ಡ್ರಗ್ಸ್ ಕೇಸಲ್ಲಿ ಅರೆಸ್ಟ್: ಸುಳ್ಳು ಹೇಳಿ ನನ್ನ ಮಗನ ರಕ್ಷಿಸ್ಬೇಡಿ ಎಂದು ಲಾಯರ್‌ಗೆ ಹೇಳಿದ್ದ ಬಾಲಿವುಡ್ ನಟ

By Suvarna News  |  First Published Oct 17, 2021, 10:14 AM IST
  • ಡ್ರಗ್ಸ್ ಕೇಸಲ್ಲಿ ಮಗ ಸಿಕ್ಕಿಹಾಕಿಕೊಂಡಿದ್ದಾಗ ತಂದೆ ಹೇಳಿದ ಮಾತು
  • ಸುಳ್ಳು ಸಾಕ್ಷಿ ಹೇಳಿ ನನ್ನ ಮಗನ ರಕ್ಷಿಸ್ಬೇಡಿ ಎಂದು ಲಾಯರ್‌ಗೆ ಹೇಳಿದ ಬಾಲಿವುಡ್ ನಟ

ದೇಶದಲ್ಲಿ ಡ್ರಗ್ಸ್ ಕೇಸ್ ಭಾರೀ ಸುದ್ದಿ ಮಾಡುತ್ತಿದ್ದು ಬಾಲಿವುಡ್ ನಟ ಶಾರೂಖ್ ಖಾನ್(Shah Rukh Khan) ಅವರ ಪುತ್ರ ಆರ್ಯನ್ ಖಾನ್ (Aryan Khan)ಜೈಲಿನಲ್ಲಿದ್ದಾರೆ. ಆರ್ಯನ್ ಖಾನ್ ಡ್ರಗ್ಸ್ ಕೇಸ್(Drugs Case) ಸುದ್ದಿಯಾಗುತ್ತಿದ್ದು ಸ್ಟಾರ್ ನಟರ ಮಕ್ಕಳು ಹೀಗೆ ಡ್ರಗ್ಸ್ ಗಲಾಟೆಯಲ್ಲಿ ಸಿಕ್ಕಿಹಾಕಿಕೊಂಡಿದ್ದು ಇದೇ ಮೊದಲಲ್ಲ. ಭಾರತೀಯ ಚಿತ್ರರಂಗದಲ್ಲಿ ಮಾತ್ರ ಇಂತಹ ಘಟನೆ ನಡೆದಿರುವುದು ಅಲ್ಲ. ಬಹಳಷ್ಟು ಇಂತಹ ಘಟನೆಗಳೂ ನಡೆದಿವೆ. ಇದೀಗ ಬಾಲಿವುಡ್‌ನಲ್ಲಿ ಈ ಹಿಂದೆ ನಡೆದ ಘಟನೆಯೊಂದು ಸುದ್ದಿಯಾಗಿದೆ.

ಡ್ರಗ್ ಸಂಬಂಧಿತ ಪ್ರಕರಣದಲ್ಲಿ ಫರ್ದೀನ್ ಖಾನ್ ಪರ ವಾದಿಸಿದ ವಕೀಲ ಅಯಾಜ್ ಖಾನ್, ನಟನ ತಂದೆ ದಿವಂಗತ ನಟ ಫಿರೋಜ್ ಖಾನ್ ಹೇಗೆ ಸುಳ್ಳು ಹೇಳಿ ಮಗನನ್ನು ರಕ್ಷಿಸುವುದರವಿರುದ್ಧವಾಗಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದಾರೆ. ಮೇ 2001 ರಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಒಂದು ಗ್ರಾಂ ಕೊಕೇನ್ ಖರೀದಿಸಲು ಪ್ರಯತ್ನಿಸುತ್ತಿದ್ದಾಗ ಫರ್ದೀನ್ ನನ್ನು ಬಂಧಿಸಲಾಯಿತು.

