ಈಗ ಮತ್ತೊಬ್ಬ ಸ್ಟಾರ್ ನಟನಿಗೆ ಡ್ರಗ್ಸ್ ಸಂಕಷ್ಟ..?

By Kannadaprabha News  |  First Published Sep 18, 2020, 10:26 AM IST

ಸ್ಯಾಂಡಲ್‌ವುಡ್ ಡ್ರಗ್ಸ್ ಕರ್ಮಕಾಂಡ ಸದ್ಯಕ್ಕೆ ಮುಗಿಯುವಂತೆ ಕಾಣಿಸುತ್ತಿಲ್ಲ. ಇದೀಗ ಸಿಸಿಬಿ ಅಧಿಕಾರಿಗಳು ಮತ್ತೊಬ್ಬ ಸ್ಟಾರ್ ನಟನಿಗೆ ನೋಟಿಸ್ ನೀಡಲು ರೆಡಿಯಾಗಿದೆ ಎನ್ನಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ


ಬೆಂಗಳೂರು(ಸೆ.18): ಚಿತ್ರ​ರಂಗ​ದ​ಲ್ಲಿನ ಮಾದಕ ವಸ್ತು ಮಾರಾಟ ಜಾಲದ ನಂಟು ಸಂಬಂಧ ಇಬ್ಬರು ನಟಿಯರು ಹಾಗೂ ಸ್ಟಾರ್‌ ದಂಪತಿ ಬಳಿಕ ಈಗ ಚಲನಚಿತ್ರ ರಂಗದ ಹಿರಿಯ ನಟನ ಮಕ್ಕಳಿಗೆ ಸಂಕಷ್ಟಎದುರಾಗಿದೆ. ಡ್ರಗ್ಸ್‌ ಪ್ರಕರಣ ಸಂಬಂಧ ಆ ನಟನ ಇಬ್ಬರು ಪುತ್ರರಿಗೆ ವಿಚಾರಣೆಗೆ ಸಿಸಿಬಿ ಬುಲಾವ್‌ ನೀಡಲಿದೆ ಎಂದು ತಿಳಿದು ಬಂದಿದೆ.

ದಶಕಗಳಿಂದ ಬಣ್ಣದ ಲೋಕದಲ್ಲಿ ಮಿನುಗುತ್ತಿರುವ ಹಿರಿಯ ನಟನ ಮಕ್ಕಳ ಪೈಕಿ ಒಬ್ಬಾತ ಸ್ಟಾರ್‌ ಪಟ್ಟಪಡೆದಿದ್ದಾನೆ. ಮಾದಕ ವಸ್ತು ಜಾಲದಲ್ಲಿ ಬಂಧಿತಳಾಗಿರುವ ನಟಿ ರಾಗಿಣಿ ಹಾಗೂ ಆಪಾದನೆ ಹೊತ್ತಿರುವ ಐಂದ್ರಿತಾ ರೈ ಜತೆ ಸಹ ಈತ ತೆರೆ ಹಂಚಿಕೊಂಡಿದ್ದಾನೆ. ಮತ್ತೊಬ್ಬ ಪುತ್ರ ಒಂದು ಸಿನಿಮಾದಲ್ಲಿ ಮಾತ್ರ ನಟಿಸಿದ್ದಾನೆ.

Tap to resize

Latest Videos

ಡ್ರಗ್ಸ್‌ ಮಾಫಿಯಾ: ಒಂದೇ ಸೆಲ್‌​ನಲ್ಲಿ ರಾಗಿಣಿ, ಸಂಜನಾ ಸ್ನೇಹ​ ಜೀವ​ನ!

ಇದುಷ್ಟುಮಕ್ಕಳ ವಿಚಾ​ರ​ವಾ​ದರೆ, ಇವರ ತಂದೆ​ಯಾದ ಹಿರಿಯ ನಟ, ನಾಯಕ, ಖಳ ನಾಯಕ ಮಾತ್ರವಲ್ಲದೆ ಪೋಷಕ ಪಾತ್ರಗಳಿಗೂ ಜೀವ ತುಂಬಿದ್ದಾರೆ ಎಂದು ಮೂಲಗಳು ಹೇಳಿವೆ.

ಮೂರು ವರ್ಷಗಳ ಹಿಂದೆ ಜಯನಗರ ಸಮೀಪದ ಅಬಕಾರಿ ಉದ್ಯಮಿ ಕುಟುಂಬದ ಸದಸ್ಯನೊಬ್ಬನ ಕಾರು ಅಪಘಾತಕ್ಕೀಡಾಗಿತ್ತು. ಅಂದು ಕಾರಿನಲ್ಲಿ ಗಾಂಜಾ ಪತ್ತೆಯಾದ ಹಿನ್ನೆಲೆಯಲ್ಲಿ ಉದ್ಯಮಿ ಕುಟುಂಬದ ಸದಸ್ಯರ ಸ್ನೇಹ ಹೊಂದಿದ್ದ ಕಾರಣಕ್ಕೆ ಹಿರಿಯ ನಟನ ಓರ್ವ ಮಗ ಸಿಸಿಬಿ ತನಿಖೆಗೊಳಗಾಗಿದ್ದ. ಈಗ ಮತ್ತೆ ಹಿರಿಯ ಪುತ್ರನ ಹೆಸರು ಪ್ರಸ್ತಾಪವಾಗಿರುವುದು ಸಾಕಷ್ಟುಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಹಳೇ ಪ್ರಕರಣದಲ್ಲೇ ಹಿರಿಯ ನಟನ ಪುತ್ರರು ಗಾಂಜಾ ವ್ಯಸನಿಗಳು ಎಂಬ ಆರೋಪ ಕೇಳಿ ಬಂದಿತ್ತು.

click me!