ತಂದೆ-ಮಗಳ ಬಾಂಧವ್ಯಕ್ಕೆ ಕಪ್ಪು ಚುಕ್ಕೆ ಇಟ್ಟ ಯೂಟ್ಯೂಬರ್ ವಿರುದ್ಧ ಕೇಸ್; ಸಾಯಿ ಧರಮ್ ತೇಜ ಗರಂ!

By Shriram Bhat  |  First Published Jul 8, 2024, 3:04 PM IST

ಯೂಟ್ಯೂಬರ್ ಒಬ್ಬರು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ವೀಡಯೋ ಒಂದಕ್ಕೆ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಕಾಮೆಂಟ್ ಹಾಗು ಪಬ್ಲಿಕ್ ಚರ್ಚೆ ನಡೆಸಿದ್ದಾರೆ. ಆ ವೀಡಿಯೋ ತಂದೆ-ಮಗಳದ್ದು ಎಂಬುದು ವಿಶೇಷ. 


ತೆಲುಗು ನಟ ಸಾಯಿ ಧರಮ್ ತೇಜ (Sai Dharam Tej) ಘಟನೆಯೊಂದರ ಬಗ್ಗೆ ತೆಲಂಗಾಣ ಸರ್ಕಾರದ ಗಮನ ಸೆಳೆದು ಸೂಕ್ತ ತನಿಖೆ ನಡೆಸಲು ಕೋರಿದ್ದಾರೆ, ಯೂಟ್ಯೂಬರ್ ಪ್ರಣೀತ್ ಹನುಮಂತು (Praneeth Hanumantu) ಹಾಗೂ ಸಹ ಯೂಟ್ಯೂಬರ್ ಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ವೀಡಯೋ ಒಂದಕ್ಕೆ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಕಾಮೆಂಟ್ ಹಾಗು ಪಬ್ಲಿಕ್ ಚರ್ಚೆ ನಡೆಸಿದ್ದಾರೆ. ಆ ವೀಡಿಯೋ ತಂದೆ-ಮಗಳದ್ದು ಎಂಬುದು ವಿಶೇಷ. 

ಸಾಮಾಜಿಕ ಜಾಲತಾಣದಲ್ಲಿ ತಂದೆ ಹಾಗು ಮಗಳ ವೀಡಿಯೋ ಒಂದು ವೈರಲ್ ಆಗುತ್ತಿತ್ತು. ಅದಕ್ಕೆ ಯೂಟ್ಯೂಬರ್ ಸೆಕ್ಸ್ ಕಂಟೆಂಟ್ ಎಂಬಂತೆ ಪ್ರೊಜೆಕ್ಟ್ ಮಾಡಿ ತನ್ನ ಯೂಟ್ಯೂಬರ್ ಸ್ನೇಹಿತರೊಂದಿಗೆ ಚರ್ಚೆ ನಡೆಸಿ ಅದನ್ನು ಸೋಷಿಯಲ್ ಮೀಡಿಯಾ ಮೂಲಕ ಶೇರ್ ಮಾಡಿದ್ದ. ಅದನ್ನು ನೋಡಿರುವ ತೆಲುಗು ನಟ ಸಾಯಿ ಧರ್ಮ ತೇಜ ತೆಲಂಗಾಣ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

Latest Videos

undefined

ಪಾಪ...ಕರುಳು ಕಿತ್ತು ಬರುತ್ತೆಅನುಶ್ರೀ ಕಥೆ ಕೇಳಿದ್ರೆ, ಕೆನ್ನೆ ಮೇಲೆ ಬಿಸಿ ಹನಿ ಬೀಳದಿದ್ರೆ ನಿಮಗೇನೋ ಆಗಿದೆ..!