Tap to resize

Latest Videos

undefined

ರಿಲೀಸ್‌ ನಂತ್ರ ಬಡವರಿಗಾಗಿ ಕೆಲಸ, ನಿಮಗೆ ಹೆಮ್ಮೆ ತರುತ್ತೇನೆ ಎಂದ ಆರ್ಯನ್

ಪ್ರಮುಖ ದಿನಪತ್ರಿಕೆಯೊಂದಿಗೆ ಮಾತನಾಡಿದ ಅಯಾಜ್, ಪ್ರಕರಣದ ಸತ್ಯಾಂಶಗಳನ್ನು ಮೊದಲು ಅರ್ಥಮಾಡಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಫರ್ದೀನ್ ಅವರನ್ನು ಕಾನೂನು ಸಂಬಂಧ ಭೇಟಿಯಾದಾಗ ಮತ್ತು ಮಾತನಾಡಿದ ವಿಚಾರವನ್ನು ಹಂಚಿಕೊಂಡಿದ್ದಾರೆ. ಅವರು ಒಂದು ಗ್ರಾಂ ಕೊಕೇನ್ ಅನ್ನು ಖರೀದಿಸಲು ಪ್ರಯತ್ನಿಸುತ್ತಿರುವುದಾಗಿ ಪ್ರಾಸಿಕ್ಯೂಷನ್ ಹೇಳಿತ್ತು. ವ್ಯಾಪಾರಿ ನಾಸಿರ್ ಶೇಖ್ ಹೆಚ್ಚಿನ ಪ್ರಮಾಣವನ್ನು ಹೊಂದಿದ್ದರು. ಆ ಒಂದು ಗ್ರಾಂ ಖರೀದಿಸಲು ಫರ್ದೀನ್ ಬ್ಯಾಂಕ್ ಎಟಿಎಂನಲ್ಲಿ ₹ 3500 ಪಂಚ್ ಮಾಡಿದ್ದರು. ಯಂತ್ರವನ್ನು ಕಾರ್ಡ್ ನುಂಗಿದ ಕಾರಣ ಹಣವನ್ನು ಹಿಂಪಡೆಯಲು ಸಾಧ್ಯವಾಗಲಿಲ್ಲ. ನಾವು ಕೆಲಸ ಮಾಡಬೇಕಾದ ಅಂಶ ಇದು. ಮತ್ತು ಫರ್ದೀನ್ ಅವರ ತಂದೆ ಫಿರೋಜ್ ಖಾನ್ ನನಗೆ ನಮಗೆ ಯಾವುದೇ ಸುಳ್ಳು ಸಾಕ್ಷಿಯ ರಕ್ಷಣೆ ಬೇಡ ಎಂದಿದ್ದರು ಎಂದು ಹೇಳಿದ್ದಾರೆ.

ಒಂದು ಗ್ರಾಂ ಒಂದು ಸಣ್ಣ ಪ್ರಮಾಣ ಎಂದಿದ್ದಾರೆ ಅಯಾಜ್ ಹೇಳಿದ್ದಾರೆ. ಫರ್ದೀನ್ ವಿರುದ್ಧದ ಆರೋಪವು ಡ್ರಗ್ಸ್ ಸೇವಿಸುವ ಪ್ರಯತ್ನ ಎಂದಾಗಿತ್ತು. ಅಂತಹ ಪ್ರಕರಣಗಳಲ್ಲಿ ನಮಗೆ ಜಾಮೀನು ಬೇಕು, ನೀವು ಅವರನ್ನು ಜೈಲಿನಲ್ಲಿಡಲು ಸಾಧ್ಯವಿಲ್ಲ, ಆದರೂ ಫರ್ದೀನ್ ಬಹಳ ಸಮಯದಿಂದ ಮಾದಕ ದ್ರವ್ಯ ಸೇವಿಸುತ್ತಿದ್ದನೆಂದು ಪ್ರಾಸಿಕ್ಯೂಷನ್ ವಾದಿಸಿತು. ಫರ್ದೀನ್ ಎರಡು ಅಥವಾ ಮೂರು ದಿನಗಳ ಕಾಲ NCB ವಶದಲ್ಲಿದ್ದ. ನಾವು ತಕ್ಷಣವೇ ಜಾಮೀನಿಗಾಗಿ ಅರ್ಜಿ ಸಲ್ಲಿಸಿ ಶೀಘ್ರ ಎನ್‌ಡಿಪಿಎಸ್ ನ್ಯಾಯಾಲಯದಿಂದ ಜಾಮೀನು ಪಡೆದೆವು ಎಂದಿದ್ದಾರೆ.

