#WeStandWithSuriya: ನಟನಿಗೆ 5 ಕೋಟಿ ರೂ. ಪರಿಹಾರ ನೀಡಲು ಲೀಗಲ್ ನೋಟಿಸ್

By Suvarna NewsFirst Published Nov 16, 2021, 12:11 PM IST
Highlights

ವನ್ನಿಯಾರ್ ಪಂಗಡದ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಹಿನ್ನೆಲೆಯಲ್ಲಿ ಲೀಗಲ್ ನೋಟಿಸ್‌. ಪರೋಕ್ಷವಾಗಿ ನಟ ಸೂರ್ಯನ ಪರ ನಿಂತ ಅಭಿಮಾನಿಗಳು...

ತಮಿಳು ನಟ ಸೂರ್ಯ (Suriya) ನಟನೆಯ ಜೈ ಭೀಮ್ (Jai Bhim) ಸಿನಿಮಾ ನವೆಂಬರ್ 2ರಂದು ಅಮೇಜಾನ್ ಪ್ರೈಮ್‌ನಲ್ಲಿ (Amazon Prim) ಬಿಡುಗಡೆಯಾಗಿದೆ. ಟಿ ಜೆ ಜ್ಞಾನವೇಲ್ ನಿರ್ದೇಶಿಸಿರುವ, ಸತ್ಯ ಘಟನೆಯಾಧಾರಿತ ಈ ಚಿತ್ರದಲ್ಲಿ, ಬಹುತೇಕ ವಿಚಾರಗಳು ಹಾಗೂ ವ್ಯಕ್ತಿಗಳ ಹೆಸರನ್ನು ರಿಯಲ್ ಆಗಿಯೇ ತೋರಿಸಲಾಗಿದೆ. ಆದರೆ ವನ್ನಿಯಾರ್ ಸಮುದಾಯದ ಜನರಿಗೆ ಪೊಲೀಸರು (Police) ಈ ಹಿಂದೆ ನೀಡಿರುವ ಹೆಸರನ್ನು ಬದಲಾಯಿಸಲಾಗಿದೆ. ಓಟಿಟಿಯಲ್ಲಿ (OTT) ಕೋಟಿಗಟ್ಟೆಲೆ ಬಾಜಿಕೊಳ್ಳುತ್ತಿರುವ ಈ ಸಿನಿಮಾ ತಂಡಕ್ಕೆ ವನ್ನಿಯಾರ್ ಸಮುದಾಯದ ಅಧ್ಯಕ್ಷರು ನೋಟಿಸ್ ನೀಡಿದ್ದಾರೆ. 

1995ರ ನೈಜ ಘಟನೆ ಆಧರಿಸಿದ ಸಿನಿಮಾ ಕಥೆಯಾದ್ದರಿಂದ ಇರುಳರು ಎಂಬ ಸಮುದಾಯಕ್ಕೆ ಪೊಲೀಸರು ಯಾವ ರೀತಿ ಹಿಂಸೆ ನೀಡಿದ್ದರು? ಇದರಿಂದ ಅವರು ಎಷ್ಟು ನೋವು, ವೇದನ ಅನುಭವಿಸಿದ್ದಾರೆ, ಎಂಬುದನ್ನು ಮನಮುಟ್ಟುವಂತೆ ತೋರಿಸಲಾಗಿದೆ. ಇರುಳರ ಸಮುದಾಯದ ಪರ ವಕೀಲ ಚಂದ್ರು (Lawyer Chandru) ನ್ಯಾಯಾಲಯದಲ್ಲಿಈ ಸಮುದಾಯದ ಪರ ವಾದ ಮಾಡಿ ನ್ಯಾಯ ತಂದು ಕೊಡುತ್ತಾನೆ. ವಕೀಲ ಚಂದ್ರು ಪಾತ್ರದಲ್ಲಿ ಸೂರ್ಯ ಕಾಣಿಸಿಕೊಂಡಿದ್ದಾರೆ. ಇಲಿ (Rat) ಮತ್ತು ಹಾವು (Snake) ಹಿಡಿದು, ಇಟ್ಟಿಂಗಿ ಬಡೆದು ಬದುಕುವ ಇರುಳರು ಎಂಬ ಮುಗ್ಧ ಬುಡಕಟ್ಟು ಜನಾಂಗ ಪೊಲೀಸರಿಗೆ ಸಿಲುಕಿ ನರಳಿದ ಇತಿಹಾಸವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. 