ಈ  ಬಗ್ಗೆ ಮಾತನಾಡಿರುವ ಸಾಯಿ ಧರಮ್ ತೇಜಾ ಅವರು ' ಅದೊಂದು ಚೈಲ್ಡ್ ಅಬ್ಯೂಸ್' ಕಂಟೆಂಟ್. ಅದನ್ನು ನೋಡಿ ಆ ಬಗ್ಗೆ ಕೆಟ್ಟ ರೀತಿಯಲ್ಲಿ ಚರ್ಚೆ ಮಾಡುವುದು ಮೊದಲ ತಪ್ಪು. ಎರಡನೆಯದು ಅದನ್ನು ವಯಸ್ಕರ ಮೆಂಟಾಲಿಟಿಯಲ್ಲಿ ಪ್ರೊಜೆಕ್ಟ್ ಮಾಡುವುದು  ಇನ್ನೂ ದೊಡ್ಡ ತಪ್ಪು' ಎಂದಿದ್ದಾರ. ನಟ ಸಾಯಿ ಧರಮ್ ತೇಜಾ ಸಮಾಜಿಕ ಕಳಕಳಿಗೆ ಸ್ಪಂದಿಸಿರುವ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ 'ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು' ಎಂದಿದ್ದಾರೆ. 

ಇಷ್ಟಕ್ಕೇ ಸುಮ್ಮನಾಗದ ನಟ ಸಾಯಿ ಧರಮ್ ತೇಜ ಅವರು ಆ ಕಂಟೆಂಟ್‌ ಅನ್ನು ಸೋಷಿಯಲ್ ಪ್ಲಾಟ್‌ಫಾರಂನಲ್ಲಿ ಹಾಕಿರುವ ಪೋಷಕರಿಗೆ ಕೂಡ ಛಾಟಿ ಬೀಸಿದ್ದಾರೆ. 'ಪೋಷಕರೇ, ದಯವಿಟ್ಟು ಸೋಷಿಯಲ್ ಮೀಡಿಯಾದಲ್ಲಿ ಎಂತಹ ಕಟೆಂಟ್ ಇರುವ ವೀಡಿಯೋ ಅಪ್ಲೋಡ್ ಮಾಡಬೇಕು ಎಂಬುವುದರ ಬಗ್ಗೆ ಜ್ಞಾನ ಬೆಳೆಸಿಕೊಳ್ಳಿ. ಅದನ್ನೆಲ್ಲ ತಮಾಷೆ ಸಂಗತಿಯಾಗಿ ತೆಗೆದುಕೊಳ್ಳಬೇಡಿ. ಇನ್ನೂ ವಯಸ್ಸಿಗೆ ಬಾರದ ಮಗುವಿನ ಜೊತೆ ಇಂತಹ ಕೆಲಸವೆಲ್ಲ ಯಾಕೆ?' ಎಂದು ಪ್ರಶ್ನಿಸಿದ್ದಾರೆ. 

ಸೋಮವಾರದ ವೃತ ಕೆಡಿಸಿಬಿಟ್ಟಿದ್ರು ಅಂಬರೀಷ್; ಡಾ ರಾಜ್ ಆಚರಣೆ ಬಗ್ಗೆ ಪಾರ್ವತಮ್ಮ ಏನಂದಿದ್ರು?

ನಟ ಸಾಯಿ ಧರಮ್ ತೇಜಾ ಅವರ ಎಕ್ಸ್‌ ಮನವಿಗೆ ತೆಲಂಗಾಣದ ಡಿಜಿಪಿ ಕೂಡ ಸೂಕ್ತ ರೀತಿಯಲ್ಲಿ ಸ್ಪಂದಿಸದ್ದು, ಸಂಬಂಧಿಸಿದ ಯೂಟ್ಯೂಬರ್‌ಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ, ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು' ಎಂದಿದ್ದಾರೆ. ಈ ಕೇಸ್‌ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಸೋಷಿಯಲ್ ಮೀಡಿಯಾ ಬಳಕೆಯನ್ನು ಹೇಗೆ ಮಾಡಬೇಕು ಹಾಗೂ ಯೂಟ್ಯೂಬರ್‌ಗಳು ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ಇದೊಂದು ಪಾಠವಾಗಲಿ ಎಂದೇ ಎಲ್ಲರೂ ಬಯಸುತ್ತಿದ್ದಾರೆ. 

 

This is beyond gruesome, disgusting and scary.
Monsters like these go unnoticed on the very much utilised social platform doing child abuse in the disguise of so-called Fun & Dank.

Child Safety is the need of the hour 🙏🏼

I sincerely request
Hon'ble Chief Minister of Telangana… https://t.co/05GdKW1F0s

— Sai Dharam Tej (@IamSaiDharamTej)

 

click me!