗ್ರಫಿ ಮಿನಿಸ್ಟರ್ ತಲಸಾನಿ ಶ್ರೀನಿವಾಸ್ ಯಾದವ್ (Talasani Srinivas Yadav) ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಮಂಚು ಅವರು ಚಿತ್ರರಂಗದ ಹಿರಿಯರು ಹಾಗೂ ರಾಜಕೀಯ ಗಣ್ಯರಿಗೆ ಆಹ್ವಾನ ನೀಡಿದ್ದರು ಎನ್ನಲಾಗಿದೆ. 'ಒಂದು ನಾನು ಮಾ ಅಧ್ಯಕ್ಷರಾಗಿ ಸಿಂಹಾಸನ ಸ್ವೀಕರಿಸಿರುವೆ. ನಿಮ್ಮ ಆಶೀರ್ವಾದ ಮತ್ತು ನಿಮ್ಮ ಪಾಸಿಟಿವಿಟಿ (Positivity) ನನಗೆ ಮುಖ್ಯವಾಗಿದೆ'ಎಂದು ಮಂಚು ವಿಷ್ಣು ಮಾತನಾಡಿದ್ದಾರೆ. ಮಂಚು ಪತ್ರ ಸಹಿ ಮಾಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ.
ಪ್ರಕಾಶ್ ರಾಜ್ ಅವರು ಸೋಲು ಕಂಡ ನಂತರ ಚುನಾವಣೆ ವಿಚಾರವಾಗಿ ಕೋರ್ಟ್ (Court) ಮೆಟ್ಟಿಲು ಏರಿದ್ದಾರೆ. ಚುನಾವಣೆ ಬಗ್ಗೆ ಪ್ರತಿಭಟಿಸುತ್ತಿರುವ ಪ್ರಕಾಶ್ ರಾಜ್ ಮಾ ಸದಸ್ಯತ್ವವನ್ನು (Membership) ತ್ಯಜಿಸಿದ್ದಾರೆ ಎನ್ನಲಾಗಿದೆ. ಪ್ರಕಾಶ್ ಅವರ ನಿರ್ಧಾರವನ್ನು ಮಂಚು ಒಪ್ಪಿಕೊಂಡಿಲ್ಲ ಬದಲಿಗೆ ಎಲ್ಲರೂ ಒಟ್ಟಿಗಿದ್ದು ಕೆಲಸ ಮಾಡೋಣ ತೆಲುಗು ಚಿತ್ರರಂಗ ಬೆಳಸೋಣ ಎಂದು ಕೇಳಿದ್ದರೂ ತ್ಯಜಿಸಿದ್ದಾರೆ. ಪ್ರಕಾಶ್ ರಾಜ್ ಅವರ ರಾಜೀನಾಮೆಯ ವಾಟ್ಸಾಪ್ (Whatsapp) ಮೆಸೇಜ್‌ನ ಮಂಚು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮೆಗಾ ಸ್ಟಾರ್ ಚಿರಂಜೀವಿ (Chiranjeevi) ಕುಟುಂಬದಿಂದ ಯಾರೂ ಭಾಗಿಯಾಗದ ಕಾರಣ ಏನೋ ಬಿರುಕು ಮೂಡಿರುವುದಾಗಿ ಸಿನಿ ರಸಿಕರಲ್ಲಿ ಅನುಮಾನವಿದೆ. ಮಂಚು ವಿಷ್ಣು ಅಥವಾ ಚಿರಂಜೀವಿ ಕುಟುಂಬದವರು ಇದರ ಬಗ್ಗೆ ಸ್ಪಷ್ಟನೆ ನೀಡಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.