ಖ್ಯಾತ ನಟ ವಿಮಲ್ ವಿರುದ್ಧ 6.5 ಕೋಟಿ ವಂಚನೆ ಆರೋಪ!

Published : Apr 26, 2022, 03:38 PM IST
ಖ್ಯಾತ ನಟ ವಿಮಲ್ ವಿರುದ್ಧ 6.5 ಕೋಟಿ ವಂಚನೆ ಆರೋಪ!

ಸಾರಾಂಶ

ವಿಮಲ್ ವಿರುದ್ಧ ಒಂದಾದ ಮೇಲ್ಲೊಂದು ಆರೋಪ, ಎಷ್ಟು ಕೋಟಿ ವಂಚನೆ ಮಾಡಿದ್ದೀರಾ ಎಂದು ಪ್ರಶ್ನೆ ಮಾಡಿದ ನೆಟ್ಟಿಗರು...

ತಮಿಳು ಚಿತ್ರರಂಗದ ಖ್ಯಾತ ನಟ ವಿಮಲ್ (Vimal) ಕಳೆದ ಮೂರ್ನಾಲ್ಕು ದಿನಗಳಿಂದ ಸುದ್ದಿಯಲ್ಲಿದ್ದಾರೆ.  ಮೊದಲು ನಿರ್ಮಾಪಕ ಗೋಪಿ 5 ಕೋಟಿ ವಂಚನೆ ಆಗಿದೆ ಎಂದು ಚೆನ್ನೈ ಪೊಲೀಸ್ ಠಾಣೆಯಲ್ಲಿ (Chennai) ದೂರು ದಾಖಲಿಸಿದ್ದರು, ಈಗ ನಿರ್ಮಾಪಕ ಸಿಂಗಾರವೇಲನ್ 1.5 ಕೋಟಿ ಮೋಸವಾಗಿದೆ ಎಂದು ದೂರು ದಾಖಲಿಸಿದ್ದಾರೆ. 

ಚೆನ್ನೈನ ಕಮೀಷನರ್‌ಗೆ ದೂರು ನೀಡಿರುವ ನಿರ್ಮಾಪಕರು ತಮ್ಮ ಕಂಪ್ಲೇಂಟ್‌ ಕಾಂಪಿಯನ್ನು ಮೀಡಿಯಾ ಜೊತೆ ಹಂಚಿಕೊಂಡಿದ್ದಾರೆ. ಅಲ್ಲದೆ ವಿಮಲ್ ನೀಡುತ್ತಿರುವ ತಪ್ಪು ಹೇಳಿಗಳ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯ ಮಾಡುತ್ತಿದ್ದಾರೆ.

ಸಿಂಗಾರವೇಲನ್ ದೂರು:

'ಮರಿನಾ ಪಿಕ್ಚರ್‌ ವಿತರಣೆ ಸಂಸ್ಥೆ ಆರಂಭಿಸಿದ ನಾನು ರಜನಿಕಾಂತ್ ಅವರ ಲಿಂಗ, ವಿಜಯ್ ಸೇತುಪತಿ ಅವರ ಪುರಂಬೋಕ್ಕು ವಿತರಣೆ ಮಾಡಿದ್ದೀನಿ. ಈ ಸಂದರ್ಭದಲ್ಲಿ ನಟ ವಿಮಲ್‌ ನನ್ನನ್ನು2016ರಲ್ಲಿ ಭೇಟಿ ಮಾಡಿ ವಿತರಣೆ ಬಗ್ಗೆ ಚರ್ಚೆ ಮಾಡಿದ್ದರು. ಆಗ ನಮ್ಮ ನಡುವೆ ಸ್ನೇಹ ಬೆಳೆಯಿತ್ತು ಆ ಸಮಯದಲ್ಲಿ ಅವರ ಇಂದ್ರು ನೇತ್ರು, ಜಾನಲ್ ಓರಮ್,ಕಾವಲ್, ಸಂಜಲಿ ಮತ್ತು ಮಾಪಲ್ ಸಿಂಗಮ್ ಬಾಕ್ಸ್ ಆಫೀಸ್‌ನಲ್ಲಿ ಸೋತ್ತು ಕಂಡಿತ್ತು. ಅವರ munnar vagaiyara ಸಿನಿಮಾ ಹಣ ಇಲ್ಲದೆ ಕೆಲಸ ಅರ್ಧಕ್ಕೆ ನಿಂತಿದೆ ನೀವು ಸಹಾಯ ಮಾಡಿ ಎಂದರು.

