ಮೆಗಾ ಸ್ಟಾರ್ ಮಾಜಿ ಅಳಿಯ ಇನ್ನಿಲ್ಲ. ಶ್ವಾಸಕೋಶ ಚಿಕಿತ್ಸೆ ಫಲಕಾರಿಯಾಗದೇ ಕೊನೆ ಉಸಿರೆಳೆದ ಶಿರೀಶ್....
ತೆಲುಗು ಚಿತ್ರರಂಗದ ಮೆಗಾ ಸ್ಟಾರ್ ಚಿರಂಜೀವಿ ಕಿರಿಯ ಮಗಳು ಶ್ರೀಜ ಮತ್ತು ಉದ್ಯಮಿ ಶಿರೀಶ್ ಭಾರದ್ವಾಜ್ 2007ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ವೈಯಕ್ತಿಕ ಕಾರಣಗಳಿಂದ ಶಿರೀಶ್‌ಯಿಂದ ದೂರವಾಗಿ ವಿಚ್ಛೇದನ ಪಡೆದುಕೊಂಡರು. ಇದೀಗ ಶಿರೀಶ್ ಭಾರದ್ವಾಜ್ ಅನಾರೋಗ್ಯದಿಂದ ಕೊನೆ ಉಸಿರೆಳೆದಿದ್ದಾರೆ ಎಂದು ಎಲ್ಲೆಡೆ ವರದಿಯಾಗಿದೆ.
ತೀವ್ರ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿರೀಶ್ ಭಾರದ್ವಾಜ್ ವಯಸ್ಸು ಕೇವಲ 39 ವರ್ಷ. ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಶ್ರೀಜ ವಿಚ್ಛೇದನ ನೀಡಿದ ಬಳಿಕ ಶಿರೀಸ್ 2019ರಲ್ಲಿ ಹೈದರಾಬಾದ್ ಮೂಲತಃ ಡಾಕ್ಟರ್ ವಿಹಾನರನ್ನು ಮದುವೆಯಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ವೈರಲ್ ಆಗುತ್ತಿದೆ ಆದರೆ ಮೆಗಾ ಫ್ಯಾಮಿಲಿಯಿಂದ ಯಾವುದೇ ಹೇಳಿಕೆ ಅಥವಾ ಪೋಸ್ಟ್ ಹಾಕಿಲ್ಲ.
ನನ್ನ ಟೀ-ಶರ್ಟ್ ಅವ್ರಿಗೆ ನೈಟಿ ತರ ಆಗುತ್ತಂತೆ...ಅವ್ರು ಚಿಕ್ಕ ಇರೋದು; ದಿವ್ಯಾ ದೊಡ್ಡ ಹೆಂಗಸು ಅಂತ ಆರೋಪ ಮಾಡಿದ
ಶ್ರೀಜ ಮತ್ತು ಶರೀಶ್ ಭಾರದ್ವಾಜ್‌ಗೆ ಒಬ್ಬ ಹೆಣ್ಣು ಮಗಳಿದ್ದಾಳೆ. ವಿಚ್ಛೇದನ ಪಡೆದ ನಂತರ ಮಗಳನ್ನು ಶ್ರೀಜ ಕಡೆ ಬಂದಿದ್ದಾಳೆ. ಸದ್ಯ ಚಿರಂಜೀವಿ ಮನೆಯಲ್ಲಿ ಮಗಳು ಮತ್ತು ಮೊಮ್ಮಗಳು ವಾಸಿಸುತ್ತಿದ್ದಾರೆ. ಶ್ರೀಜ ಮತ್ತು ಶಿರೀಶ್ ಪ್ರೀತಿಗೆ ಪೋಷಕರ ಒಪ್ಪಿಗೆ ಇರಲಿಲ್ಲ ಹೀಗಾಗಿ ಇಬ್ಬರು ಓಡಿ ಹೋಗಿ ಆರ್ಯ ಸಮಾಜದಲ್ಲಿ ಮದುವೆಯಾಗಿದ್ದರು. ಇದಾದ ಮೇಲೆ ದಿನದಿಂದ ದಿನ ಶಿರೀಶ್ ಕುಟುಂಬದಿಂದ ಮಾನಸಿಕ ಕಿರುಕುಳ ಎದುರಾಗುತ್ತಿದೆ ಎಂದು ಮತ್ತೆ ಕುಟುಂಬದ ರಕ್ಷಣೆ ಕೇಳಿ ಶ್ರೀಜ ಹಿಂತಿರುಗಿದ್ದರು. 2011ರಲ್ಲಿ ಶ್ರೀಜ ಬೇರೆ ಬಂತು 2014ರಲ್ಲಿ ವಿಚ್ಛೇದನ ಪಡೆದರು.
ಮನಸ್ಸಿಗೆ ಹತ್ತಿರದವರು ಕಷ್ಟ ಅನುಭವಿಸುತ್ತಿದ್ದಾರೆ, ಮುಂದಿನ ವರ್ಷದೊಳಗೆ ಏನಾದ್ರೂ ಸಾಧನೆ ಮಾಡ್ತೀನಿ: ರಕ್ಷಕ್ ಬುಲೆಟ್
ಇದಾದ ಮೇಲೆ 2016ರಲ್ಲಿ ನಟ ಹಾಗೂ ಉದ್ಯಮಿ ಕಲ್ಯಾಣ್ ದೇವ್‌ರನ್ನು 2016ರಲ್ಲಿ ಮದುವೆ ಮಾಡಿಕೊಂಡರು. ಈ ಮದುವೆ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆಯಿತ್ತು, ಈ ದಂಪತಿಗೂ ಒಬ್ಬಳು ಹೆಣ್ಣು ಮಗಳಿದ್ದಾಳೆ. ಇಲ್ಲಿಯೂ ಕೂಡ ಕಾರಣ ಕೊಟ್ಟು ಶ್ರೀಜ ದೂರ ಬಂದಿದ್ದಾರೆ. ವಿಚ್ಛೇದನ ಹಂತದಲ್ಲಿದೆ ಎಂದು ಅನೇಕರು ಹೇಳುತ್ತಾರೆ.