ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆದ ಬಾಲಿವುಡ್​ನ ರೀಮೇಕಿಂಗ್​ ಸೌತ್​ ಚಿತ್ರಗಳಿವು...

By Suvarna NewsFirst Published Jan 30, 2023, 5:28 PM IST
Highlights

ಬಾಲಿವುಡ್​ನ ಹಲವು ಚಿತ್ರಗಳು ದಕ್ಷಿಣಾ ಸಿನಿಮಾಗಳಲ್ಲಿ ರೀಮೇಕ್ ಆಗಿದ್ದು, ಅವುಗಳ ಪೈಕಿ ಕೆಲವು ಸೂಪರ್​ಹಿಟ್​ ಆಗಿವೆ, ಯಾವುವು ಅವು?
 

ಸ್ಯಾಂಡಲ್​ವುಡ್​, ಹಾಲಿವುಡ್​, ಕಾಲಿವುಡ್​, ಮಾಲಿವುಡ್​ ಸೇರಿದಂತೆ ದಕ್ಷಿಣದ ಸಿನಿಮಾ  ಇಂಡಸ್ಟ್ರಿ ಒಂದಕ್ಕಿಂತ ಒಂದು  ಸೂಪರ್​ ಹಿಟ್ ಚಿತ್ರಗಳನ್ನು ನೀಡುತ್ತಿದೆ.  ಬಾಲಿವುಡ್‌ನಲ್ಲಿ ಸೌತ್ ಚಿತ್ರಗಳನ್ನು ನಕಲು ಮಾಡಲಾಗುತ್ತಿದೆ ಎಂಬ ಆರೋಪ ಬಹಳ ಹಿಂದಿನಿಂದಲೂ ಕೇಳಿಬರುತ್ತಿದ್ದು, ಈ ಆರೋಪ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಬಾಲಿವುಡ್ (Bollywood)ಸಿನಿಮಾಗಳಲ್ಲಿ ಕಾಪಿ ಕಂಟೆಂಟ್‌ಗಳು ಚೆನ್ನಾಗಿ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಅವು ಯಶಸ್ವಿಯಾಗುವುದು ಸ್ವಲ್ಪ ಕಡಿಮೆ ಎಂದು ಸೌತ್ ಸೂಪರ್‌ಸ್ಟಾರ್‌ಗಳು ಮಾತ್ರವಲ್ಲದೇ, ಖುದ್ದು  ಬಾಲಿವುಡ್ ತಾರೆಯರೂ ಒಪ್ಪಿಕೊಳ್ಳುತ್ತಿದ್ದಾರೆ.  ಬಹುತೇಕ ಬಾಲಿವುಡ್ ಚಿತ್ರಗಳು ಸೌತ್ ಇಂಡಸ್ಟ್ರಿ ಚಿತ್ರಗಳ ರೀಮೇಕ್ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ಸೌತ್ ಇಂಡಸ್ಟ್ರಿ (South industry) ಕೂಡ ಬಾಲಿವುಡ್​ನ ಕೆಲವು ಚಿತ್ರಗಳನ್ನು  ಕಾಪಿ ಮಾಡಿ ಭರ್ಜರಿ ಯಶಸ್ಸು ಗಳಿಸಿದೆ ಎನ್ನುವುದು ನಿಮಗೆ ಗೊತ್ತೆ? ಇಲ್ಲಿದೆ ನೋಡಿ ಅವುಗಳ ವಿವರ:

ಮುನ್ನಾ ಭಾಯಿ ಎಂಬಿಬಿಎಸ್ (Munna Bhai MBBS)
 2003ರಲ್ಲಿ ತೆರೆ ಕಂಡ ಬ್ಲಾಕ್​ ಬಸ್ಟರ್​ ಹಿಂದಿ ಚಲನಚಿತ್ರ 'ಮುನ್ನಾ ಭಾಯಿ ಎಂಬಿಬಿಎಸ್'. ಸಂಜಯ್ ದತ್ ಮತ್ತು ಅರ್ಷದ್ ವಾರ್ಸಿ ಅಭಿನಯದ 'ಮುನ್ನಾ ಭಾಯಿ ಎಂಬಿಬಿಎಸ್' ಚಿತ್ರವನ್ನು ತೆಲಗುವಿನಲ್ಲಿ  ಕಾಪಿ ಮಾಡಿ ಸಿನಿಮಾ ಮಾಡಿದೆ.  ಈ ಚಿತ್ರದಲ್ಲಿ ಮುನ್ನಾ ಭಾಯ್ ಮತ್ತು ಸರ್ಕ್ಯೂಟ್ ಜೋಡಿ ಬಹಳ ಹಿಟ್​ ಆಯಿತು.  ಅದೇ ಸಮಯದಲ್ಲಿ, 2004 ರಲ್ಲಿ, ಈ ಚಿತ್ರವನ್ನು ತೆಲುಗುವಿನಲ್ಲಿ  'ಶಂಕರ್ ದಾದಾ ಎಂಬಿಬಿಎಸ್' (Shankar Dada MBBS) ಹೆಸರಿನಲ್ಲಿ ಬಿಡುಗಡೆ ಮಾಡಲಾಯಿತು.  ಇದರಲ್ಲಿ ಚಿರಂಜೀವಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಕೋಟ್ಯಂತರ ರೂಪಾಯಿ ಗಳಿಸಿತು.

ಕಾಸ್ಟ್​ ಕೌಚಿಂಗ್ ಭಯಾನಕ ಅನುಭವ ಬಿಚ್ಚಿಟ್ಟ ನಟ Ankit Gupta!

ತ್ರೀ ಈಡಿಯೆಟ್ಸ್​ (Three Idiots)
ಆಮೀರ್ ಖಾನ್, ಆರ್ ಮಾಧವನ್ ಮತ್ತು ಸರ್ವಣ್ ಜೋಶಿ ಅಭಿನಯದ ಚೇತನ್ ಭಗತ್ ಅವರ ಕಾದಂಬರಿಯನ್ನು ಆಧರಿಸಿದ 'ತ್ರೀ ಈಡಿಯಟ್ಸ್' ಚಿತ್ರ 2009ರಲ್ಲಿ ಬಿಡುಗಡೆಯಾಯಿತು. ಇದು ಸಕತ್​ ಹಿಟ್​ ಚಿತ್ರವಾಗಿ ಹೊರಹೊಮ್ಮಿತು. ಈ ಚಿತ್ರದಲ್ಲಿ ಕರೀನಾ ಕಪೂರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.  2012 ರಲ್ಲಿ, ಈ ಚಿತ್ರದ ತಮಿಳು ರಿಮೇಕ್ ಮಾಡಲಾಯಿತು. ಈ ಚಿತ್ರ ತಮಿಳಿನಲ್ಲಿ 'ನನ್ಬನ್' (Nunbun) ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಲಾಗಿದೆ.  ಇದರಲ್ಲಿ ಸತ್ಯರಾಜ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಓ ಮೈ ಗಾಡ್ (Oh my God)
2012 ರಲ್ಲಿ ತೆರೆ ಕಂಡ ನಕ್ಕು ನಗಿಸುವ ಹಾಸ್ಯ ಚಿತ್ರ  ‘ಓ ಮೈ ಗಾಡ್’  ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಪರೇಶ್ ರಾವಲ್ ಜೋಡಿ ಜನಮೆಚ್ಚುಗೆ ಗಳಿಸಿದೆ.  ಇದರ ಕಥೆಯನ್ನು ದೇವರು ಮತ್ತು ಆಸ್ತಿಕ  ನಾಸ್ತಿಕನ ಅಸ್ತಿತ್ವದ ಸುತ್ತ ಹೆಣೆಯಲಾಗಿದೆ. ಇದಾದ ನಂತರ 'OMG' ನ ಸೌತ್​ನಲ್ಲಿ  ರಿಮೇಕ್ ಮಾಡಲಾಯಿತು. 2015 ರಲ್ಲಿ, 'ಗೋಪಾಲ  ಗೋಪಾಲ' (Gopala Gopala) ಹೆಸರಿನಲ್ಲಿ ತೆಲುಗುವಿನಲ್ಲಿ ಬಿಡುಗಡೆಯಾಯಿತು. ಈ ಚಿತ್ರದಲ್ಲಿ ನಟರಾದ ಪವನ್ ಕಲ್ಯಾಣ್ ಮತ್ತು ವೆಂಕಟೇಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.  ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಗಳಿಕೆ ಮಾಡಿತು.

