ಸಿನಿಮಾರಂಗ ಹೇಗಿರುತ್ತದೆ ಎಂಬ ಭಯದಲ್ಲಿ ಚಿಕ್ಕ ವಯಸ್ಸಿಗೆ ಮದುವೆ ಮಾಡಿಕೊಂಡು ನಟಿಸಲು ಶುರು ಮಾಡಿದ ಅನ್ನಪೂರ್ಣಮ್ಮ.....
ತಮಿಳು ಚಿತ್ರರಂಗದಲ್ಲಿ ಸುಮಾರು 700ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅನ್ನಪೂರ್ಣಮ್ಮ ಮೊದಲ ಸಲ ಕಾಸ್ಟಿಂಗ್ ಕೌಚ್ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. 25ನೇ ವಯಸ್ಸಿಗೆ ತಾಯಿ ಪಾತ್ರ ಮಾಡಲು ಶುರು ಮಾಡಿದ ನಟಿಗೆ ಈಗ 80 ದಾಟಿದೆ. ಈಗಲೂ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು ಅಜ್ಜಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಶುರು ಮಾಡಿದ್ದಾರೆ.
ಟಾಲಿವುಡ್‌ನಲ್ಲಿ ಅನ್ನಪೂರ್ಣಮ್ಮ ಅವರನ್ನು ಗ್ಲಾಮರ್ ಅಜ್ಜಿ ಎಂದು ಕರೆಯುತ್ತಾರೆ ಏಕೆಂದರೆ ಸುಮಾರು ಮೂರು ತಲೆಮಾರಿನ ನಾಯಕ-ನಾಯಕಿಯರ ಜೊತೆ ಅನ್ನಪೂರ್ಣಮ್ಮ ಅಭಿನಯಿಸಿದ್ದಾರೆ. ಕೆಲವು ದಿನಗಳ ಹಿಂದೆ ನೀಡಿರುವ ಸಂದರ್ಶನಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದರು.'ಅವಕಾಶ ಸಿಕ್ಕರೆ ಎನು ಮಾಡೋಣ ಎಂದು ಕೇಳುತ್ತಿದ್ದರು. ಅದಕ್ಕಾಗಿಯೇ 20ನೇ ವಯಸ್ಸಿನಲ್ಲಿ ಮದುವೆ ಮಾಡಿಕೊಂಡು 25ನೇ ವಯಸ್ಸಿಗೆ ತಾಯಿ ಪಾತ್ರಗಳನ್ನು ಮಾಡಲು ಶುರು ಮಾಡಿದೆ' ಎಂದು ಮಾತನಾಡಿದ್ದಾರೆ.
ಮುದ್ದು ಮನಸ್ಸುಳ್ಳ ಮುದ್ದಾದ ಸಿರಿ ನೀನು; ಬಿಗ್ ಬಾಸ್ ಸುಂದರಿ ಸಿಂಪಲ್ ಮದುವೆ ಸೀರೆ ವೈರಲ್
'ಸಿನಿಮಾ ಶೂಟಿಂಗ್ ಎಲ್ಲೋ ನಡೆಯುತ್ತದೆ ಎಲ್ಲೋ ಹೋಗಿ ಎಲ್ಲೋ ಉಳಿದುಕೊಳ್ಳಬೇಕಾಗುತ್ತದೆ. ಆಗ ಮಧ್ಯರಾತ್ರಿ 2 ಗಂಟೆಯಾದರೂ ನಮ್ಮ ರೂಮಿನ ಬಾಗಿಲು ಬಡಿಯುತ್ತಿದ್ದರು,ಯಾವಾಗ ಎಲ್ಲಾ ಕಡೆ ಏಡ್ಸ್ ಕಾಯಿಲೆ ಆಗ ಭಯದಿಂದ ಶುರುವಾಯ್ತು ಆಗ ಇದೆಲ್ಲಾ ಕಡಿಮೆ ಮಾಡಿದರು' ಎಂದು ಅನ್ನಪೂರ್ಣಮ್ಮ ಹೇಳಿದ್ದಾರೆ.
ಯುವ ರಾಜ್‌ಕುಮಾರ್ ಮನೆಯಲ್ಲಿ ಸಪ್ತಮಿ ಗೌಡ; ಅಣ್ಣಾವ್ರ ಬಟ್ಟೆ ಮುಟ್ಟಿ ಎಲ್ಲರಿಗೂ ಹೇಳಿಕೊಂಡು ಓಡಾಡಿದ ನಟಿ!
ಎನ್‌ಟಿಆರ್,ಕೃಷ್ಣ, ಶೋಭನ್ ಬಾಬು, ಚಿರಂಜೀವಿ, ಕೃಷ್ಣಂರಾಜು, ಬಾಲಕೃಷ್ಣ, ನಾಗಾರ್ಜುನ, ವೆಂಕಟೇಶ್ ಸುಮನ್, ರಾಜೇಂದ್ರಪ್ರಸಾದ್ ಸೇರಿದಂತೆ ದೊಡ್ಡ ತಾರ ಬಳಗದ ಜೊತೆ ಅನ್ನಪೂರ್ಣಮ್ಮ ನಟಿಸಿದ್ದಾರೆ. ಸಿನಿಮಾಗಳಲ್ಲಿ ಸದ್ಯಕ್ಕೆ ನಟಿಸುತ್ತಿಲ್ಲವಾದರೂ ಸೀರಿಯಲ್‌ಗಳಲ್ಲಿ ಬ್ಯುಸಿಯಾಗಿದ್ದಾರೆ.