Check Bounce: ನಟಿ ಜೀವಿತಾ ರಾಜಶೇಖರ್ ವಿರುದ್ಧ ಜಾಮೀನು ರಹಿತ ವಾರಂಟ್

ನನ್ನ ಸ್ನೇಹಿತ ಗೋಪಿ ವ್ಯವಸ್ತೆ ಮಾಡಿ 5 ಕೋಟಿ ಸಾಲ ಮಾಡಿಕೊಟ್ಟರು. ಈ ಸಮಯದಲ್ಲಿ ನನ್ನನ್ನು ವಿಮಲ್ ಅವರ ಹುಟ್ಟುಹಬ್ಬದ ಪಾರ್ಟಿಗೆ ಕರೆದಿದ್ದರು. ಆಗ ವೇದಿಕೆ ಮೇಲೆ ಅವರು ನಾನು ಅವರ Kalavani-2 ಸಿನಿಮಾ ನಿರ್ಮಾಣ ಮಾಡ್ತೀನಿ ಎಂದು ಅನೌನ್ಸ್ ಮಾಡಿದ್ದರು. ಇದಾದ ನಂತರ ವಿಮಲ್‌ ನನ್ನನ್ನು 2017 ಅಕ್ಟೋಬರ್ 13ರಂದು ಭೇಟಿ ಮಾಡಿ ಸಿನಿಮಾದ ಸಂಪೂರ್ಣ ವಿತರಣೆ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದರು ಆಗ ನಾನು ಅಕ್ಟೋಬರ್ 14ರಲ್ಲಿ 1.5 ಕೋಟಿ ಮುಂದುವರೆದೆ. ಆದರೆ ಅವರು ಕೆಲಸ ಶುರು ಮಾಡಲಿಲ್ಲ ನಿರ್ಮಾಪಕರು ಬದಲಾಗಿದ್ದಾರೆ ಎಂದು ಹೇಳಿ ನನ್ನ ಹಣ ಹಿಂತಿರುಗಿಸುವುದಾಗಿ ಹೇಳಿದ್ದರು ಆದರೆ ಅದನ್ನು ನಂಬಿ ನಾನು ಸುಮ್ಮನಾದೆ. 

ಸಿನಿಮಾ ರಿಲೀಸ್ ದಿನಾಂಕ ಅನೌನ್ಸ್‌ ಮಾಡದ ನಂತರವೂ ಹಣ ನೀಡಲಿಲ್ಲ. ಸಿನಿಮಾ ತಡೆಗೆ ಆರ್ಡರ್‌ ತಂದೆ ಎಂದ ನನ್ನ ವಿರುದ್ಧ ದೂರು ನೀಡಿದ್ದರು ಆನಂತರ ನನ್ನ ಕಂಪ್ಲೇಂಟ್‌ ಕಾಪಿ ನೋಡಿ ಸುಮ್ಮನಾದರು. ಅವರು ನನಗೆ ಚೆಕ್ ಕೊಟ್ಟರು ಆದರೆ ಬ್ಯಾಂಕಲ್ಲಿ ಬೌನ್ಸ್ ಆಯ್ತು ಆನಂತರ ಹಣ ಕೊಟ್ಟ ನನ್ನ ಸ್ನೇಹಿತನ ಮೇಲೆ ವಿಮಲ್ ದೂರು ಸಲ್ಲಿಸಿದ್ದಾರೆ. ನೀವು ತನಿಖೆ ನಡೆಸಿ ನನಗೆ ಹಣ ಸಿಗುವಂತೆ ಮಾಡಬೇಕು'.

PAN Card Misuse: ನಟ ರಾಜ್ ಕುಮಾರ್ ರಾವ್ ಪ್ಯಾನ್ ದುರ್ಬಳಕೆ; ನಿಮ್ಮ ಪ್ಯಾನ್ ಕಾರ್ಡ್ ದುರ್ಬಳಕೆ ಆಗಿದೆಯಾ? ಚೆಕ್ ಮಾಡಿ

ಕಣ್ಣೀರು ಮಲ್ಕಾ ದೂರು:

ಖ್ಯಾತ ನಿರ್ದೇಶಕನ ಪುತ್ರಿ ಕಣ್ಣೀರ್ ಮಲ್ಕಾ ಕೂಡ ಚೆನ್ನೈನಲ್ಲಿ ವಿಮಲ್ ವಿರುದ್ಧ 1.75 ಕೋಟಿ ವಂಚನೆ ಆಗಿದೆ ಎಂದು ದೂರು ಸಲ್ಲಿಸಿದ್ದಾರೆ. 'ನನ್ನ ತಂದೆ ಗಣೇಶ್‌ಗೆ ಅವರಿಗೆ ಬ್ರೈನ್ ವಾಶ್ ಮಾಡಿ ವಿಮಲ್ ಅವರು ಸಿನಿಮಾ ನಿರ್ಮಾಣ ಮಾಡಿಸಿಕೊಂಡರು. 5 ಕೋಟಿ ಸಿನಿಮಾ ಬಜೆಟ್ ಇರಲಿದೆ ನೀವು 1.5 ಕೋಟಿ ನೀಡಿ ಉಳಿದ ಹಣವನ್ನು ಹೊಂದಿಸಬಹುದು ಎಂದರು. ಚಿತ್ರೀಕರಣ ಆರಂಭವಾದ ಎರಡೇ ದಿನಕ್ಕೆ ನಾಯಕಿ ಜೊತೆ ಜಗಳ ಮಾಡಿಕೊಂಡು ಸಿನಿಮಾ ಕೈ ಬಿಟ್ಟರು. ಹಣ ವಾಪಸ್ ಮಾಡುವುದಾಗಿ ಮಾತು ಕೊಟ್ಟರು ಆದರೆ ಇನ್ನೂ ನಿಡಿಲ್ಲ' ಎಂದು  ಮಲ್ಕಾ ಹೇಳಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಪ್ರೀತಿಸಿದ ಹುಡುಗಿ ಮೋಸ ಮಾಡಿದ್ರೆ ತಿರುಗಿ ನೋಡದ ಹುಡುಗರು; ದ್ರೋಹ ಮಾಡಿದೋಳ ಹಿಂದೆ ಹೋದ Bigg Boss ಸ್ಪರ್ಧಿ
ರಾಮ್ ಚರಣ್ ಮೇಲೆ ದೇಶದಾಚೆಗಿನ ಪ್ರೀತಿ.. ಮೆಗಾ ಪವರ್ ಸ್ಟಾರ್‌ಗಾಗಿ ಭಾರತಕ್ಕೆ ಬಂದ ಆ ವಿದೇಶಿ ಫ್ಯಾನ್ಸ್!