Jana Nayagan Movie Review: ಕೊನೇ ಸಿನಿಮಾದಲ್ಲಿ ಸಖತ್ ಮಸಾಲೆ ಕೊಟ್ಟ ದಳಪತಿ ವಿಜಯ್!‌ ಥಿಯೇಟರ್‌ನಲ್ಲಿ ಕುಣಿತ

Published : Jul 23, 2026, 11:40 AM IST
Jana Nayagan Movie Review

ಸಾರಾಂಶ

Thalapathy Vijay Jana Nayagan Movie Review: ನಟ ವಿಜಯ್ ಅವರ ಕೊನೆಯ ಸಿನಿಮಾ ಎನ್ನಲಾದ 'ಜನ ನಾಯಗನ್' ಇಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಟ್ವಿಟರ್‌ನಲ್ಲಿ ಏನಂತಿದ್ದಾರೆ? ಇಲ್ಲಿದೆ ನೋಡಿ ವಿಮರ್ಶೆ.

Thalapathy Vijay Jana Nayagan Movie Review: ಸಾಕಷ್ಟು ಸಮಸ್ಯೆಗಳಿಂದ ದಳಪತಿ ವಿಜಯ್‌ ಅವರ ಕೊನೆಯ ‘ಜನ ನಾಯಗನ್’‌ ಸಿನಿಮಾ ರಿಲೀಸ್‌ ಆಗಿರಲಿಲ್ಲ. ಈಗ ಈ ಸಿನಿಮಾ ರಿಲೀಸ್‌ ಆಗಿದೆ, ಅತ್ತ ದಳಪತಿ ವಿಜಯ್‌ ಅವರು ತಮಿಳುನಾಡಿನ ಸಿಎಂ ಆಗಿದ್ದಾರೆ. ಹಾಗಿದ್ದರೆ ಈ ಸಿನಿಮಾ ಹೇಗಿದೆ?

ಈ ಸಿನಿಮಾ ಹೇಗಿದೆ?

'ಜನ ನಾಯಗನ್' ಒಂದು ಅದ್ಭುತ ಅನುಭವ. ಚಿತ್ರದ ಅತಿದೊಡ್ಡ ಶಕ್ತಿ ಎಂದರೆ ಎಮೋಷನಲ್ ಕನೆಕ್ಟ್. ಅದರಲ್ಲೂ ಮಮಿತಾ ಬೈಜು ಮತ್ತು ವಿಜಯ್ ನಡುವಿನ ದೃಶ್ಯಗಳು ಅದ್ಭುತವಾಗಿವೆ. ಅನಿರುಧ್ ಅವರ ಹಿನ್ನೆಲೆ ಸಂಗೀತ ಮತ್ತು ಹಾಡುಗಳು ರೋಮಾಂಚನಗೊಳಿಸುತ್ತವೆ. ಇಂಟರ್‌ವೆಲ್ ದೃಶ್ಯವಂತೂ ಸಖತ್ ಆಗಿದೆ. ಬುಸ್ಸಿ ಆನಂದ್ ಅವರ ಅತಿಥಿ ಪಾತ್ರ ಅನಿರೀಕ್ಷಿತವಾಗಿತ್ತು. ದಳಪತಿ ವಿಜಯ್‌ಗೆ ಇದು ಅತ್ಯುತ್ತಮ ವಿದಾಯದ ಚಿತ್ರವಾಗಿದೆ. ಕ್ಲೈಮ್ಯಾಕ್ಸ್ ದೃಶ್ಯಗಳು ಸೂಪರ್. ಸಿನಿಮಾ ಮುಗಿದ ನಂತರ ಬರುವ ದೃಶ್ಯಗಳು ಥಿಯೇಟರ್ ಅನ್ನೇ ಮೌನವಾಗಿಸುತ್ತವೆ ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.

ಈ ಸಿನಿಮಾದಲ್ಲಿ ಏನಿದೆ? ಏನಿಲ್ಲ?

