
ಕಳೆದವಾರ ಆತ್ಮಹತ್ಯೆ ಮಾಡಿಕೊಂಡಿದ್ದ ನಟಿಯ ಸಾವಿಗೆ ಸಂಬಂಧಿಸಿದಂತೆ ತೆಲುಗು ಸಿನಿಮಾ ನಿರ್ಮಾಪಕನನ್ನು ಬಂಧಿಸಲಾಗಿದೆ. ಹೈದರಾಬಾದ್, ಮಧುರಾನಗರ ದ ಅಪಾರ್ಟ್‌ಮೆಂಟ್ ಬಾತ್‌ರೂಂನಲ್ಲಿ ಸೆ.08ರಂದು ನಟಿ ಕೊಂಡಪಲ್ಲಿ ಶ್ರಾವಣಿ ಆತ್ಮಹತ್ಯೆ ಮಾಡಿಕೊಂಡಿದ್ದರು.
RX 100ನಂತಹ ಬ್ಲಾಕ್ ಬಸ್ಟರ್ ಸಿನಿಮಾ ನಿರ್ಮಾಪಕದ ಅಶೋಕ್ ರೆಡ್ಡಿಯನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿ ಸಾಯಿ ಕೃಷ್ಣ ರೆಡ್ಡಿ ಹಾಗೂ ದೇವರಾಜ್ ರೆಡ್ಡಿ ಎಂಬವರ ವಿರುದ್ಧ ಆತ್ಮಹತ್ಯೆ ಪ್ರೇರಣೆ ಆರೋಪ ಕೇಳಿ ಬಂದಿದೆ. ಇವರನ್ನು ಬಂಧಿಸಿ ಸೋಮವಾರ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.
TikTok ಗೆಳೆಯನ ಕಿರುಕುಳ: ಕಿರುತೆರೆ ನಟಿ ಆತ್ಮಹತ್ಯೆ
ನಟಿ ಶ್ರಾವಣಿ ಸಾಯಿ ಕೃಷ್ಣ ರೆಡ್ಡಿ ಜೊತೆ 2018ರಲ್ಲಿ ಸಂಬಂಧ ಇರಿಸಿಕೊಂಡಿದ್ದರು. ನಂತರ ಅಶೋಕ್ ರೆಡ್ಡಿ ಹಾಗೂ ನಂತರ ಟಿಕ್‌ಟಾಕ್ ಮೂಲಕ ಪರಿಚಯವಾಗಿ ದೇವರಾಜ್ ರೆಡ್ಡಿ ಜೊತೆಗೂ ಸಂಬಂಧವಿತ್ತು ಎನ್ನಲಾಗಿದೆ.
ತೆಲುಗು ಸಿನಿಮಾ ಪ್ರೇಮಟೊ ಕಾರ್ತಿಕ್ ಸಿನಿಮಾ ನಿರ್ಮಾಣದ ಸಂದರ್ಭ ನಟಿ ನಿರ್ಮಾಪಕ ಆಶೋಕ್ ರೆಡ್ಡಿಯನ್ನು ಭೇಟಿಯಾಗಿದ್ದರು. ಕೊನೆಯಾದಾಗಿ ನಟಿ ದೇವರಾಜ್‌ಗೆ ಕರೆ ಮಾಡಿ, ಮೂವರ ಕಿರುಕುಳ ತಾಳಲಾಗುತ್ತಿಲ್ಲ, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿರುವುದಾಗಿ ತಿಳಿದು ಬಂದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.