ಜೀವನ್ಮರಣ ಸನ್ನಿವೇಶ, ಸುಳ್ಳು ಸುದ್ದಿ ಎಲ್ಲಿ ಸಿಗುತ್ತೆ: ಪುಷ್ಪ ಚಿತ್ರದ ಬಗ್ಗೆ ಮನೋಜ್ ಬಾಜ್‌ಪಾಯಿ ಸ್ಪಷ್ಟನೆ

Published : Jul 21, 2022, 10:29 AM IST
ಜೀವನ್ಮರಣ ಸನ್ನಿವೇಶ, ಸುಳ್ಳು ಸುದ್ದಿ ಎಲ್ಲಿ ಸಿಗುತ್ತೆ: ಪುಷ್ಪ ಚಿತ್ರದ ಬಗ್ಗೆ ಮನೋಜ್ ಬಾಜ್‌ಪಾಯಿ ಸ್ಪಷ್ಟನೆ

ಸಾರಾಂಶ

ಪುಷ್ಪ ಚಿತ್ರದ ಸ್ಪೆಷಲ್‌ ರೋಲ್‌ನಲ್ಲಿ  ಮನೋಜ್ ಬಾಜ್‌ಪಾಯಿ. ಈ ಸುಳ್ಳು ಸುದ್ದಿ ನಿಮಗೆಲ್ಲಾ ಯಾರು ಕೊಡ್ತಾರೆ? ಎಂದ ನಟ.... 

ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿ ಅಭಿನಯಿಸಿರುವ ಪುಷ್ಪ ಸಿನಿಮಾ ಬಿಡುಗಡೆಯಾದ ದಿನದಿಂದ ಇಂದಿನವರೆಗೂ 223 ಕೋಟಿ ಕಲೆಕ್ಷನ್ ಮಾಡಿದೆ. ಅಲ್ಲದೆ ಎರಡನೇ ಭಾಗ ಚಿತ್ರೀಕರಣ ಆರಂಭವಾಗಿದ್ದು 2023ರಲ್ಲಿ ರಿಲೀಸ್ ಆಗುವ ಸಾಧ್ಯತೆಗಳಿದೆ. ಬಾಯಿ ಬಿಟ್ಟಿ ಹೇಳದಿದ್ದರೂ ಪುಷ್ಪ 2 ಚಿತ್ರಕ್ಕೆ ಸ್ಪರ್ಧೆಯಾಗಿ ಯಾವ ಸಿನಿಮಾನೂ ನಿಂತುಕೊಳ್ಳುವುದಿಲ್ಲ, ಆದರೂ ತೊಡೆ ತಟ್ಟಲು ಯಾರೂ ಇರಬಾರದು ಎಂದು ಕಥೆಯನ್ನು ಅಷ್ಟು ವಿಭಿನ್ನವಾಗಿ ಬರೆಯಲಾಗಿದೆ ಮತ್ತು ಚಿತ್ರೀಕರಣ ವಿಚಾರದಲ್ಲಿ ಕಾಂಪ್ರಮೈಸ್ ಆಗಿಲ್ಲ ಎನ್ನಬಹುದು. 

ಹೊಸದಾಗಿ ಹರಿದಾಡುತ್ತಿರುವ ಸುದ್ದಿ ಪ್ರಕಾರ  ಮನೋಜ್ ಬಾಜ್‌ಪಾಯಿ ಪುಷ್ಪ 2 ಸಿನಿಮಾದಲ್ಲಿ ಖಡಕ್ ಪೊಲೀಸ್ ಆಫೀಸರ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.  ಮನೋಜ್ ಬಾಜ್‌ಪಾಯಿ ಬಹುತೇಕ ಸಿನಿಮಾಗಳಲ್ಲಿ ಆಫೀಸರ್ ಪಾತ್ರ ಮಾಡಿರುವ ಕಾರಣ ಅವರು ಸಿನಿಮಾಗೆ ಸೂಕ್ತ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ, ಆದರೆ ಮನೋಜ್‌ ನಾನು ಸಿನಿಮಾದಲ್ಲಿ ನಟಿಸುತ್ತಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. 

ಮನೋಜ್ ಸ್ಪಷ್ಟನೆ:

'ಇದು ಸತ್ಯವಲ್ಲ. ಸುಳ್ಳು ಸುದ್ದಿ. ಅಷ್ಟೆ ನಾನು ಹೇಳಲು ಸಾಧ್ಯ.  ಪುಷ್ಪ ಸಿನಿಮಾ ತಂಡ unapologetic ಮತ್ತು passionate. ಚಿತ್ರದ ಪ್ರತಿ ದೃಶ್ಯವನ್ನು ದೇಶದಲ್ಲೇ ಇದು ಬೆಸ್ಟ್‌ ಸೀನ್‌ ಚಿತ್ರೀಕರಣ ಮಾಡುತ್ತಿದ್ದೀವಿ ಅನ್ನೋ ರೀತಿ ಕೆಲಸ ಮಾಡುತ್ತಾರೆ. ನಿಜ ಜೀವನದಲ್ಲಿ ಆ ಕ್ಷಣಗಳನ್ನು ಅನುಭವಿಸಿರುವ ರೀತಿಯಲ್ಲಿ ಚಿತ್ರೀಕರಣ ಮಾಡುತ್ತಾರೆ, ವೀಕ್ಷಕರನ್ನು ಮೆಚ್ಚಿಸಲು ಅಥವಾ ಅವರ ಕಣ್ಣು ತುಂಬಿಸಲು ಏನೋ ಒಂದು ಚಿತ್ರೀಕರಣ ಮಾಡುವುದಿಲ್ಲ. ಪ್ರತಿ ದೃಶ್ಯ ನೋಡುವಾಗಲ್ಲೂ  ಚೇರ್ ತುದಿಯಲ್ಲಿ ಕೂರುವಂತೆ ಮಾಡುತ್ತಾರೆ. ನೀವು ಪುಷ್ಪ, ಆರ್‌ಆರ್‌ಆರ್‌ ಮತ್ತು ಕೆಜಿಎಫ್ ಚಾಪ್ಟರ್ 1 ಮತ್ತು 2 ಸಿನಿಮಾ ನೋಡಿದರೆ ನಿರ್ಮಲ. ಪ್ರತಿಯೊಂದು ಚೌಕಟ್ಟನ್ನೂ ಒಂದು ಜೀವನ್ಮರಣ ಸನ್ನಿವೇಶ ಎಂಬಂತೆ ಚಿತ್ರೀಕರಿಸಲಾಗಿದೆ. ಈ ವಿಚಾರದಲ್ಲಿ ನಾವು ತುಂಬಾನೇ ಲ್ಯಾಕ್ ಆಗುತ್ತೀವಿ' ಎಂದು ಮನೋಜ್ ಖಾಸಗಿ ವೆಬ್‌ನೊಂದಿಗೆ ಮಾತನಾಡಿದ್ದಾರೆ.

'ಪುಷ್ಪ' ದ ಶ್ರೀವಲ್ಲಿ ಐಕಾನಿಕ್ ಸ್ಟೆಪ್ ಸೃಷ್ಟಿ ಆಗಿದ್ದು ಹೇಗೆ, ಹೇಳ್ತಾರೆ ಅಲ್ಲು ಅರ್ಜುನ್!

'ಎಲ್ಲಿಂದ ನಿಮಗೆ ಈ ರೀತಿ ಸುಳ್ಳು ಸುದ್ದಿಗಳು ಸಿಗುತ್ತದೆ? ಮುಂಚೆ ನಾನು ಸೌತ್‌ ಸಿನಿಮಾರಂಗದಲ್ಲಿ ಅಭಿನಯಿಸಿರುವೆ. ವೃತ್ತಿ ಜೀವನದಲ್ಲಿ ನಾನು ಸದಾ ಒಳ್ಳೆ ಕಥೆಗಳ ಹುಡುಕಾಟದಲ್ಲಿ ಇರುತ್ತೇನೆ. 1000 ಕೋಟಿ ಬಜೆಟ್‌ ಇರಲಿ 500 ಕೋಟಿ ಬಜೆಟ್ ಇರಲಿ ಅಥವಾ 300 ಕೋಟಿ ಇರಲಿ ಅದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಈ ಬಾಕ್ಸ್‌ ಆಫೀಸ್‌ ಟ್ರೆಂಡ್‌ ವಿರುದ್ಧ ನಾನು ಸದಾ ಹೋರಾಟ ಮಾಡುವೆ' ಎಂದು ಮನೋಜ್ ಹೇಳಿದ್ದಾರೆ.

ಪುಷ್ಪ 3 ಸುಳಿವು:

ಪುಷ್ಪ ಸಿನಿಮಾದಲ್ಲಿ ಫನ್ನಿ ಪೊಲೀಸ್‌ ಪಾತ್ರದಲ್ಲಿ ಫಹದ್ ಫಾಸಿಲ್ ಅಭಿನಯಿಸಿದ್ದಾರೆ. ಎರಡನೇ ಭಾಗ ಕೂಡ ಆರಂಭವಾಗುವುದು ಫಹದ್‌ ಮೂಲವೇ ಎನ್ನಲಾಗಿದೆ. 'ನಿರ್ದೇಶಕ ಸುಕುಮಾರ್‌ ಅವರು ನನಗೆ ಮೊದಲು ಪುಷ್ಪ ಕಥೆ ಹೇಳಿದ್ದರು, ಪೊಲೀಸ್ ಠಾಣೆ ದೃಶ್‌ ಬಿಗ್ ಹಿಟ್‌ ಆಗಿ ಸಿನಿಮಾ ಎರಡನೇ ಭಾಗ ಮಾಡಲು ಕಾರಣವಾಯ್ತು ಎಂದು ತಿಳಿಯುವುದಕ್ಕೆ ಖುಷಿ ಆಗಿದೆ.  ಇತ್ತೀಚಿಗೆ ನಿರ್ದೇಶಕರು ನನ್ನ ಜೊತೆ ಮಾತನಾಡಿದ್ದರು ಪುಷ್ಪ 3 ಭಾಗಕ್ಕೆ ತಯಾರಿ ಮಾಡಿಕೊಳ್ಳಿ ಎಂದರು. ಅವರ ಬಳಿ ಅಷ್ಟು ಸೂಪರ್ ಆಗಿರುವ ಕಥೆಗಳಿದೆ ಅದಕ್ಕೆ ಭಾಗವಾಗಿ ಮಾಡುತ್ತಿದ್ದಾರೆ'ಎಂದು ಫಹದ್ ಫಾಸಿಲ್  ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಶಾರುಖ್ ಜೊತೆ ಡಾನ್ಸ್ ನಿರಾಕರಿಸಿದ ವಧು, ಅಸಮಾಧಾನಗೊಂಡ ಫ್ಯಾನ್ಸ್
ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!