ಟೆಕ್ಕಿ ರಕ್ಷಿತಾ ರೆಡ್ಡಿ ಜೊತೆ ನಟ ಶರ್ವಾನಂದ್ ನಿಶ್ಚಿತಾರ್ಥ ಮುರಿದು ಬಿತ್ತಾ? ಹೀಗೊಂದು ಸುದ್ದಿ ವೈರಲ್

By Shruthi KrishnaFirst Published May 17, 2023, 1:03 PM IST
Highlights

ಟೆಕ್ಕಿ ರಕ್ಷಿತಾ ರೆಡ್ಡಿ ಜೊತೆ ನಟ ಶರ್ವಾನಂದ್ ನಿಶ್ಚಿತಾರ್ಥ ಮುರಿದು ಬಿತ್ತಾ? ಟಾಲಿವುಡ್‌ನಲ್ಲಿ ಶರ್ವಾನಂದ್ ನಿಶ್ಚಿತಾರ್ಥದ ಸುದ್ದಿ ವೈರಲ್ ಆಗಿದೆ.

ಟಾಲಿವುಡ್ ಸ್ಟಾರ್ ಶರ್ವಾನಂದ್ ಅಮೆರಿಕಾ ಮೂಲದ ಟೆಕ್ಕಿ ರಕ್ಷಿತಾ ರೆಡ್ಡಿ ಜೊತೆ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದರು. ಇಬ್ಬರ ನಿಶ್ಚಿತಾರ್ಥದ ಫೋಟೋಗಳನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದರು. ಅಂದಹಾಗೆ ಈ ಜೋಡಿ ವರ್ಷದ ಪ್ರಾರಂಭದಲ್ಲಿ ಎಂಗೇಜ್ ಆಗಿದ್ದರು. ಅದ್ದೂರಿಯಾಗಿ ನಡೆದ ನಿಶ್ಚಿತಾರ್ಥದಲ್ಲಿ ಟಾಲಿವುಡ್‌ನ ಅನೇಕ ಗಣ್ಯರು ಹಾಜರಾಗಿ ಶುಭಹಾರೈಸಿದ್ದರು. ಆದರೀಗ ಇವರ ಬಗ್ಗೆ ಶಾಕಿಂಗ್ ಸುದ್ದಿ ಕೇಳಿ ಬರುತ್ತಿದೆ. ಶರ್ವಾನಂದ್ ಮತ್ತು ರಕ್ಷಿತಾ ನಿಶ್ಚಾತಾರ್ಥ ಮುರಿದು ಬಿದ್ದಿದೆ ಎನ್ನಲಾಗುತ್ತಿದೆ. 

ಎಂಗೇಜ್ಮೆಂಟ್ ಆಗಿ 5 ತಿಂಗಳಾಗಿದ್ದರೂ ಅಂದಿನಿಂದ ಮದುವೆ ಬಗ್ಗೆ ಯಾವುದೇ ಸುದ್ದಿ ಇಲ್ಲ. ಶರ್ವಾನಂದ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದು ಸಾಕಷ್ಟು ಅನುಮಾನಕ್ಕೆ ದಾರಿಮಾಡಿಕೊಟ್ಟಿದ್ದು ಶರ್ವಾನಂದ್ ಮತ್ತು ರಕ್ಷಿತಾ ನಿಶ್ಚಿತಾರ್ಥ ರದ್ದಾಗಿದೆ ಎಂದು ಹೇಳಲಾಗುತ್ತಿದೆ. ಇಷ್ಟೆಲ್ಲ ಸುದ್ದಿಯಾಗಿದ್ದರೂ ಶರ್ವಾನಂದ್ ಯಾವುದೇ ಪ್ರತಿಕ್ರಿಯೆ ನೀಡದೆ ಇರುವುದು ಅನುಮಾನ ಮತ್ತಷ್ಟು ಬಲವಾಗುಂತೆ ಮಾಡಿದೆ. 

