
ಮಲೈಕಾ ಅರೋರಾ(Malaika Arora) ಕ್ಯೂಟ್ & ಹಾಟ್ ನಟಿ. ಬಾಲಿವುಡ್‌ನ(Bollywood) ಸೂಪರ್ ಮಾಡೆಲ್, ಡ್ಯಾನ್ಸರ್, ಫಿಟ್ನೆಸ್ ಫ್ರೀಕ್, ಯೋಗಪಟು ಕೂಡಾ ಹೌದು. 48ರಲ್ಲೂ ಸಖತ್ ಫಿಟ್ ಅಗಿರೋ ನಟಿ ಎಂದರೆ ಚಿಕ್ಕ ಮಕ್ಕಳಿಂದ ತೊಡಗಿ ದೊಡ್ಡವರ ತನಕ ಎಲ್ಲರಿಗೂ ಇಷ್ಟ. ಚೈಂಯ ಚೈಂಯ ಹುಡುಗಿ ಅಂದ್ರೆ ಎಲ್ಲರಿಗೂ ಮಲೈಕಾರ ನೆನಪಾಗುತ್ತದೆ, ಪರಿಚಯವೂ ಸಿಗುತ್ತದೆ.
ಈಗ ನಟಿಯ ವಿಡಿಯೋ ಒಂದು ವೈರಲ್ ಆಗಿದೆ. ಬಾಲಕನೊಬ್ಬ ನಟಿಯ ಕೆನ್ನೆ ಹಿಂಡಿದ್ದು ಮಿಲಿಯನ್ ಡಾಲರ್ ಸ್ಮೈಲ್ ಕೊಟ್ಟಿದ್ದಾರೆ ಮಲೈಕಾ. ಈ ಲವ್ಲೀ ವಿಡಿಯೋ ಮಲೈಕಾಗೆ ಭಾರೀ ಮೆಚ್ಚುಗೆಯಾಗಿದ್ದು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಭಾರತದ ಬೆಸ್ಟ್ ಡ್ಯಾನ್ಸರ್ 2 ರ ಸೆಟ್‌ಗಳಲ್ಲಿ ಕೆಲವು ಪುಟ್ಟ ಅಭಿಮಾನಿಗಳನ್ನು ಒಳಗೊಂಡಿರುವ ವೀಡಿಯೊವನ್ನು ಮಲೈಕಾ ಅರೋರಾ Instagram ನಲ್ಲಿ ಹಂಚಿಕೊಂಡಿದ್ದಾರೆ. ನಟಿ-ಟೆಲಿವಿಷನ್ ನಿರೂಪಕಿ ಡಾನ್ಸ್ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಲ್ಲಿ ಒಬ್ಬರು.
Malaika Arora: ಬ್ರೈಟ್ ಬಾಡಿಕಾನ್ ಡ್ರೆಸ್‌ನಲ್ಲಿ ಮಿಂಚಿದ ಚೈಂಯಾ ಚೈಂಯಾ ನಟಿ
ಭಾನುವಾರ ಹಂಚಿಕೊಂಡ ವೀಡಿಯೊದಲ್ಲಿ, ಮಲೈಕಾ ಅರೋರಾ ಗೋಲ್ಡನ್, ಬಾಡಿಕಾನ್ ಡ್ರೆಸ್ ಧರಿಸಿ ಜಡ್ಜ್ ಕುರ್ಚಿಯ ಮೇಲೆ ಕುಳಿತಿದ್ದಾರೆ. ಆಕೆಯ ಸುತ್ತಲೂ ಅಭಿಮಾನಿಗಳ ಸಣ್ಣ ಗುಂಪು ಸುತ್ತುವರಿದಿತ್ತು. ನಟಿ ಚಿಕ್ಕ ಹುಡುಗಿಯ ಒಂದು ಕೈಯನ್ನು ಹಿಡಿದಾಗ, ಗುಂಪಿನಲ್ಲಿದ್ದ ಒಬ್ಬ ಹುಡುಗ ಅವಳ ಕೆನ್ನೆಯನ್ನು ಹಿಂಡಿದ್ದಾನೆ. ಆಶ್ಚರ್ಯಗೊಂಡ ಮಲೈಕಾ ಮುಗುಳ್ನಗೆಯನ್ನು ಕೊಟ್ಟು ಪ್ರತಿಯಾಗಿ ಅವನ ಕೆನ್ನೆಯನ್ನು ಹಿಂಡಿದ್ದಾರೆ.
ನಂತರ ಅವರು ಮಕ್ಕಳಿಗೆ ಗ್ರೂಪ್ ಡ್ಯಾನ್ಸ್ ಕೊಟ್ಟಿದ್ದಾರೆ. ಮಲೈಕಾ ಅವರು ವೆನ್ ಚಾಯ್ ಮೆಟ್ ಟೋಸ್ಟ್‌ನ ಜಾಯ್ ಆಫ್ ಲಿಟಲ್ ಥಿಂಗ್ಸ್ ಹಾಡನ್ನು ಹಿನ್ನಲೆಯಲ್ಲಿ ಬಳಸಿದ್ದಾರೆ. ಕ್ಯಾಪ್ಶನ್‌ನಲ್ಲಿ ಹ್ಯಾಶ್‌ಟ್ಯಾಗ್‌ಗಳ ಸರಣಿಯೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇವುಗಳಲ್ಲಿ ಮಕ್ಕಳ ದಿನಾಚರಣೆ, ಮೋಜಿನ ಆರಂಭ, ನಿಮ್ಮಲ್ಲಿರುವ ಮಗು ಮತ್ತು ಭಾರತದ ಬೆಸ್ಟ್ ಡ್ಯಾನ್ಸರ್ ಇಂತವುಗಳು ಸೇರಿವೆ.
ಗಾಯಕಿ ಲೀಸಾ ಕಮೆಂಟ್ ಮಾಡಿ ದಿ ಚೀಕ್ಸ್ ಪಿಂಚರ್! ಎಂದು ಬರೆದು ಜೊತೆಗೆ ಹೃದಯ ಕಣ್ಣುಗಳ ಎಮೋಜಿ ಪೋಸ್ಟ್ ಮಾಡಿದ್ದಾರೆ. ಅಭಿಮಾನಿಗಳು ಕೂಡ ಮಲೈಕಾ ಅವರಿಗೆ ಪ್ರೀತಿಯ ರಿಯಾಕ್ಷನ್‌ಗಳನ್ನು ಕೊಟ್ಟಿದ್ದಾರೆ . ಇಂದು ಇಂಟರ್ನೆಟ್‌ನಲ್ಲಿ ಇದು ಅತ್ಯಂತ ಮೋಹಕವಾದ ವಿಷಯವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.