ಹೀಗಾಗಿ ವನ್ನಿಯಾರ್ ಸಂಗಮ್ ಸಮುದಾಯ ಅಧ್ಯಕ್ಷ ಅರುಲ್, ಪತ್ತಲಿ ಮಕ್ಕಳ್ ಕಚ್ಚಿ ಮುಖ್ಯಸ್ಥ ಮತ್ತು ವಕೀಲ ಕೆ ಬಾಬು ಅವರು ಇಡೀ ತಂಡಕ್ಕೆ ನೋಟಿಸ್ ನೀಡಿದ್ದಾರೆ. ಬಹುತೇಕ ಪಾತ್ರದಾರಿಗಳ ಹೆಸರುಗಳ ನೈಜವಾಗಿಯೋ ಇವೆ. ಆದರೆ ಆರೋಪಿಗೆ ಹಿಂಸೆ ನೀಡಿದ ಎಸ್‌ಐ ಹೆಸರನ್ನು ಮಾತ್ರ ಬದಲಾಯಿಸಿಲಾಗಿದೆ. ಅಲ್ಲದೇ ವನ್ನಿಯರ್  ಸಮುದಾಯದ ಚಿಹ್ನೆಯಾಗಿರುವ ಅಗ್ನಿಕುಂಡವನ್ನು ಕ್ಯಾಲೆಂಡರ್‌ನಲ್ಲಿ ತೋರಿಸಲಾಗಿದೆ. ಆರೋಪಿ ಅವರಿಗೆ ಚಿತ್ರದಲ್ಲಿ ಗುರುಮೂರ್ತಿ ಎಂದು ಹೆಸರಿಟ್ಟಿದ್ದಾರೆ. ಆದರೆ ಅವರನ್ನು ಗುರು ಎಂದು ಕರೆದಿದ್ದಾರೆ. ಎಲ್ಲರಿಗೂ ಇದು ಪಿಎಂಕೆ ಪಕ್ಷದ ನಾಯಕ ಜೆ ಗುರು ನೆನಪಿಸುತ್ತದೆ ಎಂದು ಅಧ್ಯಕ್ಷರು ಆರೋಪಿಸಿದ್ದಾರೆ. 

ಪುನೀತ್ ಸಮಾಧಿ ಬಳಿ ನಿಂತು ಪುನೀತ್ ಬಗ್ಗೆ ಮಾತನಾಡುತ್ತಾ ಭಾವುಕರಾಗ ತಮಿಳು ನಟ ಸೂರ್ಯ!

ಚಿತ್ರ ಈಗಾಗಲೇ ಕೋಟಿ ಸಂಖ್ಯೆಲ್ಲಿ ವೀಕ್ಷಣೆಯಾಗಿದೆ. ಎಲ್ಲರೂ ಕ್ಯಾಲೆಂಡರ್‌ (Calender) ಮೇಲಿರುವ ಅಗ್ನಿಕುಂಡವನ್ನು ಗಮನಿಸಿದ್ದಾರೆ. ಅದನ್ನು ಈ ಕೂಡಲೆ ಅದನ್ನು ತೆಗೆಯಬೇಕು. ಇದು ವನ್ನಿಯಾರ್ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ, ಎಂದು ನೋಟಿಸ್‌‌ನಲ್ಲಿ ವಿವರಿಸಲಾಗಿದೆ. ಚಿತ್ರತಂಡ ನೋಟಿಸ್‌ ಪಡೆದ 7 ದಿನಗಳಲ್ಲಿ 5 ಕೋಟಿ ರೂಪಾಯಿ ಪರಿಹಾರವಾಗಿ ನೀಡಬೇಕು ಎಂದು ಆಗ್ರಹಿಸಲಾಗಿದೆ. 

ಗಾರ್ಮೆಂಟ್‌ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರಂತೆ ಸೌತ್‌ನ ಈ ಸೂಪರ್‌ಸ್ಟಾರ್‌!

ಸಿನಿಮಾದಲ್ಲಿ ನೈಜಘಟನೆಯನ್ನು ತೋರಿಸಿರುವುದಕ್ಕೆ ಸಮುದಾಯಕ್ಕೆ ನೋವಾಗಿರಬಹುದು. ಆದರೆ ಇಡೀ ಚಿತ್ರವನ್ನು ಈಗ ಎಡಿಟ್ ಮಾಡುವುದು ಸಾಮಾನ್ಯ ವಿಚಾರವಲ್ಲ. ನೀವು ಏನೇ ನೋಟಿಸ್ ನೀಡಿದ್ದರೂ ನಾವು ಸೂರ್ಯ ಮತ್ತು ತಂಡದ ಪರ ನಿಲ್ಲುತ್ತೇವೆ, ಎಂದು ನೆಟ್ಟಿಗರು ಟ್ಟಿಟರ್‌ನಲ್ಲಿ #WeStandWithSuriya ಎಂದು ಹ್ಯಾಷ್‌ಟ್ಯಾಗ್ ಸೃಷ್ಟಿಸಿ, ಟ್ವೀಟ್ ಮಾಡುತ್ತಿದ್ದು, ಟ್ರೆಂಡ್ ಆಗುತ್ತಿದೆ. 

ಚಿತ್ರ ಬಿಡುಗಡೆ ಆದ ದಿನವೂ ಒಂದು ವಿವಾದ ಶುರುವಾಗಿತ್ತು. ಹಿಂದಿಯಲ್ಲಿ ಮಾತನಾಡಿದ ಯುವನಕ ಕೆನ್ನೆಗೆ ಪ್ರಕಾಶ್ ರೈ ಹೊಡೆದು ತಮಿಳು ಮಾತನಾಡುವಂತೆ ಹೇಳುತ್ತಾರೆ. ಈ ಘಟನೆಯೂ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು.

click me!