ನಿಶ್ಚಿತಾರ್ಥ ಮುರಿದು ಬಿದ್ದಿದೆ ಎನ್ನುವ ಸುದ್ದಿ ವೈರಲ್ ಆಗುತ್ತಿದ್ದಂತೆ ಶರ್ವಾನಂದ್ ಟೀಂ ಪ್ರತಿಕ್ರಿಯೆ ನೀಡಿದೆ. ಇದೆಲ್ಲ ಸುಳ್ಳು ಸುದ್ದಿ ಹೇಳಿದ್ದಾರೆ. ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶರ್ವಾನಂದ್ ಟೀಂ, 'ಈ ಸುದ್ದಿ ಸುಳ್ಳು. ಇಬ್ಬರೂ ಸಂತೋಷವಾಗಿದ್ದಾರೆ. ಶರ್ವಾನಂದ್ ಸದ್ಯ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೆ ಲಂಡನ್‌ ಶೂಟಿಂಗ್ ಮುಗಿಸಿ ಭಾರತಕ್ಕೆ ಬಂದಿದ್ದಾರೆ. ಸದ್ಯದಲ್ಲೇ ಮದುವೆ ದಿನಾಂಕ ನಿಗಧಿಮಾಡಲಾಗುತ್ತದೆ. ಶೀಘ್ರದಲ್ಲೇ ಅಧಿಕೃತ ಘೋಷಣೆಯಾಗಲಿದೆ' ಎಂದು ಬಹಿರಂಗ ಪಡಿಸಿದ್ದಾರೆ. 

ಮದುವೆನೇ ಆಗೋಲ್ಲ ಅಂತಿದ್ದ ನಟ ಶರ್ವಾನಂದ್; ನಿಶ್ಚಿತಾರ್ಥ ಫೋಟೋ ನೋಡಿ ನೆಟ್ಟಿಗರು ಶಾಕ್

ಹೈದಾರಾಬಾದ್‌ನಲ್ಲಿ ನಡೆದ ಅದ್ದೂರಿ ನಿಶ್ಚಿತಾರ್ಥದಲ್ಲಿ ಆಪ್ತರು, ಕುಟುಂಬದವರು ಭಾಗಿಯಾಗಿದ್ದರು.  ಸಿನಿ ಗಣ್ಯರಾದ ರಾಮ್ ಚರಣ್, ಅದಿತಿ ರಾವ್ ಹೈದರಿ, ಅಖಿಲ್ ಅಕ್ಕಿನೇನಿ ಸೇರಿದಂತೆ ಅನೇಕರು ಭಾಗಿಯಾಗಿ ಶುಭಹಾರೈಸಿದ್ದರು. ರಕ್ಷಿತಾ ರೆಡ್ಡಿ ಅಮೆರಿಕಾ ಮೂಲದ ಟೆಕ್ಕಿ. ರಕ್ಷಿತಾ ಆಂಧ್ರಪ್ರದೇಶ ಮೂಲದವರಾಗಿದ್ದು ರಾಜಕೀಯ ಕುಟುಂಬಕ್ಕೆ ಸೇರಿದವರು ಎನ್ನಲಾಗಿದೆ. 

ಪ್ರಭಾಸ್ ಆದ್ಮೇಲೆ ಮದ್ವೆ ಆಗ್ತೀನಿ ಅಂತೇಳಿ ವಿದೇಶಿ ಹುಡುಗಿಯನ್ನು ವರಿಸಲು ಮುಂದಾದ ಶರ್ವಾನಂದ್

ನಟ ಶರ್ವಾನಂದ್ ತನ್ನ ಅದ್ಭುತ ಪ್ರತಿಭೆ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಕಳೆದ ವರ್ಷ ತೆರೆಗೆ ಬಂದ ಎರಡು ಸಿನಿಮಾಗಳು ಸಹ ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ರಶ್ಮಿಕಾ ಮಂದಣ್ಣ ಜೊತೆ ಆಡವಳ್ಳು ಮೀಕು ಜೋಹಾರ್ಲು ಸಿನಿಮಾದಲ್ಲಿ ನಟಿಸಿದ್ದರು. ಆದರೆ ಆ ಸಿನಿಮಾ ನಿರೀಕ್ಷೆಯ ಗೆಲುವು ಕಂಡಿಲ್ಲ. ಸದ್ಯ ಶರ್ವಾಂದನ್ ಕನಮ್ ಮತ್ತು ಇನ್ನೂ ಹೆಸರಿಡದ 35ನೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಕೆಲಸಗಳ ಜೊತೆಗೆ ಮದುವೆ ವಿಚಾರ ಬಹಿರಂಗ ಪಡಿಸುತ್ತಾರಾ ಕಾದುನೋಡಬೇಕಿದೆ.   

click me!