
ತಮಿಳು (Tamil) ಮತ್ತು ತೆಲುಗು (Telugu) ಜನಪ್ರಿಯ ನೃತ್ಯ ನಿರ್ದೇಶಕ ಶಿವ ಶಂಕರ್ (Shiva Shankar) ಮತ್ತು ಅವರ ಕುಟುಂಬದವರಿಗೆ ನೋವೆಲ್ ಕೊರೋನಾ ವೈರಸ್ (Covid19) ತಗುಲಿದೆ. ಇಡೀ ಕುಟುಂಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಕಿರಿಯ ಪುತ್ರ ಸೋಷಿಯಲ್ ಮೀಡಿಯಾ (Social Media) ಮೂಲಕ ಸಿನಿ ಆಪ್ತರು ಮತ್ತು ಜನರಲ್ಲಿ ಆರ್ಥಿಕವಾಗಿ ಸಹಾಯ (Financial Help) ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಶಿವ ಶಂಕರ್ ಅವರ ಫೋಟೋ ವೈರಲ್ ಆಗುತ್ತಿದ್ದಂತೆ ,ಬಾಲಿವುಡ್ ನಟ ಸೋನು ಸೂದು (Sonu Sood) ಸಹಾಯ ಮಾಡುವುದಾಗಿ ಕರೆ ಮಾಡಿ ತಿಳಿಸಿದ್ದಾರೆ.
ಶಿವ ಶಂಕರ್ ಅವರ ಹಿರಿಯ ಪುತ್ರನಿಗೆ ಮೊದಲು ಸೋಂಕು ತಗುಲಿತ್ತು. ತ್ರೀವ ಅನಾರೋಗ್ಯಕ್ಕೆ ಒಳಗಾಗಿ ಗಂಭೀರ ಸ್ಥಿತಿ ತಲುಪಿದ್ದಾರೆ. ಶಿವ ಶಂಕರ್ ಪತ್ನಿ ಕ್ವಾರಂಟೈನ್‌ನಲ್ಲಿದ್ದು, (Quarantine) ಕಿರಿಯ ಪುತ್ರ ಅಜಯ್ ಕೃಷ್ಣ (Ajay Krishna) ಇಡೀ ಖರ್ಚು ವೆಚ್ಚ ನೋಡಿಕೊಳ್ಳಬೇಕಿದೆ. ತೆಲುಗು ಚಿತ್ರರಂಗ ಪಿಆರ್ (PR) Vamsi Kaka ಎಂಬುವರು ಟ್ಟಿಟರ್‌ನಲ್ಲಿ (Twitter) ಸೋನು ಅವರನ್ನು ಟ್ಯಾಗ್ ಮಾಡಿ ಶಿವ ಶಂಕರ್ ಅವರ ಆರೋಗ್ಯದ ಬಗ್ಗೆ ಟ್ವೀಟ್ ಮಾಡಿದ್ದರು. ಟ್ಟಿಟರ್ ಮೂಲಕವೇ ಸೋನು ಪ್ರತಿಕ್ರಿಯೆ ನೀಡಿದ್ದಾರೆ.
'ಜನಪ್ರಿಯ ಸಿನಿಮಾಟೋಗ್ರಾಫರ್ (Cinematographer) ಶಿವ ಶಂಕರ್ ಮಾಸ್ಟರ್ ಅವರಿಗೆ ಕೊರೋನಾ ವೈರಸ್ ತಗುಲಿದೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಚಿಕಿತ್ಸೆ ದುಬಾರಿ ಆಗಿರುವ ಕಾರಣ ಹಣ ಹೊಂದಿಸಲು ಪುತ್ರ ಕಷ್ಟ ಪಡುತ್ತಿದ್ದಾರೆ. ದಯವಿಟ್ಟು ಸಹಾಯ ಮಾಡಿ,' ಎಂದು ಟ್ಟೀಟ್ ಮಾಡಿ ಪುತ್ರ ಅಜಯ್ ಕೃಷ್ಣ ಹೆಸರು ಮತ್ತು ನಂಬರ್ ಹಾಕಿದ್ದರು ಪಿಆರ್ ವಂಶಿ. 'ನಾನು ಈಗಾಗಲೆ ಕುಟುಂಬಸ್ಥರ (Family) ಜೊತೆ ಸಂಪರ್ಕದಲ್ಲಿರುವೆ. ನನ್ನ ಕೈಲಾಗುಷ್ಟು ಸಹಾಯ ಮಾಡಿ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುವೆ,' ಎಂದು ಸೋನು ಪ್ರತಿಕ್ರಿಯೆ ನೀಡಿದ್ದಾರೆ.
73 ವರ್ಷದ ಶಿವ ಶಂಕರ್ ಅವರು ಗಚಿಬೌಲಿನಲ್ಲಿರುವ ಏಐಜಿ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಹಿರಿಯ ಪುತ್ರ ಕೂಡ ಅದೇ ಆಸ್ಪತ್ರೆಯಲ್ಲಿದ್ದಾರೆ. ಕಳೆದ ಎರಡು ದಿನಗಳಿಂದ ಇಬ್ಬರನ್ನೂ ಐಸಿಯುಗೆ (ICU) ಶಿಫ್ಟ್ ಮಾಡಲಾಗಿದೆ.
ಶಿವ ಶಂಕರ್ ಅವರು ಈವರೆಗೆ ಸುಮಾರು 800ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಜನಪ್ರಿಯ ನೃತ್ಯ ನಿರ್ದೇಶಕರಾಗಿರುವುದಕ್ಕೆ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಅದಲ್ಲದೆ ಮಗಧೀರ ಸಿನಿಮಾ ಹಾಡೊಂದಕ್ಕೆ ನೃತ್ಯ ನಿರ್ದೇಶನ ಮಾಡಿದ್ದಕ್ಕೆ ರಾಷ್ಟ್ರ ಪ್ರಶಸ್ತಿ ದಕ್ಕಿದೆ. ತೆಲುಗು ಮತ್ತು ತಮಿಳು ಚಿತ್ರರಂಗದ ಸ್ಟಾರ್ ನಟ,ನಟಿಯರ ಜೊತೆ ಶಿವ ಶಂಕರ್ ಕೆಲಸ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.