ಚಿತ್ರದ ಮೊದಲಾರ್ಧ ಮನರಂಜನೆಯಿಂದ ಕೂಡಿದ್ದರೆ, ದ್ವಿತೀಯಾರ್ಧ ಓಕೆ ಎನಿಸುತ್ತದೆ. ಮಮಿತಾ ಬೈಜು ಮತ್ತು ವಿಜಯ್ ನಡುವಿನ ಭಾವನಾತ್ಮಕ ಸಂಬಂಧ ಚೆನ್ನಾಗಿ ವರ್ಕೌಟ್ ಆಗಿದೆ. ಅನಿರುಧ್ ಸಂಗೀತ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್. ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಎರಡೂ ಚೆನ್ನಾಗಿವೆ. ಆದರೆ, ವಿಲನ್ ಬಾಬಿ ಡಿಯೋಲ್ ಪಾತ್ರವೇ ಚಿತ್ರದ ದೊಡ್ಡ ಹಿನ್ನಡೆ. ಅವರ ದೃಶ್ಯಗಳನ್ನು ಕಡಿಮೆ ಮಾಡಬಹುದಿತ್ತು. ಪ್ರಕಾಶ್ ರಾಜ್ ಪಾತ್ರಕ್ಕೆ ಉತ್ತಮ ಸ್ಕೋಪ್ ಇದೆ. ಟೈಟಲ್ ಕಾರ್ಡ್, ಇಂಟರ್‌ವೆಲ್, ಪೋಸ್ಟ್ ಕ್ರೆಡಿಟ್ ದೃಶ್ಯಗಳು ಇಷ್ಟವಾಗುತ್ತವೆ. ದಳಪತಿ ವಿಜಯ್ ಅಭಿಮಾನಿಗಳು ಚಿತ್ರಮಂದಿರದಲ್ಲಿ ನೋಡಲೇಬೇಕಾದ ಸಿನಿಮಾ ಇದು ಎಂದು ಮತ್ತೊಬ್ಬರು ವಿಮರ್ಶಿಸಿದ್ದಾರೆ.

'ಜನ ನಾಯಗನ್' ಒಂದು ಮಾಸ್ ಮಸಾಲಾ ಸಿನಿಮಾ. ಇದರಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ದಳಪತಿ ವಿಜಯ್ ಅವರ ಸ್ಕ್ರೀನ್ ಪ್ರೆಸೆನ್ಸ್ ಎದ್ದು ಕಾಣುತ್ತದೆ. ಚಿತ್ರದ ದ್ವಿತೀಯಾರ್ಧ ರಾಜಕೀಯ ಮತ್ತು ಆಕ್ಷನ್‌ನಿಂದ ಕೂಡಿದೆ. ವಿಜಯ್ ತಮ್ಮ ಅಭಿಮಾನಿಗಳಿಗೆ ಮತ್ತು ಕುಟುಂಬ ಪ್ರೇಕ್ಷಕರಿಗೆ ಬೇಕಾದ ಎಲ್ಲಾ ಅಂಶಗಳನ್ನು ಚಿತ್ರದಲ್ಲಿ ನೀಡಿದ್ದಾರೆ. ಮಾಸ್ ದೃಶ್ಯಗಳು ಮತ್ತು ರಾಜಕೀಯ ರೆಫರೆನ್ಸ್‌ಗಳು ಚಿತ್ರದಲ್ಲಿವೆ. ಮಮಿತಾ ಬೈಜು-ವಿಜಯ್ ನಡುವಿನ ದೃಶ್ಯಗಳು ಮತ್ತು 'ಗುಡ್ ಟಚ್, ಬ್ಯಾಡ್ ಟಚ್' ದೃಶ್ಯವು ಕುಟುಂಬ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಅನಿರುಧ್ ಸಂಗೀತವು ಚಿತ್ರಕ್ಕೆ ಆಧಾರಸ್ತಂಭವಾಗಿದೆ. ಫ್ಲ್ಯಾಶ್‌ಬ್ಯಾಕ್ ಪರಿಚಯ, 'ಒರು ಪೇರೇ ವರಲಾರು' ಹಾಡು, ಫಾರೆಸ್ಟ್ ಎಂಟ್ರಿ ದೃಶ್ಯಗಳು ದ್ವಿತೀಯಾರ್ಧದ ಹೈಲೈಟ್ಸ್. ಆದರೆ, ಬಾಬಿ ಡಿಯೋಲ್ ದೃಶ್ಯಗಳು ವರ್ಕ್ ಆಗಿಲ್ಲ, ಇದು ಚಿತ್ರದ ವೇಗವನ್ನು ಕಡಿಮೆ ಮಾಡುತ್ತದೆ. ಕೆಲವು ನ್ಯೂನತೆಗಳಿದ್ದರೂ, ಇದು ದಳಪತಿ ಅಭಿಮಾನಿಗಳನ್ನು ತೃಪ್ತಿಪಡಿಸುವ ಚಿತ್ರವಾಗಿದೆ ಎಂದು ವಿಮರ್ಶಿಸಲಾಗಿದೆ.

