ನಟಿ ಪೂಜಾ ಹೆಗ್ಡೆಗೆ ಈ ನಿರ್ದೇಶಕ ದುಬಾರಿ ಕಾರು ಉಡುಗೊರೆ ನೀಡಲು ಇದೇ ಕಾರಣವಾ?

Published : Feb 26, 2023, 05:46 PM IST
ನಟಿ ಪೂಜಾ ಹೆಗ್ಡೆಗೆ ಈ ನಿರ್ದೇಶಕ ದುಬಾರಿ ಕಾರು ಉಡುಗೊರೆ ನೀಡಲು ಇದೇ ಕಾರಣವಾ?

ಸಾರಾಂಶ

ಸಿನಿಮಾ ಒಂದಕ್ಕಾಗಿ ಹಲವು ಕೋಟಿ ಸಂಭಾವನೆ ಪಡೆಯುವ ನಟಿ ಪೂಜಾ ಹೆಗ್ಡೆಗೆ ಇತ್ತೀಚೆಗೆ ತೆಲುಗು ಚಿತ್ರರಂಗದ ಸ್ಟಾರ್ ನಿರ್ದೇಶಕರೊಬ್ಬರು ದುಬಾರಿ ಉಡುಗೊರೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಪೂಜಾ ಹೆಗ್ಡೆ ತುಳುನಾಡು ಮೂಲದ ಬೆಡಗಿ. ಇದೀಗ ಬಾಲಿವುಡ್‌, ದಕ್ಷಿಣ ಭಾರತೀಯ ಸಿನಿಮಾ ರಂಗದ ಯಶಸ್ವಿ ನಾಯಕಿ. ಆಕೆಗೊಂದು ದುಬಾರಿ ಕಾರು ಉಡುಗೊರೆ ಸಿಕ್ಕಿದೆ. ಇದರಲ್ಲಿ ಅಂಥಾ ವಿಶೇಷ ಏನಿದೆ ಅಂತ ನೀವು ಕೇಳಬಹುದು. ಏಕೆಂದರೆ ಯಶಸ್ವಿ ನಾಯಕಿ, ನಾಯಕನಿಗೆ ದುಬಾರಿ ಉಡುಗೊರೆ ನೀಡೋದು ಇದೇನು ಹೊಸತಲ್ಲ. ಸಾಕಷ್ಟು ಮಂದಿ ನಿರ್ಮಾಪಕರು ಸಿನಿಮಾ ಯಶಸ್ವಿಯಾದಾಗ ಈ ಯಶಸ್ಸಿಗೆ ಕಾರಣ ಆದೋರಿಗೆ ದುಬಾರಿ ಕಾರು, ವಾಚು ಇಂಥ ಏನನ್ನಾದರೂ ಗಿಫ್ಟ್ ಕೊಡೋದುಂಟು. ವಿಕ್ರಂ ಸಿನಿಮಾ ಯಶಸ್ವಿ ಆದಾಗ ಕಮಲ್‌ಹಾಸನ್ ಈ ಸಿನಿಮಾಕ್ಕಾಗಿ ಶ್ರಮಿಸಿದವರಿಗೆ ಬೈಕ್, ವಾಚ್ ಇತ್ಯಾದಿ ಗಿಫ್ಟ್ ನೀಡಿ ಸುದ್ದಿ ಆಗಿದ್ರು. ಆದರೆ ನಾಯಕರಿಗೆ ಇಂಥಾ ಗಿಫ್ಟ್ ಕೊಟ್ಟಾಗ ಅದನ್ನು ಜನ, ಇಂಡಸ್ಟ್ರಿ ಗ್ರಹಿಸೋ ರೀತಿನೇ ಬೇರೆ ಇರುತ್ತೆ. ಅದೇ ಹೀರೋಯಿನ್‌ಗೆ ಗಿಫ್ಟ್ ಕೊಟ್ಟಾಗ ಅದನ್ನು ಬೇರೇ ರೀತಿ ಅರ್ಥೈಸಲಾಗುತ್ತೆ. ಇದೀಗ ಬಾಲಿವುಡ್ ಜೊತೆಗೆ ದಕ್ಷಿಣ ಭಾರತೀಯ ಚಿತ್ರರಂಗದ ಫೇಮಸ್ ನಟಿ ಇದೇ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.

