ನೆಮ್ಮದಿಯನ್ನು ಬಡತನ ಎಂದು ಕರೆಯಬೇಡಿ; ನಟ ನಾರಾಯಣ ಮೂರ್ತಿ ವಿಡಿಯೋ ವೈರಲ್!

By Suvarna NewsFirst Published Jul 18, 2021, 1:07 PM IST
Highlights

ತೆಲುಗು ನಟ ಆರ್. ನಾರಾಯಣ ಮೂರ್ತಿ ಆರ್ಥಿಕ ಪರಿಸ್ಥಿತಿ ಬಗ್ಗೆ ಹರಿದಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಹಳ್ಳಿ ಜೀವನ ಬಡತನವಲ್ಲ ಎಂದಿದ್ದಾರೆ.

ತೆಲುಗು ಚಿತ್ರರಂಗದಲ್ಲಿ ಕ್ರಾಂತಿಕಾರಿ ಸಿನಿಮಾಗಳ ಮೂಲಕ ಚಿತ್ರರಂಗದಲ್ಲಿ ಬದಲಾವಣೆಗಳನ್ನು ತಂದ ಸ್ಟಾರ್ ನಟ ಆರ್. ನಾರಾಯಣ ಮೂರ್ತಿ ಆರ್ಥಿಕ ಸಂಕಷ್ಟದಲ್ಲಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹಾರಿದಾಡುತ್ತಿದೆ. ಸಾಲದೆಂಬಂತೆ ನಟ ಗದ್ದರ್ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿ ನಾರಾಯಣ ಅವರಿಗೆ ಸಹಾಯ ಮಾಡುತ್ತೇನೆ ಎಂದರೂ ನಿರಾಕರಿಸಿದ್ದರು ಎಂದು ಹೇಳಿದ್ದರು. ನಾನ್ ಸ್ಟಾಪ್ ಕರೆ ಬರುತ್ತಿದ್ದ ಕಾರಣ ನಾರಾಯಣ ಮೂರ್ತಿ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. 

'ರಂಗಸಮುದ್ರ' ಚಿತ್ರದಲ್ಲಿ ಸಂಪತ್ ರಾಜ್‌ ವಿಲನ್!

'ನನ್ನ ಬಗ್ಗೆ ಹರಿದಾಡುತ್ತಿರುವ ವಿಡಿಯೋ ಸುಳ್ಳು. ನಾನು ಬಾಡಿಗೆ ಮನೆಯಲ್ಲಿ ವಾಸವಿದ್ದೇನೆ ಆದರೆ ಮನೆಯೊಂದನ್ನು ಕಟ್ಟಿಸಿಕೊಳ್ಳಬಹುದಾದಷ್ಟು ಸಂಪಾದನೆ ಮಾಡಿದ್ದೆ.ಆದರೆ ನಾನು ಬೇಕೆಂದೇ ಮನೆ ಕಟ್ಟಿಕೊಳ್ಳಲಿಲ್ಲ. ಏಕೆಂದರೆ ಅದು ನನಗೆ ಇಷ್ಟವಿರಲಿಲ್ಲ.ಕೊರೋನಾ ಆರಂಭವಾದ ಮೇಲೆ ನಾನು ಹಳ್ಳಿಗೆ ವಾಸ್ತವ್ಯ ಬದಲಾಯಿಸಿದೆ. ಇಲ್ಲಿಯೇ ತೋಟ ನನ್ನ ಜನಗಳ ಜೊತೆ ಆರಾಮವಾಗಿದ್ದೇನೆ. ಈ ನೆಮ್ಮದಿಯನ್ನು ಬಡತನ ಎಂದು ಏಕೆ ಕರೆಯುತ್ತೀರಿ?. ನನ್ನ ನೆಮ್ಮದಿಯನ್ನು ಕಸಿಯುವ ಕೆಲಸ ಏಕೆ ಮಾಡುತ್ತೀರಿ?' ಎಂದು ನಾರಾಯಣ ಮೂರ್ತಿ ಪ್ರಶ್ನೆ ಮಾಡಿದ್ದಾರೆ. 

'ದಾಸರಿ ನಾರಾಯಣ್ ಅವರು ನನಗೆ ಮೂರು ಬೆಡ್‌ರೂಮ್‌ನ ಮನೆ ನೀಡಲು ಮುಂದೆ ಬಂದರು ನಾನು ಬೇಡವೆಂದೆ.  ಮಾಜಿ ಸಿಎಂ, ದಿವಂಗತ ವೈ. ಎಸ್ ರಾಜಶೇಖರ ರೆಡ್ಡಿಯವರು ಕೂಡ ಕರೆ ಮಾಡಿ ನೀನು ಪ್ರಜೆಗಳಿಗಾಗಿ ಸಿನಿಮಾಗಳನ್ನು ಮಾಡುತ್ತೀಯ ವಿಶಾಖಪಟ್ಟಣಂನಲ್ಲಿ ಫಿಲಂ ಸಿಟಿ ಕಟ್ಟು ನಾನು ನಿನಗೆ ಜಮೀನು ಕೊಡುತ್ತೇನೆ ಎಂದರು ನಾನು ಅದನ್ನೂ ಬೇಡವೆಂದೆ. ಚಂದ್ರಬಾಬು ನಾಯ್ಡು ಸಹ ಸಹಾಯದ ಹಸ್ತ ಚಾಚಿದರು ನಾನು ಬೇಡವೆಂದೆ. ತೆಲಂಗಾಣ ಸಿಎಂ ಕೆಸಿಆರ್ ಅವರೂ ಸಹ ದೊಡ್ಡ ಮನೆ, ಆಸ್ತಿ ಕೊಡಲು ಮುಂದಾದರು ನಾನು ಬೇಡವೆಂದೆ ಏಕೆಂದರೆ ಅದು ನನ್ನ ಜೀವನ ಶೈಲಿ ಅಲ್ಲ' ಎಂದಿದ್ದಾರೆ ನಾರಾಯಣ ಮೂರ್ತಿ.

click me!