ಡಿಪ್ರೆಶನ್‌ನಿಂದ 36 ವರ್ಷ ನಟಿ Oh In hye ನಿಧನ

Suvarna News   | Asianet News
Published : Sep 17, 2020, 04:28 PM IST
ಡಿಪ್ರೆಶನ್‌ನಿಂದ 36 ವರ್ಷ ನಟಿ Oh In hye ನಿಧನ

ಸಾರಾಂಶ

36 ವರ್ಷದ ಕೊರಿಯನ್ ನಟಿ ಓಹ್‌ ಇನ್ ಹೈ ಡಿಪ್ರೆಶನ್‌ನಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ವೈದ್ಯರ ಅಧಿಕೃತ ಮಾಹಿತಿಗಾಗಿ ಚಿತ್ರರಂಗದವರು ಹಾಗೂ ಕುಟುಂಬಸ್ಥರು ಕಾಯುತ್ತಿದ್ದಾರೆ. 

ಸೌತ್ ಕೊರಿಯಾದ ಖಾಸಗಿ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದ ನಟಿ Oh In Hye ಸಾವು ನಿಗೂಢವಾಗಿದೆ, ಎಂದು ಆಪ್ತರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Yo Yo ಹನಿ ಸಿಂಗ್‌ಗೆ ಡಿಪ್ರೆಶನ್..! ದೀಪಿಕಾ, ಶಾರೂಖ್ ಖ್ಯಾತ ರ್ಯಾಪರ್‌ಗೆ ಹೇಗೆ ನೆರವಾದ್ರು..?

ಸ್ನೇಹಿತರ ಜೊತೆ ಮನೆಯಲ್ಲಿ ಸಮಯ ಕಳೆಯುತ್ತಿದ್ದ ನಟಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅಲ್ಲಿಯೇ ಕೊನೆ ಉಸಿರೆಳೆದಿದ್ದಾರೆ. 'ಇದಕ್ಕೆ ತನಿಖೆ ಮಾಡುವ ಅಗತ್ಯವಿಲ್ಲ. ಇದು ಮರ್ಡರ್‌ ಅಲ್ಲ. ಹಲವು ವರ್ಷಗಳಿಂದ ಡಿಪ್ರೆಶನ್‌ನಿಂದ ಬಳಲುತ್ತಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ವೈದ್ಯರು ಏನು ಹೇಳುತ್ತಾರೆ ನೋಡಬೇಕು' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

2011ರಲ್ಲಿ 'ಸಿನ್‌ ಆಫ್‌ ಫ್ಯಾಮಿಲಿ' ಚಿತ್ರದ ಮೂಲಕ ನಟನೆಗೆ ಎಂಟ್ರಿಕೊಟ್ಟ  ಹೈ 'ಬ್ಲಾಕ್ ವೆಡ್ಡಿಂಗ್', 'ರೆಡ್‌ ವೆನಿಸ್' ಸೇರಿಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.  ಇತ್ತೀಚಿಗೆ '539 Yeonnam-dong' ಟಿವಿ ಶೋನಲ್ಲೂ ಕಾಣಿಸಿಕೊಂಡಿದ್ದರು.

#Mask ಬಗ್ಗೆ ಇರಲಿ ಎಚ್ಚರ, ಹೃದಯಾಘಾತವೂ ಆಗೋ ಛಾನ್ಸ್ ಇರುತ್ತೆ! 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಮಿತಾಭ್ 14 ಚಿತ್ರಗಳ ರೀಮೇಕ್ ಮಾಡಿ, 33 ವರ್ಷಗಳ ಬಳಿಕ ಅಮಿತಾಭ್ ಜೊತೆ ನಟಿಸಿದ ನಟ ರಜನಿಕಾಂತ್!
Sonali Bendre: 'ಅಡುಗೆಮನೆಗೆ ಹೋಗ್ಬೇಡ ನೀನು'.. ಅಂತ ಖಡಕ್ ಆಗಿ ಹೇಳಿದ್ರು ನನ್ ಅತ್ತೆ!