ಬೆತ್ತಲೆ ಫೋಟೋ ಹಂಚಿಕೊಂಡು ಬಾಡಿ ಶೇಮಿಂಗ್‌ಗೆ No ಹೇಳಿ ನಟಿ ಅನುಪಮಾ!

Suvarna News   | Asianet News
Published : Jul 25, 2021, 12:09 PM ISTUpdated : Jul 25, 2021, 12:20 PM IST
ಬೆತ್ತಲೆ ಫೋಟೋ ಹಂಚಿಕೊಂಡು ಬಾಡಿ ಶೇಮಿಂಗ್‌ಗೆ  No ಹೇಳಿ ನಟಿ ಅನುಪಮಾ!

ಸಾರಾಂಶ

ಇನ್‌ಸ್ಟಾಗ್ರಾಂನಲ್ಲಿ ಬೆತ್ತಲೆ ಮಹಿಳೆಯರ ಫೋಟೋ ಹಂಚಿಕೊಂಡ ನಟಿ ಅನುಪಮಾ. ಫಿಸಿಕಲ್ ಅಪೀಯರೆನ್ಸ್‌ ಬಗ್ಗೆ ಕಮೆಂಟ್ ಮಾಡಬೇಡಿ ಎಂದ 'ನಟಸಾರ್ವಭೌಮ' ನಟಿ.  

ದಕ್ಷಿಣ ಭಾರತ ಚಿತ್ರರಂಗದ ಬೇಡಿಕೆಯ ನಟಿ ಅನುಪಮಾ ಪರಮೇಶ್ವರಿ ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಕೊಂಚ ಆಕ್ಟೀವ್ ಆಗಿದ್ದಾರೆ. ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾರೆ ಹಾಗೂ ತಪ್ಪುಗಳನ್ನು ನೇರವಾಗಿ ಗುರುತಿಸುತ್ತಿದ್ದಾರೆ. ಈ ನಡುವೆ ಎರಡು ಮೂರು ನಗ್ನ ಫೋಟೋಗಳನ್ನು ಹಂಚಿಕೊಂಡ ಕಾರಣ ನೆಟ್ಟಿಗರು ಶಾಕ್ ಆಗಿದ್ದಾರೆ. 

ವಿಶ್ವದ ನಂ.1 ಬೌಲರ್ ಈ ನಟಿಗೆ ಕ್ಲೀನ್ ಬೋಲ್ಡ್? ಇಲ್ಲಿವೆ ಫೋಟೋಸ್!

ವಿವಸ್ತ್ರವಾಗಿರುವ ಮಹಿಳೆಯರ ಫೋಟೋ ಹಂಚಿಕೊಂಡ ಅನುಪಮಾ , ಸಮಾಜದಲ್ಲಿ ಹೆಣ್ಣುಮಕ್ಕಳ ರೂಪ ಮತ್ತು ಆಕಾರದ ಬಗ್ಗೆ ಕೇಳಿ ಬರುವ ಪ್ರಶ್ನೆ ಒಂದಾ ಎರಡಾ ಎಂದಿದ್ದಾರೆ. 'ದಪ್ಪಗಿದ್ದೀಯ','ಜೀರೋ ಸೈಜ್ ಯಾಕಿಲ್ಲ', 'ಸ್ತನ ಜೋತು ಬಿದ್ದಿದೆ ಏಕೆ','ಸೊಂಟ ಸುತ್ತಳತೆ ಹೆಚ್ಚಾಗಿದೆ' ಈ ರೀತಿ ಪ್ರಶ್ನೆ ಮಾಡುತ್ತಿರುವ ಫೋಟೋಗಳನ್ನು ಶೇರ್ ಮಾಡಿಕೊಂಡು 'ನಾನು ಲಿಂಗಭೇದಗಳಿಗೆ ವಿರುದ್ಧ ಎಂದು ಹೇಳಿದ್ದಾರೆ. 

ಸೋಷಿಯಲ್ ಮೀಡಿಯಾದಲ್ಲಿ ನಾನು ನನ್ನ ಸಹೋದರರ ಜೊತೆ ಫೋಟೋ ಹಂಚಿಕೊಂಡರೆ ಮಾತ್ರ ಸೇಫ್ ಆಗಿರುವೆ. ನಾನು ಒಬ್ಬಳೇ ಡ್ಯಾನ್ಸ್ ಮಾಡಿರುವುದು ಅಥವಾ ಒಂಟಿ ಫೋಟೋ ಹಂಚಿಕೊಂಡರೆ ಕೆಟ್ಟ ಕಾಮೆಂಟ್‌ಗಳು ಹಾಗೂ ಟ್ರೋಲ್‌ಗೆ ಒಳಗಾಗುವೆ ಎಂದು ಈ ಹಿಂದೆ ಹೇಳಿಕೊಂಡಿದ್ದರು. 

ಸದ್ಯ ಅನುಪಮಾ '18 ಪೇಜ್' ಚಿತ್ರದಲ್ಲಿ ನಿಖಿಲ್‌ಗೆ ಜೋಡಿಯಾಗಿ ಮಿಂಚಲಿದ್ದಾರೆ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