ಮಗಳ ಡೇಟಿಂಗ್ ವಿಚಾರ ಗೊತ್ತಾದಾಗ ಅಚ್ಚರಿಯಾಗಿತ್ತು: ರಾಹುಲ್ ಜೊತೆಗಿನ ಮೊದಲ ಭೇಟಿ ಬಿಚ್ಚಿಟ್ಟ ಸುನಿಲ್ ಶೆಟ್ಟಿ

Published : Feb 26, 2023, 01:12 PM IST
ಮಗಳ ಡೇಟಿಂಗ್ ವಿಚಾರ ಗೊತ್ತಾದಾಗ ಅಚ್ಚರಿಯಾಗಿತ್ತು: ರಾಹುಲ್ ಜೊತೆಗಿನ ಮೊದಲ ಭೇಟಿ ಬಿಚ್ಚಿಟ್ಟ ಸುನಿಲ್ ಶೆಟ್ಟಿ

ಸಾರಾಂಶ

ಕೆಎಲ್ ರಾಹುಲ್ ಜೊತೆಗೆ ಮಗಳ ಡೇಟಿಂಗ್ ವಿಚಾರ ಗೊತ್ತಾದಾಗ ಅಚ್ಚರಿಯಾಗಿತ್ತು ಎಂದು ಸುನಿಲ್ ಶೆಟ್ಟಿ ಬಹಿರಂಗ ಪಡಿಸಿದ್ದಾರೆ.     

ಬಾಲಿವುಡ್ ಸ್ಟಾರ್ ಸುನಿಲ್ ಶೆಟ್ಟಿ ಪುತ್ರಿ ಅತಿಯಾ ಶೆಟ್ಟಿ ಇತ್ತೀಚೆಗಷ್ಟೆ ಕ್ರಿಕೆಟಿಗ ಕೆಎಲ್ ರಾಹುಲ್ ಅವರನ್ನು ಮದುವೆಯಾದರು. ಅದ್ದೂರಿಯಾಗಿ ನಡೆದ ವಿವಾಹ ಮಾಹೋತ್ಸವದಲ್ಲಿ ಬಾಲಿವುಡ್ ತಾರೆಯರು, ಕ್ರಿಕೆಟ್ ಆಟಗಾಗರು ಭಾಗಿಯಾಗಿದ್ದರು. ಇಬ್ಬರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇದೀಗ ಮಗಳ ಮದುವೆಯಾಗಿ ತಿಂಗಳ ಬಳಿಕ ಸುನಿಲ್ ಶೆಟ್ಟಿ ಅತಿಯಾ ಮತ್ತು ರಾಹುಲ್ ಲವ್ ಸ್ಟೋರಿ ಬಗ್ಗೆ ಮಾತನಾಡಿದ್ದಾರೆ. ಕೆಎಲ್ ರಾಹುಲ್ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದು ಎಲ್ಲಿ ಎಂದು ರಿವೀಲ್ ಮಾಡಿದ್ದಾರೆ. 