ನಟಿ ಪೂಜಾ ಹೆಗ್ಡೆಗೆ ಎರಡೂವರೆ ಕೋಟಿ ಬೆಲೆಯ ಐಶಾರಾಮಿ ಕಾರೊಂದು ಗಿಫ್ಟ್ ಆಗಿ ಸಿಕ್ಕಿದೆ. ಪೂಜಾಗೆ ಕಾರ್ ಕ್ರೇಜ್ ಬಹಳ. ಈಗಾಗಲೇ ಅವರ ಬಳಿ ಸಾಕಷ್ಟು ದುಬಾರಿ ಕಾರ್‌ಗಳಿವೆ. ಅಂಥಾ ದುಬಾರಿ ಕಾರ್‌ಗಳನ್ನು ಕೊಂಡುಕೊಳ್ಳುವಷ್ಟು ಶ್ರೀಮಂತೆಯೂ ಹೌದು. ಏಕೆಂದರೆ ಪೂಜಾ ಹೆಗ್ಡೆ ಭಾರತ ಚಿತ್ರರಂಗದ ಬಹುಬೇಡಿಕೆಯ ನಟಿಯರಲ್ಲೊಬ್ಬರು. ತೆಲುಗಿನಲ್ಲಿ ಒಂದರ ಮೇಲೊಂದು ಹಿಟ್ ನೀಡಿರುವ ಈ ಚೆಲುವೆ, ತಮಿಳು, ಹಿಂದಿ ಸಿನಿಮಾಗಳಲ್ಲಿಯೂ ಬಹಳ ಬ್ಯುಸಿ. ಸಿನಿಮಾ ಒಂದಕ್ಕಾಗಿ ಹಲವು ಕೋಟಿ ಸಂಭಾವನೆ ಪಡೆಯುವ ಈ ನಟಿಗೆ ಇತ್ತೀಚೆಗೆ ತೆಲುಗು ಚಿತ್ರರಂಗದ ಸ್ಟಾರ್ ನಿರ್ದೇಶಕರೊಬ್ಬರು ದುಬಾರಿ ಉಡುಗೊರೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ. ಆ ನಿರ್ದೇಶಕ ಮತ್ಯಾರೂ ಅಲ್ಲ. ತಮ್ಮ ಸಿನಿಮಾಗಳಿಗೆ ಸತತವಾಗಿ ಪೂಜಾ ಹೆಗ್ಡೆಯನ್ನೇ ನಾಯಕಿಯನ್ನಾಗಿ ಅಯ್ಕೆ ಮಾಡುತ್ತಿರುವ ತೆಲುಗಿನ ಸ್ಟಾರ್ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್, ಇವರು ಇದೀಗ ತಮ್ಮ ಮೆಚ್ಚಿನ ನಟಿ ಪೂಜಾ ಹೆಗ್ಡೆಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆ ನೀಡಿದ್ದಾರೆ ಎಂಬ ಸುದ್ದಿ ಟಾಲಿವುಡ್​ನಲ್ಲಿ ಹರಿದಾಡುತ್ತಿದೆ.

ಈ ಸೋಲು ನನಗೆ ಹೊಸದಲ್ಲ; ಸತತ ಸೋಲಿನ ಹೊಣೆ ಹೊತ್ತುಕೊಂಡ ಅಕ್ಷಯ್ ಕುಮಾರ್

ವಿಕ್ರಮ್ ಶ್ರೀನಿವಾಸ್​ರ ಈ ಹಿಂದಿನ ಎರಡು ಸಿನಿಮಾಗಳಲ್ಲಿ ಪೂಜಾ ಹೆಗ್ಡೆಯೇ ನಾಯಕಿ. ಈಗ ಚಿತ್ರೀಕರಣಗೊಳ್ಳುತ್ತಿರುವ ಹೊಸ ಸಿನಿಮಾದಲ್ಲಿಯೂ ಪೂಜಾ ಹೆಗ್ಡೆಯೇ ನಾಯಕಿ, ಮಾತ್ರವಲ್ಲ ಈ ಸಿನಿಮಾದ ಬಳಿಕ ತ್ರಿವಿಕ್ರಮ್ ನಿರ್ದೇಶಿಸಲಿರುವ ಅಲ್ಲು ಅರ್ಜುನ್​ರ ಹೊಸ ಸಿನಿಮಾಕ್ಕೂ ಸಹ ಪೂಜಾ ಹೆಗ್ಡೆಯೇ ನಾಯಕಿ. ತ್ರಿವಿಕ್ರಮ್ ಶ್ರೀನಿವಾಸ್​ಗೆ ಪೂಜಾ ಹೆಗ್ಡೆ ಅಂದರೆ ಸಮ್‌ಥಿಂಗ್ ಸ್ಪೆಷಲ್ ಅನ್ನೋ ಹಾಗಿದೆ, ಆದರೆ ಅದು ಕೋಟಿ ರು.ಗಳ ಕಾರನ್ನು ಉಡುಗೊರೆ ನೀಡುವಷ್ಟರ ಮಟ್ಟಿಗಿದೆಯೇ? ಅನ್ನೋದು ಇದೀಗ ಚರ್ಚೆ ಆಗ್ತಿರೋ ಸಂಗತಿ.