ಶಾರುಖ್​ ಖಾನ್​ ಇಲ್ಲವೇ ಸೆಕ್ಸ್​ ಬೇಕು: ನಟಿ ನೇಹಾ ಧೂಪಿಯಾ ಹೇಳಿದ್ದೇನು?

ದಬಾಂಗ್ (Dabang)
ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅಭಿನಯದ 'ದಬಾಂಗ್' ಚಿತ್ರ ಥಿಯೇಟರ್‌ಗಳಲ್ಲಿ ರಾರಾಜಿಸಿತು. ಚುಲ್ಬುಲ್ ಪಾಂಡೆಯ ಶೈಲಿ ಬಹಳ ಮೆಚ್ಚುಗೆ ಗಳಿಸಿತು.  ಸಲ್ಮಾನ್ ಖಾನ್ ಮತ್ತು ಸೋನಾಕ್ಷಿ ಸಿನ್ಹಾ ಅವರ ಕೆಮಿಸ್ಟ್ರಿ ಕೂಡ ಪ್ರೇಕ್ಷಕರಿಗೆ ಇಷ್ಟವಾಯಿತು. ದಬಾಂಗ್ 2010 ರಲ್ಲಿ ಬಾಲಿವುಡ್‌ನಲ್ಲಿ ಬಿಡುಗಡೆಯಾಯಿತು.  2012 ರಲ್ಲಿ, ಅದರ ರಿಮೇಕ್ ಅನ್ನು ಸೌತ್ ಇಂಡಸ್ಟ್ರಿಯಲ್ಲಿ ಮಾಡಲಾಯಿತು. ಈ ಚಿತ್ರ 'ಗಬ್ಬರ್ ಸಿಂಗ್' (Gabbar Singh) ಹೆಸರಿನಲ್ಲಿ ಬಿಡುಗಡೆಯಾಗಿದೆ. ಸೌತ್ ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ 'ಗಬ್ಬರ್ ಸಿಂಗ್' ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಹಿಟ್ ಎಂದು ಸಾಬೀತಾಗಿದೆ.

ಎ ಬುಧವಾರ್​ (A budhavar)
ಅನುಪಮ್ ಖೇರ್ ಮತ್ತು ನಾಸಿರುದ್ದೀನ್ ಶಾ ಅಭಿನಯದ 'ಎ ಬುಧವಾರ್​' ಚಿತ್ರವೂ ಗಲ್ಲಾಪೆಟ್ಟಿಗೆಯನ್ನು ಅಲುಗಾಡಿಸಿತು. ಚಿತ್ರದ ಕಥೆ ಮತ್ತು ನಟರ ಅಭಿನಯವನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. 2008ರಲ್ಲಿ ಬಂದ ಈ ಚಿತ್ರ 12 ಕೋಟಿ ಗಳಿಸಿತ್ತು. ನೀರಜ್ ಪಾಂಡೆ ನಿರ್ದೇಶನದ 'ಎ ಬುಧವಾರ್​' ಚಿತ್ರ ಸೌತ್ ಇಂಡಸ್ಟ್ರಿಯಲ್ಲಿ ರಿಮೇಕ್ ಆಗಿತ್ತು. ಈ ಚಿತ್ರವು 2009 ರಲ್ಲಿ 'ಉನ್ನಿಪೋಲ್ ಒರುವನ್' (Unipol varuvan) ಎಂಬ ಹೆಸರಿನೊಂದಿಗೆ ಬಿಡುಗಡೆಯಾಯಿತು. ಈ ರಿಮೇಕ್ ಬಾಕ್ಸ್ ಆಫೀಸ್ ನಲ್ಲೂ ತನ್ನ ಕೈಚಳಕ ತೋರಿಸಿದೆ.

click me!