ಕೆಎಲ್ ರಾಹುಲ್ ಅವರನ್ನು ಮೊದಲ ಬಾರಿಗೆ ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿರುವುದಾಗಿ ಹೇಳಿದ್ದಾರೆ.  2019ರಲ್ಲಿ ಕೆಎಲ್ ರಾಹುಲ್ ಅವರನ್ನು ಮೊದಲ ಬಾರಿಗೆ ಸುನಿಲ್ ಶೆಟ್ಟಿ ಭೇಟಿಯಾಗಿದ್ದರು. ಮಂಗಳೂರಿನವರು ಎಂದು ಗೊತ್ತಾಗಿ ತುಂಬಾ ಖುಷಿಯಾಗಿತ್ತಂತೆ. ಆಗಲೇ ಅವರಿಗೆ ಅತಿಯಾ ಜೊತೆ ರಾಹುಲ್ ಡೇಟ್ ಮಾಡುತ್ತಿದ್ದಾರೆ ಎನ್ನುವ ವಿಚಾರ ಕೂಡ ಗೊತ್ತಾಯಿತು ಎಂದು ಹೇಳಿದ್ದಾರೆ. ಆಂಗ್ಲ ಮಾಧ್ಯಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸುನಿಲ್ ಶೆಟ್ಟಿ, 'ರಾಹುಲ್‌ನನ್ನು ಮೊದಲು ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿದ್ದೆ ತುಂಬಾ ಸಂತೋಷವಾಗಿತ್ತು. ಅವರು ಕೂಡ ನನ್ನ ಹುಟ್ಟೂರಾದ ಮಂಗಳೂರಿನವರು ಎಂದು ತಿಳಿದು ನಾನು ರೋಮಾಂಚನಗೊಂಡೆ. ನಾನು ಅವರ ಅಭಿಮಾನಿ. ಮನೆಗೆ ಬಂದು ಮನ (ಸುನಿಲ್ ಶೆಟ್ಟಿ ಪತ್ನಿ) ಮತ್ತು ಆತಿಯಾ ಬಳಿ ಹೇಳಿದೆ. ಅವರು ಹೆಚ್ಚು ಮಾತನಾಡಲಿಲ್ಲ. ಆದರೆ ಬಳಿಕ ಮನ ಬಂದು ಆತಿಯಾ ಮತ್ತು ರಾಹುಲ್ ಮಾತನಾಡುತ್ತಿದ್ದಾರೆ ಎಂದು ಹೇಳಿದರು. 

ಆಥಿಯಾ ಶೆಟ್ಟಿ, ಕೆಎಲ್ ರಾಹುಲ್ ಮದುವೆಯ ದುಬಾರಿ ಗಿಫ್ಟ್‌ ಬಗ್ಗೆ ಸುನೀಲ್ ಶೆಟ್ಟಿ ಹೇಳಿದ್ದೇನು?

ಆತಿಯಾ ನನ್ನ ಬಳಿ ಹೇಳದಿರುವುದು ನನಗೆ ಆಶ್ಚರ್ಯವಾಯಿತು. ಆದರೆ ರಾಹುಲ್ ಜೊತೆ ಡೇಟಿಂಗ್ ಮಾಡುತ್ತಿರುವ ವಿಚಾರ ಗೊತ್ತಾಗಿ ಸಂತೋಷವಾಯಿತು. ಮಂಗಳೂರಿನಲ್ಲಿ ರಾಹುಲ್ ಅವರ ಮನೆ ಮಾತ್ರ. ನನ್ನ ಹುಟ್ಟೂರಿನಿಂದ (ಮುಲ್ಕಿ) ಕೆಲವು ಕಿಲೋಮೀಟರ್ ದೂರದಲ್ಲಿದೆ. ಹಾಗಾಗಿ ಇದು ಸಂತೋಷವಾಯಿತು' ಎಂದು ಹೇಳಿದರು. 

ಬಾಲಿವುಡ್ ನಟಿ ಆತಿಯಾ ಶೆಟ್ಟಿ ಮತ್ತು ಟೀಂ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಜನವರಿ 23ರಂದು ಅದ್ದೂರಿಯಾಗಿ ವಿವಾಹವಾದರು. ಸುನಿಲ್ ಶೆಟ್ಟಿ ಅವರ ಖಂಡಾಲ ಫಾರ್ಮ್‌ಹೌಸ್‌ನಲ್ಲಿ ಇಬ್ಬರೂ ಹಸೆಮಣೆ ಏರಿದರು. 

Athiya Shetty - KL Rahul Wedding: ಅಲಕೃತಗೊಂಡ ಫಾರ್ಮ್‌ಹೌಸ್‌ & ಮದುವೆ ಮಂಟಪ ಫೋಟೋ ವೈರಲ್‌

ಸುನಿಲ್ ಶೆಟ್ಟಿ ಸದ್ಯ ಹೆರಾ ಫೆರಿ 3 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಮತ್ತು ಪರೇಶ್ ರಾವಲ್ ಕೂಡ ನಡೆಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಸದ್ಯ ಭರ್ಜರಿಯಾಗಿ ನಡೆಯುತ್ತಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?