ಕೆಲವರು ನೆಗೆಟಿವ್‌ ಮಾತುಗಳನ್ನಾಡಿದ್ದಾರೆ

ಕೆಲವು ನೆಟ್ಟಿಗರು ಚಿತ್ರಕ್ಕೆ ನೆಗೆಟಿವ್ ವಿಮರ್ಶೆ ನೀಡಿದ್ದಾರೆ. 'ಜನ ನಾಯಗನ್' ವಿಜಯ್‌ಗೆ ಒಂದು ನೋವಿನ ವಿದಾಯ ನೀಡಿದೆ. ಕೆಲವು ಎಲಿವೇಶನ್ ದೃಶ್ಯಗಳು ಮತ್ತು ಅನಿರುಧ್ ಅವರ ಹಿನ್ನೆಲೆ ಸಂಗೀತವನ್ನು ಹೊರತುಪಡಿಸಿ ಬೇರೇನೂ ವರ್ಕ್ ಆಗಿಲ್ಲ. ಎಚ್. ವಿನೋತ್ ಅವರ ನಿರೂಪಣೆ ತುಂಬಾ ನಿಧಾನವಾಗಿದೆ. ಚಿತ್ರದಲ್ಲಿ ಅವರು ಮಾಡಿದ ಬದಲಾವಣೆಗಳು, ವಿಶೇಷವಾಗಿ ಉಪಕಥೆಗಳು ಹಳೆಯ ಫಾರ್ಮುಲಾದಂತಿವೆ. ಬಾಬಿ ಡಿಯೋಲ್ ಅವರ ವಿಲನ್ ಪಾತ್ರ ತೀರಾ ಕಳಪೆಯಾಗಿದೆ, ಕೆಲವು ಕಡೆ ನಗು ಬರಿಸುತ್ತದೆ. ವಿಎಫ್‌ಎಕ್ಸ್ ಮತ್ತು ಪ್ರೊಡಕ್ಷನ್ ಮೌಲ್ಯಗಳು ತುಂಬಾ ಸಾಧಾರಣವಾಗಿವೆ. 'ಭಗವಂತ್ ಕೇಸರಿ' ಚಿತ್ರದಲ್ಲಿರುವ ಪ್ರಮುಖ ಭಾವನಾತ್ಮಕ ದೃಶ್ಯಗಳು ಇಲ್ಲೂ ಇವೆ, ಆದರೆ ಕಥೆಯೊಂದಿಗೆ ಹೊಂದಿಕೆಯಾಗುವುದಿಲ್ಲ. ಕ್ಲೈಮ್ಯಾಕ್ಸ್ ನಿಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತದೆ. ಒಟ್ಟಾರೆಯಾಗಿ ಈ ಚಿತ್ರ ನಿರಾಸೆ ಮೂಡಿಸಿದೆ ಎಂದು ಒಬ್ಬರು ಬರೆದಿದ್ದಾರೆ.

ಒಟ್ಟಿನಲ್ಲಿ ಮಿಶ್ರ ಪ್ರತಿಕ್ರಿಯೆ!

ರಾಜಕೀಯ ಪ್ರವೇಶದ ಹಿನ್ನೆಲೆಯಲ್ಲಿ ನಟ ವಿಜಯ್ ನಟನೆಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಹೀಗಾಗಿ 'ಜನ ನಾಯಗನ್' ಅವರ ಕೊನೆಯ ಸಿನಿಮಾ ಎಂದು ಹೇಳಲಾಗುತ್ತಿದೆ. ಈ ಚಿತ್ರವು ವಿಜಯ್ ಅಭಿಮಾನಿಗಳಿಗೆ ಉತ್ತಮ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿದೆಯೇ ಅಥವಾ ನಿರಾಸೆ ಮೂಡಿಸಿದೆಯೇ ಎಂಬುದು ಪ್ರೇಕ್ಷಕರ ವಿಮರ್ಶೆಗಳಿಂದ ತಿಳಿಯುತ್ತಿದೆ. ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಕೆಲವರು ಇದೊಂದು ಅತ್ಯುತ್ತಮ ವಿದಾಯದ ಚಿತ್ರ ಎಂದರೆ, ಮತ್ತೆ ಕೆಲವರು ನಿರಾಸೆಯಾಗಿದೆ ಎಂದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ವಿದ್ಯಾರ್ಥಿಗಳಿಗೆ ಬೆಂಬಲವಿದೆ, ರಾಜಕೀಯವಾಗಿ ಇದನ್ನ ಹೈಜಾಕ್‌ ಮಾಡಬೇಡಿ..' ಜಂತರ್ ಮಂತರ್‌ ಪ್ರತಿಭಟನೆಗೆ ಸಲ್ಮಾನ್‌ ಖಾನ್‌ ಸಪೋರ್ಟ್‌
ಅಮೀರ್ ಮಗನ ಜೊತೆಗಿನ ಮೊದಲ ಸಿನಿಮಾ ಫ್ಲಾಪ್, ಈಗ ಭಾರತದ ದುಬಾರಿ ಸಿನಿಮಾ ನಾಯಕಿ! ಈ ಸೌತ್ ನಟಿ ಯಾರು?