ಜಾಕಿ ಚಾನ್ ಅರೆಸ್ಟ್:

ಹಾಲಿವುಡ್ ಸ್ಟಾರ್ ಜಾಕಿ ಚಾನ್ ಮಗ ಕೂಡಾ ಇದಕ್ಕೆ ಹೊರತಲ್ಲ. ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಪ್ರತಿಭಾನ್ವಿತ ನಟ ಫೈಟರ್ ಜಾಕಿ ಚಾನ್ ಮಗನೂ ಒಮ್ಮೆ ಡ್ರಗ್ಸ್ ಕೇಸ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದ. 2014 ರಲ್ಲಿ, ಜೇಸಿಯನ್ನು ಡ್ರಗ್ಸ್ ಇಟ್ಟುಕೊಂಡಿದ್ದಕ್ಕಾಗಿ ಬಂಧಿಸಲಾಗಿತ್ತು. ಜಾಕಿ ತನ್ನ ಮಗನ ಪರವಾಗಿ ಕ್ಷಮೆ ಕೇಳಿದ್ದರು. ಈ ಘಟನೆಯ ಬಗ್ಗೆ ತೀವ್ರ ಕೋಪಗೊಂಡಿದ್ದಾರೆ ಎಂದು ಹೇಳಿದ್ದರು. ಯುವಕರು ಜೇಸಿಯನ್ನು ಎಚ್ಚರಿಕೆಯ ಕಥೆಯಾಗಿ ನೋಡುತ್ತಾರೆ. ಮಾದಕವಸ್ತುಗಳಿಂದ ದೂರವಿರುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಬರೆದಿದ್ದರು. ನಾನು ನನ್ನ ಮಗನನ್ನು ಸರಿಯಾಗಿ ಬೆಳೆಸುವಲ್ಲಿ ವಿಫಲವಾದೆ. ನಾನು ಕೂಡ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು. ಜೈಸೀ ಮತ್ತು ನಾನು ಸಮಾಜಕ್ಕೆ ಕ್ಷಮೆಯಾಚಿಸುತ್ತೇವೆ ಎಂದಿದ್ದರು.

"

ಅವನು ಸಮರ್ಥನಾಗಿದ್ದರೆ, ಅವನು ತನ್ನ ಸ್ವಂತ ಹಣವನ್ನು ಸಂಪಾದಿಸಬಹುದು. ಅವನು ಸಮರ್ಥನಲ್ಲದಿದ್ದರೆ ಅವನು ನನ್ನ ಹಣವನ್ನು ವ್ಯರ್ಥ ಮಾಡುತ್ತಾನೆ ಎಂದು 2011 ರಲ್ಲಿ ಜಾಕಿ ಹೇಳಿದ್ದು ಅರ್ಥಪೂರ್ಣವಾಗಿತ್ತು. ಜೇಸಿ ಜಾಕಿ ಮತ್ತು ಅವರ ಪತ್ನಿ ಜೋನ್ ಲಿನ್ ಅವರ ಏಕೈಕ ಪುತ್ರ, ಅವರು 1982 ರಲ್ಲಿ ವಿವಾಹವಾದರು.

click me!