ಇದನ್ನು ಪೂಜಾ ಹೆಗ್ಡೆಗೆ ಅಂತಲೇ ನೀಡಿದ್ದಲ್ಲ, ಅದು ಸಿನಿಮಾ ಟೀಮ್‌ಗಾಗಿ(Team) ಖರೀದಿಸಿದ ಕಾರು. ಅದರಲ್ಲಿ ಪೂಜಾ ಪ್ರಯಾಣಿಸಿದ್ದರಷ್ಟೇ. ಅಂದ ಮಾತ್ರಕ್ಕೆ ಆ ಕಾರು ಅವರಿಗೇ ಅನ್ನೋ ಅರ್ಥವಲ್ಲ ಅನ್ನೋ ಸ್ಪಷ್ಟನೆಯನ್ನು ಈ ಸಿನಿಮಾ ಟೀಮ್‌ನವರು ನೀಡಿದ್ದಾರೆ. ಆದರೂ ಇದನ್ನು ನಂಬಲು ಜನ ರೆಡಿ ಇಲ್ಲ. ಕೊಟ್ಟಿದ್ದೀರಿ ಅಂತಾದರೆ ಅದನ್ನು ಧೈರ್ಯವಾಗಿ ಒಪ್ಪಿಕೊಳ್ಳಿ, ನಿಮ್ಮ ಸಿನಿಮಾಕ್ಕಾಗಿ ಪೂಜಾ ಹೆಗ್ಡೆ ಲಕ್ಕಿ ಚಾರ್ಮ್(Lucky charm). ಎರಡೆರಡು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ನಾಯಕಿ. ಹೀಗಿರೋವಾಗ ಆಕೆಗೆ ದುಬಾರಿ ಕಾರು ನೀಡಿದ್ರೆ ಅದರಲ್ಲಿ ತಪ್ಪೇನೂ ಇಲ್ಲ. ಆದರೆ ಹೀಗೆಲ್ಲ ನುಣುಚಿಕೊಳ್ಳಲು ಪ್ರಯತ್ನಿಸಿದರೆ ಅದು ಅಪಾರ್ಥಕ್ಕೆ ಎಡೆ ಮಾಡಿಕೊಡುತ್ತೆ ಅನ್ನೋದು ನೆಟ್ಟಿಗರು ಆಡೋ ಮಾತು.

ಇನ್ನೊಂದೆಡೆ ಸತತ ಸೋಲು ಕಂಡರೂ, ಕಂಪ್ಲೇಂಟ್ ಮೇಲೆ ಕಂಪ್ಲೇಂಟ್ ಕೇಳಿ ಬಂದರೂ ಪೂಜಾ ಹೆಗ್ಡೆಗೆ ಬೇಡಿಕೆ ಏನೂ ಕಡಿಮೆ ಆಗಿಲ್ಲ. ಸಲ್ಮಾನ್ ಖಾನ್ ಜೊತೆಗೆ ಬಹುನಿರೀಕ್ಷಿತ ‘ಕಿಸೀಕಿ ಭಾಯ್, ಕಿಸೀಕಿ ಜಾನ್’ ಸಿನಿಮಾದಲ್ಲಿ ಪೂಜಾ ನಟಿಸಿದ್ದು ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಬಾಲಿವುಡ್(Bollywood), ಸೌತ್ ಇಂಡಿಯನ್ ಸಿನಿಮಾಗಳೆರಡರಲ್ಲೂ ಬ್ಯುಸಿ(Busy) ಇದ್ದಾರೆ. ಈ ನಡುವೆ ಇಂಥದ್ದೊಂದು ಸುದ್ದಿಯೂ ರೆಕ್ಕೆ ಪುಕ್ಕ ಕಟ್ಟಿಕೊಂಡು ಇಂಡಸ್ಟ್ರಿ ಅಂಗಳದಲ್ಲಿ ಹರಿದಾಡ್ತಿದೆ. 

ಪಾಕ್ ಸಿನಿಮಾದಲ್ಲಿ ನಟಿಸುತ್ತೇನೆ; ನೆಟ್ಟಿಗರ ಆಕ್ರೋಶಕ್ಕೆ ಕಾರಣವಾದ ರಣಬೀರ್ ಕಪೂರ್ ಹೇಳಿಕೆ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?