14 ದಿನಗಳ ಜೀವನ್ಮರಣ ಹೋರಾಟ ಮುಗಿಸಿ, ನಿರ್ದೇಶಕ ಕತ್ತಿ ಮಹೇಶ್ ಸಾವು!

Suvarna News   | Asianet News
Published : Jul 11, 2021, 12:24 PM IST
14 ದಿನಗಳ ಜೀವನ್ಮರಣ ಹೋರಾಟ ಮುಗಿಸಿ, ನಿರ್ದೇಶಕ ಕತ್ತಿ ಮಹೇಶ್ ಸಾವು!

ಸಾರಾಂಶ

ರಸ್ತೆ ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದ ನಿರ್ದೇಶಕ ಕತ್ತಿ ಮಹೇಶ್ ನಿಧನರಾಗಿದ್ದಾರೆ.   

ಟಾಲಿವುಡ್ ನಟ, ತೆಲುಗು ಸಿನಿಮಾ ವಿಮರ್ಶಕ ಕತ್ತಿ ಮಹೇಶ್‌ 14 ದಿನ ಸಾವಿನೊಂದಿಗೆ ಸೆಣಸಾಡಿ, ಕೊನೆ ಉಸಿರೆಳೆದಿದ್ದಾರೆ.

ಜೂನ್ 26ರಂದು ನೆಲ್ಲೂರಿನ ಬಳಿ ಇನ್ನೋವಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕತ್ತಿ ಮಹೇಶ್ ಎದುರಿಗಿದ್ದ ಕಂಟೇನರ್/ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ, ಗಂಭೀರವಾಗಿ ಗಾಯಗೊಂಡಿದ್ದರು. ಇದರ ಪರಿಣಾಮ ಮಹೇಶ್‌ ತೀವ್ರವಾಗಿ ಗಾಯಗೊಂಡಿದ್ದರು. ಕಾರಿನಲ್ಲಿ ಮಹೇಶ್ ಒಬ್ಬರೇ ಇದ್ದರು ಎನ್ನಲಾಗಿದೆ. ತಕ್ಷಣವೇ ಮಹೇಶ್‌ ಅವರನ್ನು ಚೆನ್ನೈನ ಆಸ್ಪತ್ರೆಗೆ ರವಾನಿಸಲಾಗಿತ್ತು.

ಬೈಕ್ ಅಪಘಾತಕ್ಕೆ ಬಲಿಯಾದ ನಟ ಸೂರ್ಯೋದಯ್ ಪುತ್ರ ಮಯೂರ್!

ಆಸ್ಪತ್ರೆಗೆ ದಾಖಲು ಮಾಡಿಕೊಳ್ಳುತ್ತಿದ್ದಂತೆ, ಮಹೇಶ್‌ಗೆ ಪ್ಲಾಸ್ಟಿಕ್ ಸರ್ಜರಿ, ಮೆದುಳು ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಮೂಗಿಗೆ, ಕಣ್ಣಿಗೆ ಹಾಗೂ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಮೂಗು, ಎಡಗಣ್ಣು ಬಜ್ಜಿಯಾಗಿ ಹೋಗಿತ್ತು. ಆಂಧ್ರ ಪ್ರದೇಶ ಸರ್ಕಾರ ಹದಿನೇಳು ಲಕ್ಷ ಹಣ ನೀಡಿ ಚಿಕಿತ್ಸೆಗೆ ನೆರವು ನೀಡಿತ್ತು. ಆದರೆ ಕತ್ತಿ ಮಹೇಶ್‌ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ. 

14 ದಿನಗಳಿಂದಲೂ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹೇಶ್‌ ಇನ್ನಿಲ್ಲ ಎಂಬ ವಿಚಾರ ತಿಳಿಯುತ್ತಿದ್ದಂತೆ, ಇಡೀ ತೆಲುಗು ಚಿತ್ರರಂಗದ ಗಣ್ಯರು ಹಾಗೂ ಆಪ್ತರು ಸಂತಾಪ ಸೂಚಿಸಿದ್ದಾರೆ. ಕೊರೋನಾ ಸಮಯದಲ್ಲಿ 'ಮಾರ್ನಿಂಗ್ ರಾಗಾ' ಹೆಸರಿನಲ್ಲಿ ಮನೋರಂಜನೆ ನೀಡುತ್ತಿದ್ದರು ಇವರು. ಅಲ್ಲದೆ ಮಹೇಶ್ ಯಾವುದೇ ಟಿವಿ ಚರ್ಚೆಗಳಲ್ಲಿ ಭಾಗಿಯಾಗಿದ್ದರೂ, ವಿವಾದಾತ್ಮಕ ಹೇಳಿಕೆ ನೀಡಿ ಹಲವು ಬಾರಿ ಟ್ರೋಲ್ ಆಗಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದೇಶಮುದುರು ಹೊಡೆತಕ್ಕೆ ಅಡ್ರೆಸ್ ಇಲ್ಲದಂತಾದ ಪ್ರಭಾಸ್ ಸಿನಿಮಾ.. ಒಂದೇ ವರ್ಷ ಬ್ಯಾಕ್ ಟು ಬ್ಯಾಕ್ ಫ್ಲಾಪ್
700 ಕೋಟಿಗೂ ಹೆಚ್ಚು ಆಸ್ತಿ, 10 ವರ್ಷ ಚಿಕ್ಕವನನ್ನು ಮದುವೆಯಾದ ನಟಿ, ಬೆಡ್‌ರೂಮ್ ಸೀಕ್ರೆಟ್ ಹೇಳಿದ್ಯಾರು?